ಮೇ 28ಕ್ಕೆ ಕಾಮೆಡ್ – ಕೆ ಪರೀಕ್ಷೆ

ಮೇ 28ಕ್ಕೆ ಕಾಮೆಡ್ - ಕೆ ಪರೀಕ್ಷೆ

ಬೆಂಗಳೂರು: ‘ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ)’ ಮೇ 28ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

ಪರೀಕ್ಷೆಗೆ ಸುಮಾರು ಒಂದು ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಹೊಂದಿರುವುದಾಗಿ ಪರೀಕ್ಷಾ ನಿರ್ವಹಣಾ ಸಂಸ್ಥೆ ಹೇಳಿದೆ.

150 ಖಾಸಗಿ ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿ ಕೋಟಾದ ಸೀಟುಗಳ ಪ್ರವೇಶಕ್ಕಾಗಿ ದೇಶದ 150ಕ್ಕೂ ಹೆಚ್ಚು ನಗರಗಳ 400 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಏ. 24 ಕೊನೆಯ ದಿನವಾಗಿದ್ದು, ಪ್ರವೇಶ ಬಯಸುವ ಅಭ್ಯರ್ಥಿಗಳು www.comedk.org, www.unigauge.com ಸಂಪರ್ಕಿಸಬಹುದಾಗಿದೆ.

ಈ ವರ್ಷದಿಂದ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳ ಕಲಿಕೆ ಜತೆಗೆ ಕೌಶಲ ತರಬೇತಿ ನೀಡಲಾಗುವುದು. ಅದಕ್ಕಾಗಿ ಬೆಂಗಳೂರಿನಲ್ಲಿ ನಾಲ್ಕು, ಮೈಸೂರು, ಕಲಬುರಗಿ, ಮಂಗಳೂರು ಹಾಗೂ ಬೆಳಗಾವಿಯಲ್ಲಿ ಎಂಟು ‘ಇನ್ನೋವೇಶನ್ ಹಬ್‌’ ಸ್ಥಾಪಿಸಲಾಗಿದೆ ಎಂದು ಕಾಮೆಡ್‌–ಕೆ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

error: Content is protected !!