ಫೇಸ್‌ಬುಕ್‌ನಲ್ಲಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಪೋಸ್ಟ್ ಮಾಡಿದ ಡಿ.ರೂಪಾ

ಫೇಸ್‌ಬುಕ್‌ನಲ್ಲಿ ರೋಹಿಣಿ ಸಿಂಧೂರಿ

ಬೆಂಗಳೂರು: ಭಾನುವಾರ ಬೆಳಿಗ್ಗೆಯಷ್ಟೇ ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳು ಪಟ್ಟಿ ಮಾಡಿದ್ದ ಡಿ.ರೂಪಾ ಅವರು, ಇದೀಗ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ರೋಹಿಣಿ ಸಿಂಧೂರಿಯಾ ಖಾಸಗಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

‘ಈ ರೀತಿಯ ಪಿಕ್ಚರ್ಸ್ ನಾರ್ಮಲ್ ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಫಿಕ್ಸ್‌ಗಳ ಒನ್‌ ಟು ಒನ್ ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಇದು ಆಕೆಯ ಪ್ರೈವೆಟ್ ಮ್ಯಾಟರ್ ಆಗುವುದಿಲ್ಲ. ಐಎಎಸ್ ಸರ್ವಿಸ್ ಕಂಡಕ್ಟ್ ರೂಲ್ಸ್ ಪ್ರಕಾರ ಅಪರಾಧ. ಈ ಪಿಕ್ಸ್ ಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ ತನಿಖೆ ಮಾಡಬಹುದು. ಸಲೂನ್ ಹೇರ್‌ಕಟ್ ಚಿತ್ರ, ತಲೆದಿಂಬು ಇಟ್ಟು ಮಲಗಿ ತೆಗೆದಿರುವ ಚಿತ್ರ ನಾರ್ಮಲ್ ಅನ್ನಿಸಬಹುದು ಕೆಲವರಿಗೆ. ಕಳಿಸಿರುವ ಸನ್ನಿವೇಶ speaks otherwise’

ಎಂದು ರೂಪಾ ಅವರು ತಮ್ಮ ಪೋಸ್ಟ್‌ನಲ್ಲಿ ಫೋಟೋಗಳ ಜೊತೆ ಬರೆದುಕೊಂಡಿದ್ದಾರೆ. ರೋಹಿಣಿ ಸಿಂಧೂರಿ ಪುರುಷ ಅಧಿಕಾರಿಗಳಿಗೆ ಈ ಚಿತ್ರಗಳನ್ನು ಕಳಿಸಿರಬಹುದು ಈ ಬಗ್ಗೆ ತನಿಖೆ ಆಗಬೇಕು ಎಂಬ ಅರ್ಥದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!