Suttur Math; ‘ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದ ಕೀರ್ತಿ ಸುತ್ತೂರು ಮಠಕ್ಕೆ ಸಲ್ಲುತ್ತದೆ’

ದಾವಣಗೆರೆ, ಆ.30: ಧರ್ಮ ಸಮನ್ವಯ, ಕಾಯಕ ದಾಸೋಹ ಸೇವೆ, ಶಿಕ್ಷಣ ಪ್ರಸಾರ ಈ ಮೂರು ಮಹತ್ತುಗಳ ಮಹಾಮನೆಯಾಗುವುದರ ಜೊತೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದ ಕೀರ್ತಿ ಮೈಸೂರಿನ ಸುತ್ತೂರು ಮಠದ (Suttur Math) ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಬಸವ ಭಾರತಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಪ್ರಭಾಕರ್ ಲಕ್ಕೊಳ್ ಆವರು ನುಡಿದರು.

ಅವರು ಮಂಗಳವಾರ ಜಗಳೂರಿನಲ್ಲಿ ಶರಣ ಸಾಹಿತ್ಯ ಪರಿಷತ್ತು,ಕದಳಿ ಮಹಿಳಾ ವೇದಿಕೆ ಹಾಗೂ ದಿವ್ಯ ಭಾರತಿ ಪ್ರೌಢಶಾಲೆ ಸಹಯೋಗದಲ್ಲಿ ನಡೆದ ಸಂಸ್ಥಾಪಕ ದಿನಾಚರಣೆಯಲ್ಲಿ ಅನುಭಾವದ ನುಡಿಗಳನ್ನು ಆಡುತ್ತಿದ್ದರು. ಸ್ವಾಮೀಜಿಗಳ ಒಡನಾಟವನ್ನು ಮೆಲುಕು ಹಾಕಿದ ಲಕ್ಕೊಳ್ ರವರು ಬಸವಾದಿ ಶರಣರ ವಚನಗಳ ಪ್ರಸಾರ ಹಾಗೂ ಪ್ರಚಾರದಲ್ಲಿ ಸ್ವಾಮೀಜಿಗಳ ಸೇವೆಯನ್ನು ನಾವು ಮರೆಯಲಾಗದು ಎಂದು ಅವರು ಬಣ್ಣಿಸಿದರು.

Dr. M Chandrappa; ಸಾರ್ವಜನಿಕರ ಬದುಕೇ ನನ್ನ ಸ್ವಂತ ಬದುಕಾಗಿದೆ: ಡಾ.ಎಂ.ಚಂದ್ರಪ್ಪ

ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಶರಣರ ಚಿಂತನೆ ಮತ್ತು ಜೆ.ಎಂ.ಇಮಾಂ ವಿಷಯ ಕುರಿತು ಸಾಹಿತಿ ಎನ್ ಟಿ ಎರ್ರಿಸ್ವಾಮಿ ಅವರು ದತ್ತಿ ಉಪನ್ಯಾಸವನ್ನು ನೀಡಿದರು. ಜೆ.ಎಂ. ಇಮಾಮ್ ರವರು ಹುಟ್ಟಿನಿಂದ ಮುಸ್ಲಿಮರಾದರೂ ಬದುಕಿನಿಂದ ಭಾರತೀಯರು. ಅವರು ಜಾತಿಯ ಸೋಂಕಿಲ್ಲದ ವ್ಯಕ್ತಿ. ಧರ್ಮವನ್ನು ಮೀರಿದ ಹೃದಯವಂತ. ಭಕ್ತಿಯಲ್ಲಿ ಹನುಮಂತ , ಭಾವೈಕ್ಯತೆಯಲ್ಲಿ ಧೀಮಂತ.ಮೈಸೂರು ಸಂಸ್ಥಾನದ ಆಡಳಿತದಲ್ಲಿ ಮಂತ್ರಿಯಾಗಿ. ವಿಧಾನಸಭೆ ,ಲೋಕಸಭೆಯ ಹಿರಿಯ ಸದಸ್ಯರಾಗಿ ,ಹಂಗಾಮಿ ದಿವಾನರು, ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಅವರು ಸರಳ, ಸಜ್ಜನಿಕೆಯ, ಸಂಪನ್ನ, ಸಚ್ಚಾರಿತ್ರದ ವ್ಯಕ್ತಿಯಾಗಿ ಬದುಕಿದವರು ಅವರ ಬದುಕು ಇಂದಿನ ಪೀಳಿಗೆಗೆ ಆದರ್ಶಪ್ರಾಯ ಎಂದು ಹೇಳಿದರು.

ನಾಲಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ .ತಿಪ್ಪೇಸ್ವಾಮಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸರ್ವರಿಗೂ ಸಮಪಾಲು, ಸರ್ವರಿಗೆ ಸಮಬಾಳು ಎಂದು ಚಿಂತಿಸಿದ ಶರಣರ ಆದರ್ಶಗಳ ಬೆಳಕಿನಲ್ಲಿ ಬಾಳಿದವರು ಜೆ.ಎಂ. ಇಮಾಂ ರವರು. ಅವರು ಆಕಾರದಲ್ಲಿ ಮಾತ್ರವಲ್ಲ, ವ್ಯಕ್ತಿತ್ವದಲ್ಲಿಯೂ ಎತ್ತರವಾದ ವ್ಯಕ್ತಿ ಎಂದು ವಿವರಿಸಿದರು.

Hostel; ಜಿಲ್ಲೆಯಲ್ಲಿ 21,642ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ವಸತಿ ಸೌಲಭ್ಯ

ನಾಲಂದ ಕಾಲೇಜಿನ ಉಪನ್ಯಾಸಕ ಬಿ. ಎನ್. ಎಂ ಸ್ವಾಮಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ನಡು ಕರ್ನಾಟಕದ ಭಾಗದಲ್ಲಿ ಜಗಳೂರಿನ ಡಾ. ಟಿ ತಿಪ್ಪೇಸ್ವಾಮಿಯವರು ಶರಣ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಪರಿಯನ್ನು ಹಂಚಿಕೊಂಡರು.

ದಿವ್ಯ ಭಾರತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಿ ಬಿ ಬಾಲರಾಜುರವರು ಅಧ್ಯಕ್ಷತೆಯನ್ನು ವಹಿಸಿ ಇಂದಿನ ಪೀಳಿಗೆಗೆ ವಚನ ಸಾಹಿತ್ಯದ ಸಾರವನ್ನು ಉಣಬಡಿಸುವ ಅಗತ್ಯತೆಯನ್ನು ವಿವರಿಸಿದರು.

bjp; ಬಿಜೆಪಿ ಬಿಟ್ಟು ನಾನು ಹೋಗೋದಿಲ್ಲ, ಲೋಕಸಭೆಗೆ ಆಕಾಂಕ್ಷಿ

ವೇದಿಕೆಯಲ್ಲಿ ದತ್ತಿದಾನಿಗಳಾದ ಜೆ .ಕೆ .ಹುಸೇನ್ ಮಿಯಾ ಸಾಬ್’ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಜೆ .ಆರ್ . ಗೌರಮ್ಮ, ನಿವೃತ್ತ ಉಪನ್ಯಾಸಕ ಡಿ. ಸಿ ಮಲ್ಲಿಕಾರ್ಜುನ, ಪತ್ರಕರ್ತರಾದ ಮರೆನಹಳ್ಳಿ ಬಾಬು, ಪರಿಷತ್ತಿನ ಲೀಲಾವತಿ,ರೇವತಿ, ನಾಗರತ್ನ, ಮಂಜುನಾಥ್, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!