corruption; ಜಾಗೃತಿ ಅರಿವು ಸಪ್ತಾಹ; ಪ್ರತಿಜ್ಞಾ ವಿಧಿ ಸ್ವೀಕಾರ

ದಾವಣಗೆರೆ, ಅ.31: . ಭ್ರಷ್ಟಾಚಾರವನ್ನು (corruption) ಮೂಲೋತ್ಥಾಟನೆ ಮಾಡಲು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆಯನ್ನು ಮೆರೆಯೋಣ. ಈ ದೇಶವೇ ನನ್ನ ಕುಟುಂಬ, ಸೇವೆಯೇ ನಮ್ಮ ಮುಖ್ಯ ಧ್ಯೇಯವಾಗಬೇಕು. ನ್ಯಾಯ ಕೋರಿ ಬರುವ ಬಡ ಕಕ್ಷಿದಾರರಿಗೆ ಯಾವುದೇ ವಿಳಂಬ ಮಾಡದೆ ಪಾರದರ್ಶಕವಾದ ಜನಸ್ನೇಹಿ ಆಡಳಿತ ನೀಡೋಣ ಎಂದು ಪ್ರಧಾನ ಜಿಲ್ಲಾ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.

ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಲಾದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ದೇಶದ ಪ್ರಗತಿಯು ಆಯಾ ದೇಶದ ಕಾರ್ಯಾಂಗದ ಪ್ರಾಮಾಣಿಕತೆ, ನಿಷ್ಠೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಭಾರತದ ಜನರ ಶ್ರಮದ ತೆರಿಗೆ, ಕಂದಾಯ ಮುಂತಾದ ಕೊಡುಗೆಗಳಿಂದಾಗಿ ಸಾರ್ವಜನಿಕ ಆಡಳಿತ ಸಾಧ್ಯವಾಗಿದೆ. ಸಾರ್ವಜನಿಕ ಜೀವನದಲ್ಲಿ ಸರ್ಕಾರಿ ಅಧಿಕಾರಿಗಳು, ನೌಕರರಾದ ನಾವುಗಳು ಜನರಿಗೆ, ಈ ದೇಶಕ್ಕೆ ನಿಷ್ಠರಾಗಿ, ಪ್ರಾಮಾಣಿಕ ಸೇವೆಗೆ ಬದ್ಧರಾಗಿರಬೇಕು ಎಂದರು.

Accident compensation; ಅಸಂಘಟಿತ ಕಾರ್ಮಿಕರ ಅಪಘಾತ ಪರಿಹಾರಕ್ಕಾಗಿ ಅರ್ಜಿ ಆಹ್ವಾನ

ಭ್ರಷ್ಟಾಚಾರವನ್ನು ವಿರೋಧಿಸೋಣ, ರಾಷ್ಟ್ರಕ್ಕೆ ನಿರ್ಮಾಣಕ್ಕೆ ಬದ್ಧರಾಗಿರೋಣ ಎಂಬ ಘೋಷವಾಕ್ಯದಂತೆ ನಾವು ನಮ್ಮ ಜೀವನದಲ್ಲಿ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳೋಣ ಎಂದ ಅವರು ಕೇವಲ ಅಕ್ರಮವಾಗಿ ಹಣ, ವಸ್ತುರೂಪಗಳಲ್ಲಿ ಅಕ್ರಮ ಸಂಪಾದನೆ ಭ್ರಷ್ಟಾಚಾರವಲ್ಲ, ನಾವು ನಮ್ಮ ನಮ್ಮ ಕೆಲಸಗಳನ್ನು ಅನಗತ್ಯವಾಗಿ ವಿಳಂಬ ಮಾಡಿದರೂ ಸಹ ಭ್ರಷ್ಟಾಚಾರವೇ ಆಗುತ್ತದೆ. ಹೀಗಾಗಿ ಭ್ರಷ್ಟಾಚಾರದ ವ್ಯಾಖ್ಯಾನವೂ ಸಹ ಬದಲಾಗಬೇಕಿದೆ. ಇಂತಹ ಬೌದ್ಧಿಕ ಭ್ರಷ್ಟಾಚಾರವು ಅತ್ಯಂತ ಅಪಾಯಕಾರಿ, ದೇಶದ ಏಳಿಗೆಗೆ ಸಹ ಮಾರಕ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರುಗಳು, ಮುಖ್ಯ ಆಡಳಿತಾಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿಜ್ಞೆ ಸ್ವೀಕರಿಸಿದರು. ವಿವಿಧ ಇಲಾಖೆಗಳಲ್ಲಿ ಜಾಗೃತಿ ಅರಿವು ಸಪ್ತಾಹ; ಭ್ರಷ್ಟಾಚಾರದ ವಿರುದ್ದದ ಜಾಗೃತಿ ಅರಿವು ಸಪ್ತಾಹವು ಅಕ್ಟೋಬರ್ 30 ರಿಂದ ನವೆಂಬರ್ 5ರವರೆಗೆ ನಡೆಯಲಿದೆ. ಸಪ್ತಾಹದ ಅಂಗವಾಗಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಜಾಗೃತಿ ಅರಿವು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್,  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್, ಖಜಾನೆ ಇಲಾಖೆಯಲ್ಲಿ ಉಪನಿರ್ದೇಶಕರಾದ ಪ್ರತಿಭಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

Leave a Reply

Your email address will not be published. Required fields are marked *

error: Content is protected !!