ಬಂಡಾಯ ಎದ್ದರೆ ನಿಷ್ಠಾವಂತರೇ ಅಲ್ಲ: ವಕೀಲ ರಂಗನಾಥ ಸ್ವಾಮಿ ದೇಶದ ಅಭಿವೃದ್ಧಿಗಾಗಿ, ಮೋದಿಗಾಗಿ ಜನ ಮತ ನೀಡುತ್ತಾರೆ
ದಾವಣಗೆರೆ: ಒಬ್ಬರಿಗೆ ಟಿಕೆಟ್ ನೀಡಬೇಡಿ ಎಂದು ಬಂಡಾಯ ಎದ್ದು ದೆಹಲಿ ವರೆಗೂ ಹೋದವರನ್ನ ಮತೆ ಪಕ್ಷದಲ್ಲಿ ರಾಜ ಮರ್ಯಾದೆ ನೀಡಿ, ಹತ್ರಾ ಬಿಟ್ಟೋಳಲ್ಲಾ ಅನ್ನೋತಿವಿ.?
ಒಂದು ವೇಳೆ ಬಿಳ್ಕೊಂಡ್ರೆ, ಆಗ ಪಕ್ಷಕ್ಕೆ ನಿಯತ್ತಾಗಿ ಇರುವ ನಿಷ್ಟಾವಂತ ಕಾರ್ಯಕರ್ತನ ನಿಷ್ಟೆಗೆ ಕವಡೆ ಕಾಸಿಗೂ ಕಿಮ್ಮತ್ತಿಲ್ಲಾ ಎಂಬಂತಾಗುತ್ತದೆ ಎಂದು ದಾವಣಗೆರೆಯ ವಕೀಲರಾದ ರಂಗನಾಥ ಸ್ವಾಮಿ ಅಭಿಪ್ರಾಯಿಸಿದ್ದಾರೆ.
ಪಕ್ಷದಿಂದ ಎಷ್ಟೆಲ್ಲಾ ಅಧಿಕಾರ, ಗೌರವ ಪಡೆದು, ಈಗ ಮತ್ತೆ ತಮ್ಮ ಸ್ವಾರ್ಥಕ್ಕಾಗಿ ತಮಗೆ ಟಿಕೆಟ್ ನೀಡಿ ಎಂದು ಇವರು ಬಂಡಾಯ ಎದ್ದಿದ್ದಾರೆಯೇ ವಿನಹ, ಮತ್ತೊಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಎಂದು ಕೇಳಲಿಲ್ಲ.
ಎಂ.ಎಲ್.ಎ ಚುನಾವಣೆಯಲ್ಲಿ ಭಜರಂಗದಳ ಬ್ಯಾನ್ ವಿಚಾರವಾಗಿ ನಡೆದ ಪ್ರತಿಭಟನೆಯಲ್ಲಿ ಅರೆಸ್ಟ್, ಆಗಿ ಕೇಸ್ ಹಾಕಿಸಿಕೊಂಡವರು ಕಾರ್ಯಕರ್ತರು. ಅಂದು ಈ ಮಹಾನ್ ಕ್ಯಾಂಡಿಡೇಟ್ ಗಳ ಪರಿವಾರದ ಒಬ್ಬ ಸದಸ್ಯರೂ ಸ್ಥಳಕ್ಕೆ ಬರಲಿಲ್ಲಾ.
ಈ ಬಂಡಾಯಿಗಳಿಗೆ, ಕಳೆದ ವರ್ಷ ಎಂ.ಎಲ್.ಎ ಚುನಾವಣೆಯಲ್ಲಿ ಜನರು ಓಟ್ ಹಾಕಿದ್ದು, ಕಾರ್ಯಕರ್ತರ ಪ್ರಚಾರದ ಶ್ರಮಕ್ಕೆ ಮತ್ತು ಮೋದಿ ಮುಖ ನೋಡಿ ಮಾತ್ರಾ, ಇವರು ವೈಯಕ್ತಿಕವಾಗಿ ಚುನಾವಣೆ ನಿಂತರೇ, ಇವರಿಗೆ ಅಸಲೀ ಯೋಗ್ಯತೆ ಗೊತ್ತಾಗುತ್ತದೆ. ತಮ್ಮನ್ನ ತಾವು ಮಹಾನ್ ಜನ ನಾಯಕರು ಎಂಬ ಭ್ರಮೆಯಿಂದ ಹೊರಗೆ ಬರಬೇಕು. ಪಕ್ಷದ ನಾಯಕರೂ, ಇವರನ್ನ ತೆಲೆ ಮೇಲೆ ಕೂರಿಸಿಕೊಳ್ಳುವುದನ್ನ ನಿಲ್ಲಿಸಬೇಕು.
