ಲೋಕಸಭಾ ಚುನಾವಣೆ, ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿಗಳಿಗೆ ಮೊದಲ ಸುತ್ತಿನ ತರಬೇತಿ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತ ಅಂದರೆ ರಾಜ್ಯದ ಎರಡನೇ ಹಂತದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಮತದಾನ ದಿನ ಸುಗಮವಾಗಿ ಮತದಾನವಾಗಲು ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿಗಳ ಪಾತ್ರ ಬಹಳ ಪ್ರಮುಖವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಸೋಮವಾರ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಆರ್‍ಓ, ಎಪಿಆರ್‍ಓಗಳಿಗೆ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಲಾದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಮತಗಟ್ಟೆ ಅಧಿಕಾರಿಗಳು ಮತದಾನದ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಬೇಕು. ನಿಮಗೆ ಸಮಸ್ಯೆಯಾಗಂತೆ ಮಾರ್ಗದರ್ಶನಕ್ಕಾಗಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತರಬೇತಿ ಜೊತೆಗೆ ನಿಮಗೆ ಕೊಡಲಾದ ಮಾರ್ಗಸೂಚಿ ಕೈಪಿಡಿಯನ್ನು ಸಂಪೂರ್ಣವಾಗಿ ಅವಲೋಕಿಸಿ ತಿಳಿದುಕೊಂಡು ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು.

ಮತದಾನ ದಿನ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡದೇ ಸಮಯಕ್ಕೆ ಸರಿಯಾಗಿ ಮತದಾನ ಪ್ರಾರಂಭ ಮಾಡಲು ಕ್ರಮ ವಹಿಸಬೇಕು. ಅಣಕು ಮತದಾನವನ್ನು ನಿಗದಿತ ಸಮಯದಲ್ಲಿ ಮುಕ್ತಾಯ ಮಾಡಿ, ಅದರ ಫಲಿತಾಂಶವನ್ನು ಕ್ಲಿಯರ್ ಮಾಡಿದ ನಂತರವೇ ವಾಸ್ತವ ಮತದಾನ ಆರಂಭಿಸಬೇಕು. ಯಾರು ಸಹ ಗೊಂದಲಗಳಿಗೆ ಅವಕಾಶ ಮಾಡಿಕೊಡದೇ ಸಮಾಧಾನವಾಗಿ ಹಾಗೂ ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಮೊದಲ ಹಂತದ ತರಬೇತಿ ನಡೆದ ಕೇಂದ್ರಗಳು; ಜಗಳೂರು; ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರ; ಸೆಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್, ದಾವಣಗೆರೆ ಉತ್ತರ ಮತ್ತು ದಕ್ಷಿಣ; ಸಿದ್ದಗಂಗಾ ವಿದ್ಯಾಸಂಸ್ಥೆ, ಮಾಯಕೊಂಡ; ತರಳಬಾಳು ವಿದ್ಯಾಸಂಸ್ಥೆ, ದಾವಣಗೆರೆ, ಚನ್ನಗಿರಿ; ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ; ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ, ಹಿರೇಕಲ್ಮಠ, ಇಲ್ಲಿ ತರಬೇತಿ ನಡೆಯಿತು.

