ಶ್ಯಾಮ್ ಜನಸಂಪರ್ಕ ಕಚೇರಿ ಉದ್ಘಾಟನೆ: ರಾಜಕಾರಣದಲ್ಲಿ ಎತ್ತರಕ್ಕೇರಲಿ ಎಂದ ಬಿಜೆಪಿ ಮುಖಂಡರು

ಶ್ಯಾಮ್ ಜನಸಂಪರ್ಕ ಕಚೇರಿ ಉದ್ಘಾಟನೆ: ರಾಜಕಾರಣದಲ್ಲಿ ಎತ್ತರಕ್ಕೇರಲಿ ಎಂದ ಬಿಜೆಪಿ ಮುಖಂಡರು

ದಾವಣಗೆರೆ: ನಗರದ ರಿಂಗ್ ರಸ್ತೆಯ ಆಫೀಸರ್ಸ್ ಕ್ಲಬ್ ಬಳಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಜಿ.ಎಸ್. ಶ್ಯಾಮ್ ಅವರ ಜನಸಂಪರ್ಕ ಕಚೇರಿಯ ಉದ್ಘಾಟನೆ ನೆರವೇರಿತು.

ಕಚೇರಿಯ ಉದ್ಘಾಟನೆ ಪ್ರಯುಕ್ತ
ಪೂಜಾ ನೆರವೇರಿಸಲಾಯಿತು. ಈ ವೇಳೆ ಪಾಲ್ಗೊಂಡಿದ್ದ ಬಿಜೆಪಿ ಮುಖಂಡರು ಯುವ ಉತ್ಸಾಹಿ, ಉದ್ಯಮಿ, ಯುವ ರಾಜಕಾರಣಿ ಜಿ. ಎಸ್. ಶ್ಯಾಮ್ ಬಿಟಿ ಸಿದ್ದಪ್ಪರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ರಾಜಕಾರಣದಲ್ಲಿ ಉತ್ತಮ ಹೆಸರು ಮಾಡಿರುವ, ಮಾಯಕೊಂಡ ಕ್ಷೇತ್ರದಲ್ಲಿ ಮನೆಮಗನಂತೆ ಗುರುತಿಸಿಕೊಂಡಿರುವ, ಜನರ ಮಿಡಿತ ಅರಿತಿರುವ ಶ್ಯಾಮ್ ರಾಜಕಾರಣದಲ್ಲಿ ಉನ್ನತ ಮಟ್ಟಕ್ಕೆ ಏರಲಿ ಎಂದು ಶುಭ ಕೋರಿದರು.

ಮಾಯಕೊಂಡ ಕ್ಷೇತ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಮುಖಂಡರು, ಸ್ಥಳೀಯರು ಶುಭ ಕೋರಲು ಆಗಮಿಸಿದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್,ಬಯಲು ಸೀಮೆ ಅಧ್ಯಕ್ಷ ಜೀವನ್ ಮೂರ್ತಿ,ಬಿಜೆಪಿ ಜಿಲ್ಲಾ ಉಪಧ್ಯಕ್ಷ ದಾಸರ ಶ್ರೀನಿವಾಸ್ ಜಿಲ್ಲಾ ಕಾರ್ಯದರ್ಶಿ ಬಿಎಸ್.ಜಗದೀಶ್. ದೂಡಾ‌ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ. ಜಿ. ಅಜಯ್ ಕುಮಾರ್, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್.ಮಾಯಾಕೊಂಡ ಮಂಡಲ ಅದ್ಯಕ್ಷ ದೇವೇಂದ್ರಪ್ಪ.ಮಾಜಿ ಮಂಡಲ ಅಧ್ಯಕ್ಷ ಬಿಎಸ್.ರಮೇಶ್.ಮಾಜಿ ಜಿಪಂ ಸದಸ್ಯ ಶಿವಮೂರ್ತಪ್ಪ ಅಲೂರು ಚನ್ನಬಸಪ್ಪ.ಎಬಿ.ನಾಗರಾಜ್ ಮಳ್ಳೆಕಟ್ಟೆ. ರೈತ ಮೋರ್ಚಾದ ಅಣಜಿ ಗುಡ್ಡೇಶ್.ಕಾಶಿಪುರದ ಸಿದ್ದಶ್ ದಾಗಿನಕಟ್ಟೆ ಬಸವನಗೌಡ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸಾಗರಪೇಟೆ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!