ಇವರು ಇಂದು ಮತ್ತೆ ಒಂದು ಸಭೆ ಕರೆದಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ನಿಷ್ಟಾವಂತ ಎಂದೂ ತನ್ನ ಸ್ವಾರ್ಥಕ್ಕೆ ತನ್ನ ಮಾತೃ ಸಂಘಟನೆಗೆ ದ್ರೋಹ ಬಗೆಯಲಾರಾ, ಸುಮ್ಮನೆ ನಿಷ್ಟಾವಂತರೂ ಎಂಬ ಪದ ಬಳಸಿ ಆ ಪದಕ್ಕೆ ಅಪಮಾನ ಮಾಡಬೇಡಿ.
ಅಲ್ಲಿ ಅವರು ಬೇಡ, ಇವರು ಬೇಡ ಎಂದು ಹೀಗೆಯೇ ಹೇಳ್ತಾ ಹೋದ್ರೆ ಮೋದಿ 400 ಸೀಟು ಗೆಲ್ಲೋದು ಹೇಗೆ.? ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು, ಸ್ಪಷ್ಟ ಅಂದ್ರೆ ಅತೀ ಸ್ಪಷ್ಟ ಬಹುಮತ ಬೇಕು.
ಮೋದಿ ಅವರಿಗೆ ಈ ಹಿಂದೆ ಬಹುಮತ ನೀಡಿದಕ್ಕೆ. ದೇಶದಲ್ಲಿ ಇಷ್ಟು ಬದಲಾವಣೆ ಆಗಿದ್ದು, ಭಾರತ ಎಲ್ಲಾ ಕ್ಷೇತ್ರದಲ್ಲೂ ಬಲಿಷ್ಟವಾಗಿದೆ. ಹಾಗಾಗಿ ಯಾರೇ ನಿಂತರೂ ಜನರ ವೋಟು ಈ ಬಾರಿ ಮೋದಿಗೆ!
ಮೋದಿಯವರೂ, ದೇಶ ದೇಶ ಅಂತ ಮೋದಿ ಎಷ್ಟು ದಿನ ದುಡಿಯೋದು? ಅವರೂ ಸಹ, ನನ್ನ ಮಗ, ನನ್ನ ಹೆಂಡತಿ ನನ್ನ ಕುಟುಂಬ ಅಂತ ಅನೇಕಿತ್ತು, ಸಾವಿರ ಕೋಟಿ ಆಸ್ತಿ ಮಾಡಬೇಕಿತ್ತು, ಅಗ ಬಹುಶಃ ಜನರು 70 ವರ್ಷವಾದರೂ, ತಿಟಕ್ ಪಿಟಕ್ ಅನ್ನದೇ ಓಟ್ ಹಾಕುತ್ತಿದ್ದರೇ.?
ಅವರಿಗೆ ಸ್ವಂತ ಪರಿವಾರ ಅಂತ ತಾಯಿ ಇದ್ರು ಈಗ ಅವರೂ ಇಲ್ಲಾ…ಆತನಿಗೂ ವಯಸ್ಸು ಆಯಿತು, ಶಕ್ತಿ ಇರೋ ವರೆಗೂ ಸೇವೆ ಮಾಡುವರು. ನಂತರ ವೃಧ್ಯಾಪಿ ಜೀವನದಲ್ಲಿ ಅವರನ್ನ ನೋಡಿಕೊಳ್ಳಲೂ ಸ್ವಂತ ಪರಿವಾರ ಅಂತ ಯಾರೂ ಇಲ್ಲಾ,
ಹಾಗಾಗಿ, ಅವರು ಕಳೆದ 2 ಅವಧಿ ಪ್ರಧಾನಿ ಆಗಿ ಪಟ್ಟ ಶ್ರಮ ವ್ಯರ್ಥವಾಗಲು, ಯಾವೊಬ್ಬ ಭಾರತೀಯನೂ ಬಿಡುವುದಿಲ್ಲಾ, ತಮ್ಮ 3 ನೇ ಅವಧಿಯಲ್ಲಿ ಇನ್ನೂ ಜಗತ್ತು ನಿಬ್ಬೆರಗಾಗುವಂತಹ ನಿರ್ಧಾರಗಳನ್ನು ಅವರು ಮಾಡಲಿದ್ದಾರೆ. ಒಬ್ಬ ದೇಶ ಭಕ್ತ ಪ್ರಜೆಯಾಗಿ ನಾವೆಲ್ಲರೂ ಪ್ರಧಾನಿ ಮೋದಿಯವರನ್ನ ಬೆಂಬಲಿಸೋಣ.
