ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯ- ಜಿ.ಪಂ. ಸಿಇಒ ದಿವಾಕರ್ ಎಂ.ಎಸ್

ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯ

ಚಿತ್ರದುರ್ಗ: ರೈತರ ಆದಾಯದಲ್ಲಿ ಕೃಷಿಯ ಜೊತೆಗೆಚಿತ್ರದುರ್ಗ: ರೈತರ ಆದಾಯದಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯ ಪ್ರಮಾಣ ಶೇ.30 ರಷ್ಟು ಇದೆ. ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯವಾದದು ಎಂದು ಜಿ.ಪಂ. ಸಿಇಒ ದಿವಾಕರ್.ಎಂ.ಎಸ್ ಅವರು ಹೇಳಿದರು.

ನಗರದ ಜಿಲ್ಲಾ ಕ್ರೀಡಾ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಪಶು ವೈದ್ಯಕೀಯ ಪರೀಕ್ಷಕರ ಸಂಘದ ಸಹಯೋಗದಲ್ಲಿ ‘ಸಮಗ್ರ ಮಾದರಿ ಸಮೀಕ್ಷೆ ಯೋಜನೆಯ ಇ-ಲಿಸ್ ತಂತ್ರಾಂಶ ಮತ್ತು ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ’ ಕುರಿತು ಹಮ್ಮಿಕೊಳ್ಳಲಾದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ರೈತರ ಆದಾಯ ಏನಿದೆ ಎಂಬುದ ಅರ್ಥ ಮಾಡಿಕೊಂಡರೆ ಮಾತ್ರ, ರೈತರ ಆದಾಯ ದ್ವಿಗುಣಗೊಳಿಸಬಹುದು. ಇಲ್ಲವಾದರೆ ರೈತರ ಆದಾಯ ದ್ವಿಗುಣಗೊಳಿಸುವುದು ಎಂಬುದು ಭಾಷಣದ ವಸ್ತುವಾಗುತ್ತದೆ. ತೋಟಗಾರಿಕೆ, ಮೀನು ಸಾಗಣೆ ಸೇರಿದಂತೆ ಇತರೆ ಪಶು ಸಂಗೋಪನೆಗಳಿಂದ ರೈತರ ಆದಾಯ ಹೆಚ್ಚಾಗುತ್ತದೆ. ರೈತರ ಆದಾಯ ಹೆಚ್ಚಾದರೆ ದೇಶದ ಜಿಡಿಪಿಯು ಸಹ ಹೆಚ್ಚಾಗುತ್ತದೆ. ಪಶು ಇಲಾಖೆಯಲ್ಲಿ ಕೆಲಸ ಎಂದುಕೊಂಡರೆ ಒತ್ತಡ ಹೆಚ್ಚಾಗುತ್ತದೆ. ಇದನ್ನು ಸೇವೆ ಎಂದುಕೊಂಡು ಕಾರ್ಯ ನಿರ್ವಹಿಸಿದರೆ ಒತ್ತಡ ಎನಿಸುವುದಿಲ್ಲ. ಮುಗ್ದ ಪ್ರಾಣಿಗಳ ಸೇವೆ ಮಾಡುವ ಅವಕಾಶ ನಿಮಗೆ ಲಭಿಸಿದೆ. ಇದನ್ನು ಸೇವಾ ಮನೋಭಾವದಿಂದ ನೋಡಬೇಕು. ಹಸುವೊಂದು ಕರು ಹಾಕುವ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದರೆ ಅದರ ಪುಣ್ಯ ನಿಮಗೆ ಲಭಿಸುತ್ತದೆ. ಮುಗ್ದ ಪಶುಗಳೊಂದಿಗೆ ವ್ಯವಹಿರಿಸುವ ನಿಮ್ಮಲ್ಲೂ ಮುಗ್ದತೆ ಇದೆ ಎಂದರು.

