ಕಾಂಗ್ರೆಸ್ ರಿವರ್ಸ್ ಆಪರೇಷನ್: ಬಿಜೆಪಿಯ ವಾಗೀಶ್ ಸ್ವಾಮಿ ಕಾಂಗ್ರೆಸ್ ಸೇರ್ಪಡೆ

ದಾವಣಗೆರೆ: ದಾವಣಗೆರೆ ಲೋಕಸಭಾ ಚುನಾವಣಾ ಕಣಾ ಬಿಸಿಲು ಏರಿದಂತೆ ರಂಗೇರುತ್ತಾ ಇದ್ದು,, ಕಾಂಗ್ರೆಸ್ ನಾಯಕ, ಮಲ್ಲಿಕಾರ್ಜುನ್ ಆಪ್ತ ಶಿವನಹಳ್ಳಿ ರಮೇಶ್ ಬಿಜೆಪಿಗೆ ಸೇರಿದರೆ, ಪಕ್ಕಾ ಕಾಂಗ್ರೆಸ್ ವಿರೋಧಿ, ಹಿಂದುತ್ವವಾದಿ ಮಲೆಬೆನ್ನೂರಿನ ವಾಗೀಶ್ ಸ್ವಾಮಿ ಕಾಂಗ್ರೆಸ್ ಗೆ ಸೇರಲಿದ್ದಾರೆ.

ವಾಗೀಶ್ ಸ್ವಾಮಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನಾಗಿದ್ದು, ಜಿಲ್ಲಾ ಪಂಚಾಯಿತಿಯಲ್ಲಿ ಸ್ವತಃ ಸಚಿವರು ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದರು. ಪಕ್ಕ ಹಿಂದುತ್ವವಾದಿ, ಆರ್ ಎಸ್ ಎಸ್ ಭಕ್ತ. ಅಲ್ಲದೇ ಮಾಯಕೊಂಡದಲ್ಲಿ ಬೇಡ ಜಂಗಮದ ಎಸ್ಟಿ ಮೀಸಲಾತಿಯಡಿಯಲ್ಲಿ ಕಾಂಗ್ರೆಸ್ ಗೆ ಭಾರೀ ಪೈಪೋಟಿ ಕೊಟ್ಟು ಸೋತಿದ್ದರು.

ವಿಧಾನಸಭೆ ಚುನಾವಣೆ ಸೋತ ಬಳಿಕ ಜತೆ ವಾಗೀಶ್ ಸ್ವಾಮಿ ಬಿಜೆಪಿಯಲ್ಲಿ ಕಾಣಿಸಿಕೊಂಡಿರಲಿಲ್ಲ ಹಾಗೂ ವಾಗೀಶ್ ಸ್ವಾಮಿ ಹುಟ್ಟು ಹಬ್ಬದ ದಿನ ಶಾಮನೂರು, ಎಸ್.ಎಸ್.ಮಲ್ಲಿಕಾರ್ಜುನ್ ಮಹಾನ್‌ ಕಾಂಗ್ರೇಸ್‌ ನಾಯಕರ ಪೋಟೋ ಹಾಕಿ ಜಾಹೀರಾತು ನೀಡಲಾಗಿತ್ತು. ಆಗಲೇ ವಾಗೀಶ್ ಸ್ವಾಮಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು.

ವಾಗೀಶ್ ಸ್ವಾಮಿ ಅವರು ಹಿಂದೂ ಭಕ್ತರಾಗಿದ್ದು, ಹಣೆಯಲ್ಲಿ ತಿಲಕ, ಕತ್ತಿಗೆ ಕೇಸರಿ ಶಾಲು ಕಾಯಂ. ಮಲೆಬೆನ್ನೂರಿನಲ್ಲಿ ನಡೆಯುವ ಹಿಂದೂ ಹೋರಾಟಕ್ಕೆ ವಾಗೀಶ್ ಸ್ವಾಮಿಯೇ ನೇತೃತ್ವವಹಿಸಿಕೊಳ್ಳುತ್ತಿದ್ದರು. ಹೀಗಿರುವಾಗ ಕಾಂಗ್ರೆಸ್ ಗೆ ಯಾಕೆ ಸೇರುತ್ತಾರೆ ಎಂಬುದ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

Leave a Reply

Your email address will not be published. Required fields are marked *

error: Content is protected !!