ದಿನೇ ದಿನ ಹೆಚ್ಚಾಯ್ತು ಸೊಂಕಿತರ ಸಂಖ್ಯೆ.! 164 ಮಕ್ಕಳು ಸೇರಿದಂತೆ 495 ಮಂದಿಗೆ ಕೊರೊನಾ ಸೊಂಕು ದೃಡ.! 293 ಮಂದಿ ಗುಣಮುಖ
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಜ. 23 ರಂದು 0 ಇಂದ 5 ವರ್ಷದೊಳಗಿನ 3 ಮಕ್ಕಳು, ಹಾಗೂ 5 ರಿಂದ 18 ವರ್ಷದೊಳಗಿನ 164 ಮಕ್ಕಳು, ಸೇರಿದಂತೆ, 683 ಮಕ್ಕಳಿಗೆ ಸೋಂಕು ಕೊರೊನಾ ಸೊಂಕು ಪತ್ತೆಯಾಗಿದೆ.
ನಿನ್ನೆ ಶನಿವಾರ 465 ಮಂದಿಗೆ ಕೊರೊನಾ ದೃಡಪಟ್ಟಿತ್ತು ಇಂದು ಕೂಡ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,805 ಕ್ಕೇರಿದೆ.
ದಾವಣಗೆರೆ 205. ಹರಿಹರ 67, ಜಗಳೂರು ತಾಲೂಕಿನಲ್ಲಿ 44, ಚನ್ನಗಿರಿ ತಾಲ್ಲೂಕಿನಲ್ಲಿ 58, ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 114 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 7 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಖಚಿತವಾಗಿದೆ.
ಜಿಲ್ಲೆಯಲ್ಲಿ 53.911 ಮಂದಿಗೆ ಇಲ್ಲಿವರೆಗೆ ಕೊರೊನಾ ಸೊಂಕು ತಗುಲಿದೆ. 51,497 ಮಂದಿ ಗುಣಮುಖರಾಗಿದ್ದಾರೆ. 609 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.