congress; ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಮಾಡ್ತಾ ಇದಾರೆ: ಶಾಸಕ ರವಿ ಗಾಣಿಗ ಆರೋಪ
ದಾವಣಗೆರೆ, ಅ.27: ಕಾಂಗ್ರೆಸ್ (congress) ಶಾಸಕರಿಗೆ 50 ಕೋಟಿ ಆಫರ್ ಮಾಡ್ತಾ ಇದಾರೆ, ನಾವು ಸ್ಪೆಷಲ್ ಫ್ಲೈಟ್ ನಲ್ಲಿ ದೆಹಲಿಗೆ ಕಳಿಸುತ್ತೇವೆಂದು ಆಮಿಷ ಒಡ್ಡುತ್ತಿದ್ದಾರೆ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಾಣಿಗ ಆರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾರು ಕಾಂಗ್ರೆಸ್ ಜೆಡಿಎಸ್ ನನ್ನು ತೆಗೆದ್ರೋ ಆ ಟೀಂ ಮತ್ತೆ ವರ್ಕ್ ಮಾಡ್ತಾ ಇದೆ. ಅ ಗ್ಯಾಂಗ್ ನಲ್ಲಿ ಯಡಿಯೂರಪ್ಪ ಪಿಎ ಆಗಿದ್ದ ಸಂತೋಷ್ ಕೂಡ ಇದ್ದಾರೆ ಎಂದು ಹೇಳಿದರು.
ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನಮ್ಮ ಶಾಸಕರನ್ನ ಸಂತೋಷ ಮೀಟ್ ಆಗಿದ್ದಾನೆ. ಬೆಳಗ್ಗೆ ರೆಡಿಯಾಗಿ ಕಾಂಗ್ರೆಸ್ (congress) ಶಾಸಕರ ಮನೆಗೆ ಹೋಗುತ್ತಾರೆ. ಸ್ಪೆಷಲ್ ಫ್ಲೈಟ್ ಮಾಡ್ತಿವಿ, ಅಮಿತ್ ಷಾ ರನ್ನು ಮೀಟ್ ಮಾಡಿಸ್ತಿವಿ 50 ಕೋಟಿ ಅಮೌಂಟ್ ಕೊಡ್ತಿವಿ ಅಂತ ಹೇಳಿ ಆಮಿಷ ಒಡ್ಡುತ್ತಾರೆ.
ಯಾರು ಓಡಾಡುತ್ತಿದ್ದಾರೆ ಅವರ ವೀಡಿಯೋ ಇದೆ. ಕೆಲವೇ ದಿನಗಳಲ್ಲಿ ಅದನ್ನು ಬಿಡುಗಡೆ ಮಾಡ್ತಿವಿ. ನಮ್ಮ ಪ್ರಾಮಾಣಿಕ ಶಾಸಕರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಅವರ ಅಮೀಷಕ್ಕೆ ನಮ್ಮವರು ಬಲಿಯಾಗಿಲ್ಲ. ನಾಲ್ಕು ದಿಕ್ಕುಗಳಿಂದ ಆಪರೇಷನ್ ಶುರುವಾಗಿದೆ. ಬಿಜೆಪಿಯವರು ಅವರಾಗಿ ಅವರೇ ಬರುತ್ತಿದ್ದಾರೆ ನಾವ್ಯಾರು ಕರೆದಿಲ್ಲ. ನಮಗೆ ಬೇರೆ ಶಾಸಕರ ಅವಶ್ಯಕತೆ ಇಲ್ಲ ಎಂದು ಹೇಳಿದರು.
bjp; ಬಿಜೆಪಿ ಸ್ವಂತ ಶಕ್ತಿ ಮೇಲೆ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ: ಶಾಸಕ
ಫಿಲ್ಮ್ ಡೈಲಾಗ್ ಹೊಡಿತಾನೇ ಇರ್ತಾರೆ
ಬೆಳಗಾವಿಯಿಂದಲೇ ಕಾಂಗ್ರೆಸ್ ಪತನವಾಗುತ್ತೆ ಎಂಬ ಶಾಸಕ ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುನಿರತ್ನ ರವರು ಫಿಲ್ಮ್ ತಗೀತಾರಲ್ಲ ಅದಕ್ಕೆ ಅವಾಗವಾಗ ಅ ಡೈಲಾಗ್ ಹೊಡಿತಾರೆ. ಫಿಲ್ಮ್ ಡೈಲಾಗ್ ಹೊಡಿತಾನೇ ಇರ್ತಾರೆ ಎಂದು ವ್ಯಂಗ್ಯವಾಡಿದರು.
ಕಾನೂನು ಎಲ್ಲರಿಗೂ ಒಂದೇ
ಹುಲಿ ಉಗುರು ಹಾಕಿಕೊಂಡಿದ್ದಕ್ಕಾಗಿ ಅಮಾಯಕ ರೈತನನ್ನು ಬಂಧನ ಮಾಡಿದ ಹಾಗೆ ಇಲ್ಲಿಯವರೆಗೂ ಯಾರು ಯಾರು ಹುಲಿ ಉಗುರು ಧರಿಸಿಕೊಂಡಿದ್ದಾರೋ ಅವರೆಲ್ಲರಿಗೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ಅವರನ್ನು ಬಂಧಿಸಬೇಕು ಎಂದು ಪ್ರತಿಕ್ರಿಯಿಸಿದರು.
ಕಾನೂನು ಎಲ್ಲರಿಗೂ ಒಂದೇ. ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಮತ್ತೊಂದು ಎಂಬುದಾಗಿ ಎಲ್ಲಿಯೂ ಇಲ್ಲ. ರೈತಾಪಿ ವರ್ಗದವನಾದ ಸಂತೋಷ್ ಶೋಕಿಗಾಗಿ ಹುಲಿ ಉಂಗುರು ಅನ್ನು ಧರಿಸಿಕೊಳ್ಳುತ್ತಿದ್ದ. ಬಿಗ್’ಬಾಸ್ ಮನೆಗೆ ಹೋಗಿ ರಿಯಾಲಿಟಿ ಶೋ ಎಂಬುದನ್ನು ನೋಡದೆ ಲಕ್ಷಾಂತರ ಜನರ ಮುಂದೆ ಬಂಧಿಸಿದ ಹಾಗೆ, ಹುಲಿ ಉಗುರು ಧರಿಸಿದ ಎಲ್ಲಾರನ್ನೂ ಕೂಡಲೇ ಬಂಧಿಸಬೇಕು ಎಂದು ತಿಳಿಸಿದರು.
bescom; ರೈತರಿಗೆ ಕೃಷಿಗಾಗಿ ದಿನದಲ್ಲಿ 5 ಗಂಟೆ ವಿದ್ಯುತ್ ಸರಬರಾಜು – ಇಂಜಿನಿಯರ್ ಬಿ.ಎಸ್.ಜಗದೀಶ್
ನಮ್ಮ ದೇಶದಲ್ಲಿ ಕಾನೂನು ಎಲ್ಲಾರಿಗೂ ಒಂದೇ. ಆದರೆ ಸೆಲೆಬ್ರಿಟಿಗೆ ಒಂದು ಕಾನೂನು ಸಾಮಾನ್ಯನಿಗೆ ಒಂದು ಕಾನೂನು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?! ಎಲ್ಲಾರಿಗೂ ನೋಟೀಸ್ ಕೊಡುವ ಬದಲು ಕೂಡಲೇ ಅರೆಸ್ಟ್ ಮಾಡಿ ಎಂದು ಕಿಡಿಕಾರಿದರು.