ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥಟಿಕ್ ಅಥ್ಲೆಟಿಕ್ ಟ್ರ್ಯಾಕ್ ಕಾಮಗಾರಿಗೆ ಟೆಂಡರ್ ಕರೆದ ಯುವ ಸಬಲೀಕರಣ ಇಲಾಖೆ
ದಾವಣಗೆರೆ: ಜಿಲ್ಲೆಯ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥಟಿಕ್ ಅಥ್ಲೆಟಿಕ್ ಟ್ರ್ಯಾಕ್ ಅಳವಡಿಸಲು ಹಾಗೂ ಯುವ ಸಬಲೀಕರಣ ಮತ್ತು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ಕಾಮಗಾರಿಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ತಯಾರಿಸಿ ಯೋಜನಾ ಸಮಾಲೋಚನೆ ಸೇವೆ ಒದಗಿಸುವ ಕುರಿತು ಟೆಂಡರ್ ಕರೆಯಲಾಗಿದೆ.
ಸಿಂಥಟಿಕ್ ಅಥ್ಲೆಟಿಕ್ ಟ್ರ್ಯಾಕ್ ಅಳವಡಿಸುವ ಕಾಮಗಾರಿಗೆ ಬಿಡ್ ಸಲ್ಲಿಸಲು 21.3.2024 ಕೊನೆಯ ದಿನವಾಗಿದೆ. 23.3.2024ರಂದು ತಾಂತ್ರಿಕ ಬೆಡ್ ತರೆಯಲಾಗುತ್ತದೆ.
ಯೋಜನಾವ ವರದಿ ತಯಾರಿಕೆಗೆ ಬಿಡ್ ಸಲ್ಲಿಸಲು 14.3.2024 ಕೊನೆಯ ದಿನವಾಗಿದ್ದು, 15.3.2024ರಂದು ಬಿಡ್ ತೆರೆಯಲಾಗುತ್ತದೆ.
ಟೆಂಡರ್ ದಾರರು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ (http://kppp.karnataka.gov.in) ಮೂಲಕ ತಮ್ಮ ಬಿಡ್‌ಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಟೆಂಡರ್ ದಾಖಲೆಗಳನ್ನು ಉಚಿತವಾಗಿ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ವೀಕ್ಷಿಸಬಹುದಾಗಿದೆ.