ಭಾರತ್ ಸ್ಕೌಟ್ಸ್  ಮತ್ತು ಗೈಡ್ಸ್ ವತಿಯಿಂದ ಹರಿಹರದ ಹೊಳೆ ಸ್ವಚ್ಚತೆ

ದಾವಣಗೆರೆ; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ ಹರಿಹರ ಸ್ಥಳಿಯ ಸಂಸ್ಥೆಯ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುರೇಶ್ GS ರೋವರ್ ಸ್ಕೌಟ್ ಲೀಡರ್ ರವರ ಮಾರ್ಗದರ್ಶನದಲ್ಲಿ SDGS goal  no 6 ಶುದ್ಧ ನೀರು ಮತ್ತು ನೈರ್ಮಲ್ಯ ಎಂಬುದರ ಕುರಿತು  ವಿಜಯ್ ಕುಮಾರ್ ರವರ ನಾಯಕತ್ವದಲ್ಲಿ ತುಂಗಭದ್ರ ನದಿಯ ಸ್ವಚ್ಛತಾ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಆಯೋಜಿಸಲಾಯಿತು.

 

ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ವಿದ್ಯಾರ್ಥಿಗಳು ಬೆಳಗ್ಗೆ 7:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹರಿಹರದ ತುಂಗಭದ್ರಾ ನದಿಯ  ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರಿರುವ ನದಿಯ ತೀರದಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಬಟ್ಟೆ, ಸೀರೆ, ಪೇಪರ್  ಮತ್ತು  ಅಡಕೆ ತಟ್ಟೆಗಳು. ಮದ್ಯಾಪಾನ ಬಾಟಲೆಗಳು, ಹಳೆಯ ಹಾಸಿಗೆ ಎಲ್ಲವನ್ನು ಸ್ವಚ್ಛಗೊಳಿಸುವ ಮೂಲಕ ಸೇವೆಗೆ ಸದಾ ಸಿದ್ಧ ಎಂಬ ಸಂದೇಶವನ್ನು ಸಾರಿದರು

ಡಾ, ದಾಕ್ಷಾಯಿಣಿ ರೇಂಜರ್ ಲೀಡರ್ ಮತ್ತು ಡಾ ಗೌರಮ್ಮ ರವರು ಮಕ್ಕಳೊಂದಿಗೆ ಸೇವೆಯನ್ನು ಮಾಡಿದರು.  ಸ್ಥಳೀಯ  ಸಂಸ್ಥೆ ಕಾರ್ಯದರ್ಶಿ ಪ್ರಭಾಕರ್, ಹಾಗೂ ಸಹಾಯಕ ಜಿಲ್ಲಾ ಆಯುಕ್ತರಾದ ಎನ್. ಕೆ.ಕೊಟ್ರೇಶ್, ಎಸ್. ಜಿ. ವಿ ಅಶ್ವಿನಿಯವರು ವಿದ್ಯಾರ್ಥಿಗಳಿಗೆ ಸೇವೆಯ ಮಹತ್ವವನ್ನು ತಿಳಿಸಿದರು . ಹರಿಹರ  ತಾಲೂಕು ಔಷದ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳಿಗೆ ಬಂದು ಪ್ರೋತ್ಸಾಹಿಸಿ ಉಪಹಾರದ ವ್ಯವಸ್ಥೆಯನ್ನು ಮಾಡಿದರು.   ಯುವ ಬ್ರಿಗೇಡ್ ಸಂಚಾಲಕರಾದ ಕೆ. ಎಸ್.ಗಜೇಂದ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!