ಗಾಂಜಾ ಹಾಗೂ ಮಾದಕ ವಸ್ತುಗಳ ವಶ : ಆರೋಪಿ ಬಂಧನ

ದಾವಣಗೆರೆ: ದಾವಣಗೆರೆ ನಗರದ ಪಿ.ಬಿ. ರಸ್ತೆಯಲ್ಲಿನ ದೇವರಾಜು ಅರಸ್ ಬಡಾವಣೆಯ ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‍ನ ಹಿಂಭಾಗದ ಖಾಲಿ ಸೈಟಿನಲ್ಲಿರುವ ಟ್ರಾನ್ಸ್‍ಫಾರ್ಮ್ ಪಕ್ಕದಲ್ಲಿರುವ ಮರದ ಕೆಳಗೆ ದ್ವಿಚಕ್ರ ವಾಹನ ಕೆ.ಎ.17/ಹೆಚ್‍ಹೆಚ್-3065 ವಾಹನದಲ್ಲಿ ಸೇವಿಸಲು ಮತ್ತು ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಲಾಗಿದ್ದ ಒಣ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳನ್ನು ಹಾಗೂ ಆರೋಪಿ ಶಾರೀಕ್ ಅಲಿಯಾಸ್ ಶಾರೀಕ್ ಚಷ್ತಿ ಬಿನ್ ಮಹಮದ್ ಅತಿಕ್ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ದಾವಣಗೆರೆ ನಗರದ ದೇವರಾಜ್ ಅರಸ್ ಬಡಾವಣೆಯ ಅನ್ನಪೂರ್ಣೇಶ್ವರಿ ದೇವಸ್ಥಾನದ ಹತ್ತಿರವಿರುವ 7 ನೇ ಕ್ರಾಸ್ ಎ.ಬ್ಲಾಕ್, ಮ.ನಂ 84 30 ವರ್ಷದ ಶಾರೀಕ್ ಅಲಿಯಾಸ್ ಶಾರೀಕ್ ಚಷ್ತಿ ಬಿನ್ ಮಹಮದ್ ಅತಿಕ್ ಇವರನ್ನು ದಸ್ತಗಿರಿ ಮಾಡಿ, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಅಂದಾಜು ರೂ. 3,500 ಮೌಲ್ಯದ 75 ಗ್ರಾಂ ಒಣ ಗಾಂಜಾ ಮತ್ತು ರೂ.70,000 ಮೌಲ್ಯದ ವಾಹನ ಸೇರಿ ಒಟ್ಟು ಅಂದಾಜು ರೂ.73,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಜಂಟಿ ಆಯುಕ್ತರು, (ಜಾರಿ ಮತ್ತು ತನಿಖೆ) ಹೊಸಪೇಟೆ ವಿಭಾಗ ಇವರ ನಿರ್ದೇಶನದ ಮೇರೆಗೆ ಜೂ.17 ರಂದು ದಾವಣಗೆರೆ ಜಿಲ್ಲೆ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಮಾರ್ಗದರ್ಶನದಲ್ಲಿ ದಾವಣಗೆರೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ರಾಮನಗೌಡ ಮುದಿಗೌಡರ್ ಇವರ ಸಮಕ್ಷಮದಲ್ಲಿ, ಅಬಕಾರಿ ನಿರೀಕ್ಷಕರಾದ ರಶ್ಮಿ ಕೆ.ಆರ್ ಇವರು ಅಬಕಾರಿ ಉಪ ನಿರೀಕ್ಷಕರಾದ ಮಂಜಪ್ಪ ಎಂ ಮತ್ತು ಸಿಬ್ಬಂದಿಗಳಾದ ಮಂಜುನಾಥ್ ಎನ್, ಅರವಿಂದ್ ಸಿ.ಜಿ, ಸುರೇಶ್ ಉತ್ತನಾಳ, ಮಹಮದ್ ಶಾಹೀನ್ ಹಾಗೂ ವಾಹನ ಚಾಲಕ ಪ್ರದೀಪ್‍ಕುಮಾರ್ ಎಂ, ಪಂಚರೊಂದಿಗೆ ಜೂ.17 ರಂದು ಖಚಿತ ಭಾತ್ಮಿ ಮೇರೆಗೆ ಸಾಗಾಣಿಕೆ ಮಾಡುತ್ತಿದ್ದ 75 ಗ್ರಾಂ ಒಣ ಗಾಂಜಾ ಮತ್ತು ಮಾದಕ ವಸ್ತುಗಳನ್ನು ಪಂಚರ ಸಮಕ್ಷಮ ಇಲಾಖಾ ವಶಕ್ಕೆ ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!