ರಾಖಿ ಸಾವಂತ್ ಮದುವೆಯಾಗಿದ್ದನ್ನು ಖಚಿತ ಪಡಿಸಿದ ಮೈಸೂರು ಉದ್ಯಮಿ ಆದಿಲ್ ಖಾನ್ ದುರಾನಿ
ಮುಂಬೈ: ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ದುರಾನಿ ಅವರು ಬಾಲಿವುಡ್ ನಟಿ ರಾಖಿ ಸಾವಂತ್ ಅವರನ್ನು ಮದುವೆಯಾಗಿರುವುದಾಗಿ ಖಚಿತಪಡಿಸಿದ್ದಾರೆ.
ಈ ಕುರಿತಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಅಂತಿಮವಾಗಿ ನಾನು ಇಲ್ಲೊಂದು ಘೋಷಣೆ ಮಾಡುತ್ತಿದ್ದೇನೆ. ನಾನು ನಿನ್ನನ್ನು ಮದುವೆಯಾಗಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ರಾಖಿ. ಕೆಲವು ವಿಷಯಗಳನ್ನು ನಿಭಾಯಿಸಬೇಕಿದ್ದರಿಂದ ಮೌನವಾಗಿದ್ದೆ. ‘ನಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಶುಭಕಾಮನೆಗಳು ರಾಖಿ (ಪಪ್ಪುಡಿ)’ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಜೊತೆಗೆ ಮದುವೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದಿಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಾಖಿ ಸಾವಂತ್, ನಿಮ್ಮ ಪ್ರೀತಿಗೆ ಧನ್ಯವಾದಗಳು ಜಾನ್(ಕೈಮುಗಿಯುತ್ತಿರುವ ಎಮೊಜಿ) ಎಂದು ಹೇಳಿದ್ದಾರೆ.
ಈ ನಡುವೆ, ಮದುವೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರದಾಡಿದ್ದವು. ಇದೀಗ, ಆದಿಲ್ ಮದುವೆಯನ್ನು ಖಚಿತಪಡಿಸಿದ್ದಾರೆ.