ಅರ್ಥಶಾಸ್ತ್ರ ವಿದ್ಯಾರ್ಥಿಗಳಿಂದ ನಿವೃತ್ತಿ ಹೊಂದಿದ  ಪ್ರೊ.ಭೀಮಣ್ಣ ಸುಣಗಾರ್ ರಿಗೆ  ಬೀಳ್ಕೊಡುಗೆ ಸಮಾರಂಭ

ಅರ್ಥಶಾಸ್ತ್ರ, ವಿದ್ಯಾರ್ಥಿ, ನಿವೃತ್ತಿ,  ಪ್ರೊ.ಭೀಮಣ್ಣ ಸುಣಗಾರ್,  ಬೀಳ್ಕೊಡುಗೆ, ಸಮಾರಂಭ,

ದಾವಣಗೆರೆ;  ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ 2009 ರಿಂದ ಇಲ್ಲಿಯವರೆಗೆ ಸುಮಾರು 15 ವರ್ಷಗಳ ಕಾಲ ಅರ್ಥಶಾಸ್ತ್ರ ಅಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ.

ಅಪಾರ ವಿದ್ಯಾರ್ಥಿ ಬಳಗ ಹೊಂದಿರುವ ಪ್ರೊ.ಭೀಮಣ್ಣ ಸುಣಗಾರ್ ಅವರು ವಯೋಸಹಜ ನಿವೃತ್ತಿಯನ್ನು ಹೊಂದಿದ್ದರಿಂದ ಅರ್ಥಶಾಸ್ತ್ರ ವಿಭಾಗ ಮತ್ತು ಅರ್ಥಶಾಸ್ತ್ರ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಭಾರ ಪ್ರಾಂಶುಪಾಲರಾದ ಡಾ.ಟಿ.ಮಂಜಣ್ಣ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ  ಎಲ್ಲಾ ಗಣ್ಯರುಗಳು  ಸೇರಿ ಉದ್ಘಾಟನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅರ್ಥಶಾಸ್ತ್ರ, ವಿದ್ಯಾರ್ಥಿ, ನಿವೃತ್ತಿ,  ಪ್ರೊ.ಭೀಮಣ್ಣ ಸುಣಗಾರ್,  ಬೀಳ್ಕೊಡುಗೆ, ಸಮಾರಂಭ,

ಪ್ರಾಂಶುಪಾಲ ಡಾ ಮಂಜಣ್ಣ ಮಾತನಾಡುತ್ತ ಸುಣಗಾರರವರು ಇಲ್ಲಿವರೆಗೆ ಮಾಡಿದ ಸಾದನೆಯಿಂದ ಅವರನ್ನು ಇಡಿ ರಾಜ್ಯವೆ ಗುರುತಿಸುವಂತಾಗಿದೆ ಹೆಳಿದರು.ಇನ್ನೊರ್ವ ಅತಿಥಿ ಪತ್ರಾಂಕಿತ ವ್ಯವಸ್ಥಾಪಕರಾದ ಗೀತಾದೇವಿಯವರು ಸುಣಗಾರವರ ಬಗ್ಗೆ ವರ್ಣರಂಜಿತವಾಗಿ ಮಾತನಾಡಿದರು .ನಂತರ ಅರ್ಥಶಾಸ್ತ್ರ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಾಂತಕುಮಾರಿ.ಕೆ.ಹೆಚ್.ಜಿ  ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹಾಗೂ ಇನ್ನೋರ್ವ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ರವಿಕುಮರ್ ರವರು ಅವರೊಂದಿಗಿನ ಬಾಂಧವ್ಯವನ್ನು ಹಂಚಿಕೊಂಡರು, ಮತ್ತು ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕರಾದ ಗೀತಾದೇವಿ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಸಿದ್ಧಪ್ಪ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ನಂತರ ಅರ್ಥಶಾಸ್ತ್ರ ವಿಭಾಗದಿಂದ ಮತ್ತು ಅರ್ಥಶಾಸ್ತ್ರ ವಿದ್ಯಾರ್ಥಿಗಳಿಂದ ಪ್ರೊ.ಭೀಮಣ್ಣ ಸುಣಗಾರ್ ರವರಿಗೆ ಸನ್ಮಾನ ಮಾಡಲಾಯಿತು. ನಂತರ ಅವರು ತಮ್ಮ ಇಷ್ಟು ವರ್ಷದಲ್ಲಾದ   ಅನುಭವವನ್ನು ಹಂಚಿಕೊಂಡರು. ಮತ್ತು ಅಧ್ಯಕ್ಷರಾದ ಪ್ರೊ.ಮಂಜಣ್ಣ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇಲ್ಲಿಗೆ ಕಾರ್ಯಕ್ರಮವನ್ನು ಅಂತ್ಯಗೊಳಿಸಿ ಎಲ್ಲರೂ ಮಧ್ಯಾಹ್ನನದ ಉಪಹಾರವನ್ನು ಸೇವಿಸಿದರು ಹೀಗೆ ಕಾರ್ಯಕ್ರಮವನ್ನು ಅಂತ್ಯತ ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ನೆರವೇರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!