ದೆಹಲಿ ವಿಧಾನ ಮಂಡಲ ಅಧಿವೇಶನ.! ಬಿಜೆಪಿ ಶಾಸಕರಿಂದ ಅಮ್ಲಜನಕ ಸಿಲಿಂಡರ್ ಸಹಿತ ಸದನಕ್ಕೆ
ನವದೆಹಲಿ: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ದೆಹಲಿ ವಿಧಾನಮಂಡಲದ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಆಮ್ಲಜನಕದ ಸಿಲಿಂಡರ್ ಸಹಿತ ಸದನಕ್ಕೆ ಆಗಮಿಸಿದರು.
ದೆಹಲಿ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಎಎಪಿ ಸರ್ಕಾರದ ನಿಷ್ಕ್ರಿಯತೆ ವಿರೋಧಿಸಿ ಶಾಸಕರು ಆಮ್ಲಜನಕದ ಸಿಲಿಂಡರ್ ಸಹಿತ ಸದನಕ್ಕೆ ಆಗಮಿಸಿದರು. ಸಿಲಿಂಡರ್ ಹೊರಗೆ ಇಡುವಂತೆ ಬಿಜೆಪಿ ಸದಸ್ಯರಿಗೆ ಸೂಚಿಸಿದ ಸ್ಪೀಕರ್ ರಾಮ ನಿವಾಸ್ ಗೋಯಲ್, ಇಷ್ಟು ಭದ್ರತೆ ನಡುವೆಯೂ ಆಮ್ಲಜನಕದ ಸಿಲಿಂಡರ್ ಅನ್ನು ಸದನಕ್ಕೆ ತಂದಿದ್ದು ಹೇಗೆ? ಎಂದು ಪ್ರಶ್ನಿಸಿದರು.
ಘಟನೆಯನ್ನು ಭದ್ರತಾ ಲೋಪ ಎಂದು ಪರಿಗಣಿಸಿದ ಸ್ಪೀಕರ್, ಭದ್ರತಾ ಸಿಬ್ಬಂದಿಯನ್ನು ತಮ್ಮ ಕೊಠಡಿಗೆ ಕರೆದು ಎಚ್ಚರಿಕೆ ನೀಡಿದ್ಧಾರೆ.