ಗ್ರಾಮೀಣ ಭಾಗದ ಪಶು ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಕಚೇರಿಗಳು ಸರಿಯಾದ ರೀತಿಯಲ್ಲಿ ನಿರ್ವಹಣೆ ಆಗದಿರುವುದು ಕಂಡು ಬಂದಿದೆ. ಕಚೇರಿಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ನಿಮ್ಮ ಜೀವಿತ ಅವಧಿಯ ಹೆಚ್ಚು ಭಾಗವನ್ನು ಕಚೇರಿಯಲ್ಲಿ ಕಳೆಯುತ್ತೀರಿ. ಹಾಗಾಗಿ ಉತ್ತಮ ರೀತಿಯಲ್ಲಿ ಕಚೇರಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

60ನೇ ವಯಸ್ಸಿನಲ್ಲಿ ಮುಗ್ದತೆ ಉಳಿಸಿಕೊಳ್ಳುವುದು ಕಷ್ಟ. ಸಹಜವಾಗಿ ಈ ವಯಸ್ಸಿನಲ್ಲಿ ಅಹಂಕಾರ ಬರುತ್ತದೆ. ಎಲ್ಲವನ್ನೂ ತಿಳಿದುಕೊಂಡಿದ್ದೇನೆ. ನನ್ನ ಕೈಕೆಳಗೆ ಇಷ್ಟೊಂದು ಜನರು ಕೆಲಸ ಮಾಡುತ್ತಾರೆ ಎಂದು ಅಧಿಕಾರದ ದರ್ಪ ಬರುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಕೆಲಸ ನಿರ್ವಹಿಸಿದ್ದಾರೆ. ಇದೇ ತಿಂಗಳ ಫೆ.28 ರಂದು ನಿವೃತ್ತರಾಗುತ್ತಿರುವ ಅವರಿಗೆ ದೇವರು ಒಳಿತು ಮಾಡಲಿ. ಕುಟುಂಬದೊಂದಿಗೆ ಅವರು ಉತ್ತಮ ಕಾಲ ಕಳೆಯುವಂತಾಗಲಿ ಎಂದು ಸಿಇಓ ದಿವಾಕರ.ಎಂ.ಎಸ್. ಹಾರೈಸಿದರು.

