ಫಲಾನುಭವಿಗಳಿಗೆ ಸಿಗಬೇಕಾದ ಹಣವನ್ನು ಕಡಿತಗೊಳಿಸಿ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಲಾಗುತ್ತಿದೆ – ನಾಗರಾಜ್ ಸುರ್ವೇ ಆರೋಪ

ದಾವಣಗೆರೆ; ವಾರ್ಡ್ ನಂಬರ್ 44ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರು, ಅತಿ ಹೆಚ್ಚಾಗಿ ಕಾರ್ಮಿಕರೇ ವಾಸಿಸುವ ಶಾಂತಿ ನಗರ ಎಲ್ಲಮ್ಮ ನಗರ ವಿನಾಯಕ ನಗರದ ವಿವಿಧ ಕಾರ್ಮಿಕ ಮುಖಂಡರ ಜೊತೆಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ನಾಗರಾಜ್ ಸುರ್ವೆ ಅವರು ಮಾತನಾಡಿ 2007ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ರಚನೆಯಾಗಿದೆ 2007 ರಿಂದ 2023 ಹೊರಗೆ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಅನೇಕ ಯೋಜನೆಗಳನ್ನು ತಂದಿರುತ್ತದೆ.
ಕಾಂಗ್ರೆಸ್ ಸರ್ಕಾರದ ಏಕಮುಖ ತೀರ್ಮಾನದಿಂದ 2022ರ ಸಾಲಿನ ಸ್ಕಾಲರ್ಶಿಪ್ ಬಾರಿ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಸಾಮಾನ್ಯರು ಮತ್ತು ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಿರುವುದು ಮತ್ತು ಅವರ ದುಡಿಮೆಯ ಬಹುಪಾಲು ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಖರ್ಚು ಮಾಡುತ್ತಿರುತ್ತಾರೆ. ಆದರೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ ಅನ್ನು ಕಾಂಗ್ರೆಸ್ ಸರ್ಕಾರ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಕಡಿತಗೊಳಿಸಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡುತ್ತಿದೆ. ಸರ್ಕಾರ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸಿಗಬೇಕಾದ ಹಣವನ್ನು ಕಡಿತಗೊಳಿಸಿ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಲಾಗುತ್ತಿದೆ ತಿಳಿಸಿದರು.

ಹಾಗೂ ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯದ ನಿಧಿಯನ್ನು ದುರುಪಯೋಗ ಮಾಡಿಕೊಂಡಿರುವ ಆಡಳಿತರೂಢ ಸರ್ಕಾರವನ್ನು ಪ್ರಶ್ನೆ ಮಾಡಬೇಕು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರವು ವಿವಿಧ ಗ್ಯಾರಂಟಿಗಳಿಗೆ ಕಾರ್ಮಿಕರ ನಿಧಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ವಿವರವಾಗಿ ಪ್ರಸ್ತಾಪ ಪಡಿಸಿದರು, ವಿದ್ಯಾನಿಧಿ ಯೋಜನೆ ಅಡಿ ಕಾರ್ಮಿಕರ ಮಕ್ಕಳಿಗೆ ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ 5,000 ಗಳು, 5ನೇ ತರಗತಿಯಿಂದ ಎಂಟನೇ ತರಗತಿವರೆಗೆ 8,000 ಗಳು

ಹಾಗೂ ಕಾರ್ಮಿಕರ ಮದುವೆ ಮತ್ತು ಕಾರ್ಮಿಕರ ಮಕ್ಕಳ ಮದುವೆಗಾಗಿ ಪ್ರತಿ ಮದುವೆಗೆ 65,000ಗಳನ್ನು ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕರ ಪಡೆಯಬಹುದಿತ್ತು, ಅಪಘಾತ ಹಾಗು ಪ್ರಮುಖ ಖಾಯಿಲೆಗಳ ಚಿಕಿತ್ಸೆಗೆ 2ಲಕ್ಷ ಪಡೆದುಕೋಳ್ಳುವ ಅವಕಾಶ ಈಗ ಇಲ್ಲವಾಗಿದೆ

Leave a Reply

Your email address will not be published. Required fields are marked *

error: Content is protected !!