ಇದು ಮೊದಲ ಹಂತದ ತರಬೇತಿಯಾಗಿದ್ದು ಆಯಾ ಸಿಬ್ಬಂದಿಯವರು ಅವರು ಕರ್ತವ್ಯನಿರತ ತಾಲ್ಲೂಕು ಕೇಂದ್ರಗಳಲ್ಲಿಯೇ ತರಬೇತಿ ನಡೆದಿರುತ್ತದೆ. ಮುಂದಿನ ತರಬೇತಿ ಬೇರೆ ಕ್ಷೇತ್ರದಲ್ಲಿ ನಡೆಯಲಿದ್ದು ಎಲ್ಲಾ ಮತದಾನ ಸಿಬ್ಬಂದಿಗಳು ಎರಡನೇ ತರಬೇತಿಯಲ್ಲಿ ಭಾಗವಹಿಸುವರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1946 ಮತಗಟ್ಟೆಗಳಿದ್ದು ದಾವಣಗೆರೆ ಜಿಲ್ಲೆಯಲ್ಲಿ 1693 ಮತಗಟ್ಟೆಗಳಿವೆ. ಮತದಾನದ ದಿನ ಪ್ರತಿ ಮತಗಟ್ಟೆಯಲ್ಲಿ ನಾಲ್ಕು ಸಿಬ್ಬಂದಿಗಳು ಕಾರ್ಯನಿರ್ವಹಿಸುವರು. ಹೆಚ್ಚುವರಿಯಾಗಿ ಮತಗಟ್ಟೆ ಸಿಬ್ಬಂದಿಗಳು ಸೇರಿ ಒಟ್ಟು 9192 ಮತದಾನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ತಾಲ್ಲೂಕುವಾರು ಮತದಾನ ಸಿಬ್ಬಂದಿಗಳನ್ನು ಆಯ್ಕೆ ಮಾಡಿಕೊಂಡ ವಿವರದನ್ವಯ; ಜಗಳೂರು ಪಿಆರ್‍ಓ 187, ಎಪಿಆರ್‍ಓ 287, ಪಿಓ 723 ಸೇರಿ 1197, ಹರಿಹರ; ಪಿಆರ್‍ಓ 320, ಎಪಿಆರ್‍ಓ 401, ಪಿಓ 697 ಸೇರಿ 1418, ದಾವಣಗೆರೆ ಉತ್ತರ; ಪಿಆರ್‍ಓ 713, ಎಪಿಆರ್‍ಓ 299, ಪಿಓ 762 ಸೇರಿ 1774, ದಕ್ಷಿಣ; ಪಿಆರ್‍ಓ 160, ಎಪಿಆರ್‍ಓ 240, ಪಿಓ 362 ಸೇರಿ 762, ಮಾಯಕೊಂಡ; ಪಿಆರ್‍ಓ 362, ಎಪಿಆರ್‍ಓ 339, ಪಿಓ 469 ಸೇರಿ 1170, ಚನ್ನಗಿರಿ; ಪಿಆರ್‍ಓ 278, ಎಪಿಆರ್‍ಓ 352, ಪಿಓ 801 ಸೇರಿ 1431 ಹಾಗೂ ಹೊನ್ನಾಳಿ; ಪಿಆರ್‍ಓ 278, ಎಪಿಆರ್‍ಓ 380, ಪಿಓ 782 ಸೇರಿ ಒಟ್ಟು 1440 ಮತದಾನ ಸಿಬ್ಬಂದಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಮತದಾನ ಸಿಬ್ಬಂದಿಗೆ ಅಂಚೆ ಮತಪತ್ರ; ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳು ಸಹ ಮತದಾನದ ದಿನ ಮತದಾನ ಮಾಡಲು ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳಿಗೆ ನಮೂನೆ 12 ಮತ್ತು ನಮೂನೆ 12ಎ ನೀಡಲಾಗುತ್ತದೆ. ತರಬೇತಿ ನಡೆದ ಸ್ಥಳಗಳಲ್ಲಿ ಮತದಾನ ಕರ್ತವ್ಯಕ್ಕೆ ನೇಮಕವಾದ ಅಧಿಕಾರಿ, ಸಿಬ್ಬಂದಿಗಳಿಗೆ ಮೇಲಿನ ನಮೂನೆಗಳನ್ನು ವಿತರಣೆ ಮಾಡಿ ಭರ್ತಿ ಮಾಡಿದ ಅರ್ಜಿಗಳನ್ನು ವಿತರಿಸಲು ತಂಡಗಳನ್ನು ನೇಮಕ ಮಾಡಲಾಗಿತ್ತು.

ಚುನಾವಣಾ ಕರ್ತವ್ಯ ನಿರತರಿಗೆ ಮತದಾನ ಮಾಡಲು ನೀಡುವ ನಮೂನೆಗಳಾವು, ಇಡಿಸಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಪಡೆದ ಎಲ್ಲರಿಗೂ ಅಂಚೆ ಮತದಾನ ಮಾಡಲು ನಮೂನೆ12, 12ಎ ನೀಡಲಾಗುತ್ತದೆ. ಪ್ರಸ್ತುತ ಲೋಕಸಭಾ ಚುನಾವಣೆಯಾಗಿರುವುದರಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇತರೆ ಬೇರೆ ಜಿಲ್ಲೆಯಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದಲ್ಲಿ ಅಂತಹ ಚುನಾವಣಾ ಕರ್ತವ್ಯ ಸಿಬ್ಬಂದಿಗಳಿಗೆ ನಮೂನೆ 12 ನೀಡಲಾಗುತ್ತದೆ. ದಾವಣಗೆರೆ ಜಿಲ್ಲೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದು ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಾಗಿದ್ದಲ್ಲಿ ಇವರಿಗೆ ನಮೂನೆ 12ಎ ವಿತರಣೆ ಮಾಡಲಾಗುತ್ತದೆ. 12ಎ ನಮೂನೆ ಪಡೆದವರು ಅವರು ಕರ್ತವ್ಯ ನಿರ್ವಹಿಸುವ ಮತಗಟ್ಟೆಯಲ್ಲಿಯೇ ಮತದಾನ ಮಾಡುವರು. 12 ನಮೂನೆ ಪಡೆದವರು ಸೌಲಬ್ಯ ಕೇಂದ್ರಗಳಲ್ಲಿ ಮತದಾನ ಮಾಡುವರು.

Leave a Reply

Your email address will not be published. Required fields are marked *

error: Content is protected !!