co operative society; ಸಹಕಾರಿ ಕ್ಷೇತ್ರವೇ ನನ್ನ ಜೀವನ: ಜೆ.ಆರ್.ಷಣ್ಮುಖಪ್ಪ

ದಾವಣಗೆರೆ, ಸೆ. 06: ನಾನು ಸಹಕಾರಿ ಕ್ಷೇತ್ರದಿಂದ (co operative society) ಬಂದವನು, ಸಹಕಾರಿ ಕ್ಷೇತ್ರವೇ ನನ್ನ ಜೀವನವಾಗಿದ್ದು, ಚಿತ್ರದುರ್ಗದ ಹಿರಿಯ ಸಹಕಾರಿ ಧುರೀಣರಾದ ಶರಣ ಎಂ.ಗಂಗಾಧರಯ್ಯ ನನಗೆ ನೆಚ್ಚಿನ ಗುರು ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜೆ.ಆರ್.ಷಣ್ಮುಖಪ್ಪ ಅಭಿಪ್ರಾಯಪಟ್ಟರು.

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಪಾಟೀಲರು ಬುನಾದಿ ಹಾಕಿದ್ದು, ಸಮಾನ ಮನಸ್ಕ ರೈತರನ್ನು ಅಂದು ಒಗ್ಗೂಡಿಸಿದ್ದರು. ಇಂದು ಅವರ ತತ್ವದಡಿ ಕೆಲಸ ಮಾಡಲಾಗುತ್ತಿದೆ. ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ. ಇದು ಸಹಕಾರ ತತ್ವದ ಮುಖ್ಯ ಸಂದೇಶವಾಗಿದ್ದು ಇಂತಹ ಶ್ರೇಷ್ಠ ತತ್ವದ ಬುನಾದಿಯ ಮೇಲೆ ಕಟ್ಟಿರುವುದು ಈ ಸಹಕಾರ ಕ್ಷೇತ್ರ. ಪರಸ್ಪರ ಸಹಕಾರ, ನಂಬಿಕೆ ಅಮೂಲ್ಯ ತತ್ವಗಳ ಬುನಾದಿ ಮೇಲೆ ಅಸ್ತಿತ್ವಕ್ಕೆ ಬಂದ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್‌ಗಳು ನಂಬಿಕೆ ಮೇಲೆ ನಡೆಯುತ್ತಿದ್ದು, ಅದನ್ನು ಈಗಲೂ ಉಳಿಸಿಕೊಂಡಿದ್ದೇವೆ. ಯಾವುದೇ ಒಂದು ಸಹಕಾರ ಸಂಸ್ಥೆ ಅಸ್ತಿತ್ವಕ್ಕೆ ಬರಲು ಮೊದಲು ಸಹಕಾರ ಮನೋಭಾವದ ಸಮಾನ ಮನಸ್ಕರು ಅಗತ್ಯವಿದೆ ಎನ್ನುತ್ತಾರೆ ಜೆ.ಆರ್.ಷಣ್ಮುಖಪ್ಪ.

Bhadra water; ಭದ್ರಾ ನೀರಿಗಾಗಿ ಎರಡು ಜಿಲ್ಲೆಯಲ್ಲಿ ರೈತರ ಹೋರಾಟ

ಜೆ.ಆರ್.ಷಣ್ಮುಖಪ್ಪ ಬದುಕು

ನಾನು ಚನ್ನಗಿರಿಯ ಮಲಹಾಳ್ ಗ್ರಾಮದ ರೈತ ಕುಟುಂಬದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಜಂತಿಕೊಳಲು ರೇವಪ್ಪ ಮತ್ತು ಗೌರಮ್ಮನವರ ಜೇಷ್ಠ ಪುತ್ರನಾಗಿ 1948 ರ ಏಪ್ರಿಲ್ 30ರಂದು ಜನಿಸಿದೆ. 1978 ರಲ್ಲಿ ಮಲಹಾಳ್ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದೇಘಿ. 1984ರಲ್ಲಿ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟೇಘಿ. 1992 ಮತ್ತು 1998 ರಲ್ಲಿ ಎರಡು ಬಾರಿ ಚಿತ್ರದುರ್ಗ ಡಿಸಿಸಿ ಬ್ಯಾಂಕಿನ ಅಧ್ಯಕ್ಷನಾದೆ.

1998ರಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕರಾಗಿ ಮತ್ತು 2016 ರಿಂದ 2021ರವರೆಗೆ ಪುನಃ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕರಾಗಿ ಆಯ್ಕೆಯಾಗಿದ್ದೇನೆ. 2018ರಿಂದ 2020ರವರೆಗೆ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಮತ್ತು 2013ರಿಂದ ಇಂದಿನವರೆಗೆ ದಾವಣಗೆರೆ ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದೇನೆ. 2022ರಲ್ಲಿ ಕರ್ನಾಟಕ ರಾಜ್ಯ ಸರಕಾರ ನೀಡುವ ’’ಸಹಕಾರ ರತ್ನ’’ ಪ್ರಶಸ್ತಿ ಪುರಸ್ಕಾರ ಪಡೆದು ಇಂದಿಗೂ ಸಹಕಾರ ತತ್ವದಡಿಕೆಲಸ ಮಾಡುತ್ತಿದ್ದೇನೆ.

ದಾವಣಗೆರೆಗೆ ಏನಾದರೂ ಕೊಡುಗೆ ಕೊಡಬೇಕೆಂದಿದ್ದು, ಪ್ರತ್ಯೇಕ ಹಾಲಿನ ಒಕ್ಕೂಟ ಸ್ಥಾಪನೆ ಮಾಡಲು ಪಣತೊಟ್ಟಿದ್ದುಘಿ, ಇದಕ್ಕಾಗಿ ಹಗಲಿರುಳು ಹೋರಾಟ ಮಾಡುವ ಮೂಲಕ ಈ ಭಾಗದ ರೈತರ ಏಳ್ಗೆಗೆ ಶ್ರಮಿಸುತ್ತೇನೆ ಎನ್ನುತ್ತಾರೆ ಜೆಆರ್ಎಸ್.

Leave a Reply

Your email address will not be published. Required fields are marked *

error: Content is protected !!