ಶಾಮನೂರು ಶಿವಶಂಕರಪ್ಪ ಹುಟ್ಟುಹಬ್ಬದ ಪ್ರಯುಕ್ತ ಮಹಿಳಾ ಕಾಂಗ್ರೆಸ್ ವತಿಯಿಂದ ನಿರಾಶ್ರಿತರ ಮಕ್ಕಳಿಗೆ ಹೆಲ್ತ್ ಕಿಟ್ ವಿತರಣೆ

ದಾವಣಗೆರೆ : ಡಾ: ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಮಹಿಳಾ ಕಾಂಗ್ರೆಸ್ ಘಟಕದ ದಕ್ಷಿಣ ಮಹಿಳಾ ಕಾಂಗ್ರೆಸ್ ವತಿಯಿಂದ ನಿರಾಶ್ರಿತರ ಮಕ್ಕಳಿಗೆ ವಿಟಮಿನ್ ಸಿರಪ್, ಟಾಬ್ಲೆಟ್, ಮಾಸ್ಕ್, ಸೋಪ್, ಬಿಸ್ಕೆಟ್, ಹಾರ್ಲಿಕ್ಸ್ ಬಾಟಲ್, ಇರುವ ಹೆಲ್ತ್ ಕಿಟ್ ವಿತರಿಸುವ ಮೂಲಕ ಡಾ:ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿದರು

ನಮ್ಮೆಲ್ಲರ ನೆಚ್ಚಿನ ನಾಯಕರು ಅಜಾತಶತ್ರು ಅಮೃತ ಪುರುಷ ಹಿರಿಯರು ಡಾಕ್ಟರ್ ಶಾಮನೂರು ಶಿವಶಂಕರಪ್ಪ ನವರ ತೊಂಬತ್ತ ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇಂದು ದಾವಣಗೆರೆ ನಗರದ ನಿರಾಶ್ರಿತ ನೂರಾರು ಮಕ್ಕಳಿಗೆ ಹೆಲ್ತ್ ಕಿಟ್ ಗಳನ್ನು ಮಾಡಿ ವಿತರಿಸಲಾಯಿತು. ನಮ್ಮ ನಾಯಕರು ದಾವಣಗೆರೆ ನಗರದ ಜನತೆಗೆ ಕರೊನ ವಿರುದ್ಧ ಹೋರಾಡಲು ಸ್ವಂತ ಖರ್ಚಿನಲ್ಲಿ ವ್ಯಾಕ್ಸಿನ್ ತರಿಸಿ ನೀಡುತ್ತಿದ್ದು ಇಂತಹ ಹಿರಿಯ ನಾಯಕರು ದೇಶದಲ್ಲೇ ಮಾದರಿಯಾಗಿದ್ದಾರೆ.

ಅವರ ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕ ಮಕ್ಕಳಿಗೆ ಹೆಲ್ತಿ ಬೂಸ್ಟರ್ ಆಗಿ ವಿಟಮಿನ್ ಸಿರಪ್ ಟಾಬ್ಲೆಟ್ಸ್ ಹಾರ್ಲಿಕ್ಸ್ ಬಟರ್ ಸೋಪ್ ಮಾಸ್ಕ್ ಸಾನಿಟೈಸರ್ ಎಲ್ಲವೂ ಸೇರಿ ಕಿಟ್ ಮಾಡಿ ನೂರಾರು ಚಿಕ್ಕ ಮಕ್ಕಳಿಗೆ ಇಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ದಕ್ಷಿಣ ವಿಭಾಗದ ವತಿಯಿಂದ ವಿತರಿಸಲಾಯಿತು ಎಂದು ದಕ್ಷಿಣ ವಿಭಾಗದ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶುಭಮಂಗಳ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್ ಸುಷ್ಮಾಪಾಟೀಲ್ ಆಶಾ ಕವಿತಾ ಚಂದ್ರಶೇಖರ್ ದ್ರಾಕ್ಷಾಯಣಮ್ಮ ರಾಜೇಶ್ವರಿ ರಾಹತ್ ಜಾನ್ ದಿಲ್ಶಾದ್ ಬಾನು ರಾಧಮ್ಮ ರುದ್ರಮ್ಮ ಭಾರತಿ ಸಂಗಮ್ಮ ಜಯಶ್ರೀ ಗೌರಮ್ಮ ಇನ್ನು ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!