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪಶು ಇಲಾಖೆ ಸೇರಿದ 156 ಸಂಸ್ಥೆಗಳಿವೆ. ಇದರಲ್ಲಿ 18 ಪಶು ಆಸ್ಪತ್ರೆ, 69 ಪ್ರಾಥಮಿಕ ಪಶು ಆರೋಗ್ಯ ಚಿಕಿತ್ಸಾ ಕೇಂದ್ರಗಳು. 68 ಪಶು ಚಿಕಿತ್ಸಾಲಯಗಳು, 6 ಸಂಚಾರಿ ಯುನಿಟ್‍ಗಳಿವೆ. ಜಿಲ್ಲೆ 10 ಪಶು ಸಂಜೀವಿನಿ ವಾಹನಗಳು ಮಂಜೂರು ಆಗಿವೆ. ರಾಜ್ಯ ಮಟ್ಟದಲ್ಲಿ ಇವುಗಳ ನಿರ್ವಹಣೆಗೆ ಏಜೆನ್ಸಿ ನಿಯೋಜಿಸಿ ಆದೇಶ ಹೊರಬೀಳಲಿದೆ. ನಂತರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಗೆ ಪಶು ಸಂಜೀವಿನಿ ಮೂಲಕ ಸೇವೆ ನೀಡಲಾಗುವುದು. ಒಟ್ಟು 609 ಮಂಜೂರು ಹುದ್ದೆಗಳಲ್ಲಿ 303 ಜನರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಗ್ರಾಮೀಣ ಭಾಗದಲ್ಲಿ ಸೇವೆ ನೀಡುತ್ತಿದ್ದಾರೆ. ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ, ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮ ಜೊತೆಗೆ ಪ್ರತಿ ತಿಂಗಳು ಒಂದು ಲಸಿಕಾ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 4ನೇ ಹಂತದ ಕೃತಕ ಗರ್ಭಧಾರಣಾ ಕಾರ್ಯಕ್ರಮ ಅಧಿಕಾರಿಗಳನ್ನು ನೇಮಿಸಿ, ಹಳ್ಳಿಗಳನ್ನು ಮ್ಯಾಪಿಂಗ್ ಮಾಡಲಾಗಿದೆ. ಇವರಿಗೆ ವಿಶೇಷ ಭತ್ಯಗಳನ್ನು ಸಹ ನೀಡಲಾಗುತ್ತಿದೆ. ಶೇ.90 ರಷ್ಟು ಪ್ರಗತಿ ಸಾಧಿಸಲಾಗಿದೆ. ಕೇಂದ್ರ ಸರ್ಕಾರ ಎನ್.ಎಲ್.ಎಂ.ಇ.ಡಿ(ನ್ಯಾಷನಲ್ ಲೈವ್ ಸ್ಟಾಕ್ ಮಿಷನ್) ಅಡಿ ಜಿಲ್ಲೆಯಲ್ಲಿ ಕುರಿ ಸಾಕಣಿಕೆ ಘಟಕ ನಿರ್ಮಾಣಕ್ಕೆ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜಿಲ್ಲೆಯಿಂದ 19 ಅರ್ಜಿಗಳನ್ನು ಯೋಜನೆ ಮಂಜೂರಾತಿಗೆ ಕಳುಹಿಸಿಕೊಡಲಾಗಿತ್ತು. ಇದರಲ್ಲಿ 3 ಘಟಕಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರತಿ ಮನೆ ಮನೆಗೂ ತೆರಳಿ ಜಾನುವರುಗಳಿಗೆ ಶೇ.97 ರಷ್ಟು ಲಸಿಕೆ ನೀಡಲಾಗಿದೆ. ನಾಲ್ಕು ಅಥವಾ ಐದು ತಿಂಗಳ ಕರುಗಳಿಗೆ ಸಂಪೂರ್ಣ ಲಸಿಕೆಗಳನ್ನು ನೀಡಲಾಗುತ್ತದೆ. ರೇಬಿಸ್ ಮಿಷನ್ ಸಹ ಹಮ್ಮಿಕೊಳ್ಳಾಗಿದೆ. 28 ಸಾವಿರ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗಿದೆ. ಇದರ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2030ರ ವೇಳೆಗೆ ರಾಜ್ಯವನ್ನು ರೇಬಿಸ್ ಮುಕ್ತವಾಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ತಾಲೂಕುಗಳ ಪಶು ಇಲಾಖೆ ಸಹಾಯಕ ನಿರ್ದೇಶಕರುಗಳಾದ ಡಾ. ಕುಮಾರ್, ಡಾ.ರಂಗಪ್ಪ, ಡಾ.ರೇವಣ್ಣ, ಚಳ್ಳಕೆರೆ ಶಿವಾನಂದ ಪಶು ಮೆಡಿಕಲ್ಸ್ ವೀರೇಶ್ ಉಪಸ್ಥಿತಿರಿದ್ದರು.

ದಾವಣಗೆರೆ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಶಂಕರಪ್ಪ, ಪಶುಗಳ ಕೃತಕ ಗರ್ಭಧಾರಣೆ ತಂತ್ರ ವಿಧಾನಗಳ ಕುರಿತು ಹಾಗೂ ಸಂಪನ್ಮೂಲ ವ್ಯಕ್ತಿ ಡಾ.ರಕ್ಷಿತ್ ಇ-ಲಿಸ್ ತಂತ್ರಾಂಶದ ಕಾರ್ಯಗಾರ ನೇರವೇರಿಸಿದರು. ಪಶು ವೈದ್ಯರು, ಪಶು ಪರಿವೀಕ್ಷರು ಭಾಗವಹಿಸಿದ್ದರು.

ಹೈನುಗಾರಿಕೆಯ ಪ್ರಮಾಣ ಶೇ.30 ರಷ್ಟು ಇದೆ. ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯವಾದದು ಎಂದು ಜಿ.ಪಂ. ಸಿಇಒ ದಿವಾಕರ್.ಎಂ.ಎಸ್ ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!