ನಾವು ಪ್ರಧಾನಿ ನರೇಂದ್ರ ಮೋದಿಜಿ ಅವರ ಅಭಿಮಾನಿಗಳು, ಅವರು 3ನೇ ಬಾರಿ, 400+ ಸೀಟನ್ನ ಪಡೆದು, ಗೆಲ್ಲಬೇಕು ಎಂಬ ಆಸೆಯನ್ನ ಇಟ್ಟಿದ್ದೇವೆ. ಇದಕ್ಕಾಗಿ ಈ ಚುನಾವಣೆಗೆ ಕಳೆದ ಚುನಾವಣೆಯಂತೆ ತಿಂಗಳ ಗಟ್ಟಲೆ, ಮನೆಯಿಂದ ದೂರ ಇದ್ದು ಪ್ರಚಾರ ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ರೀತಿಯ ಸಾವಿರಾರು ಸ್ವಯಂ ಪ್ರೇರಿತ ಮೋದಿ ಅಭಿಮಾನಿಗಳು, ಈ ಬಾರಿ ಮತ್ತೆ ಚುನಾವಣೆ ಪ್ರಚಾರದಲ್ಲಿ ಇಳಿಯಲಿದ್ದಾರೆ. ಇದು ಕೇವಲ ಮೋದಿಜಿ ಅವರ ಮೇಲೆ ಇರುವ ಅಭಿಮಾನಕ್ಕಾಗಿ ನಾವು ಮಾಡುವ ಸೇವೆ.
ಆದರೆ, ಇಲ್ಲಿರುವ ಕೆಲ ಅಯೋಗ್ಯರು, ಇಲ್ಲಿಯವರೆಗೂ ಪಕ್ಷದಿಂದ ಎಲ್ಲಾ ಅಧಿಕಾರವನ್ನು ಅನುಭವಿಸಿ, ಈ ಹಿಂದೆ ಒಮ್ಮೆ ಆಗಲೇ ಪಕ್ಷಕ್ಕೆ ನಷ್ಟ ಉಂಟು ಮಾಡಿದ್ದಲ್ಲದೇ, ತಮ್ಮ ವೈಯಕ್ತಿಕ ದ್ವೇಶ ಸಾಧಿಸಲು. ಈಗ ಮತ್ತೆ ಬಂಡಾಯ ಎದ್ದು, ಮತ್ತೆ ಗುಂಪುಮಾಡಿಕೊಂಡು, ತಮ್ಮ ಸ್ವಾರ್ಥಕ್ಕಾಗಿ ಈ ಚುನಾವಣೆ ಸಂದರ್ಭದಲ್ಲಿ ಜನರಿಗೆ ದಿಕ್ಕು ತಪ್ಪಿಸಿ, ಮತದಾತರ ವಿಶ್ವಾಸ ಕೆಡುವಂತೆ ಮಾಡಿ, ನಮ್ಮ ಲೋಕಸಭಾ ಕ್ಷೇತ್ರ ವಿರೋಧಿಗಳ ಪಾಲಾಗುವಂತೆ, ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನ ನನ್ನಂತಹ ನಿಷ್ಟಾವಂತ ಮೋದಿ ಅಭಿಮಾನಿಗಳು ಎಂದೂ ಸಹಿಸಲ್ಲಾ. ನಮ್ಮಂತವರಿಗೆ ಯಾವುದೇ ಸ್ಥಾನ ಮಾನ ಬೇಡ, ಅಧಿಕಾರ ಬೇಡ, ನಾವು ಕೇವಲ ಮೋದಿ ಅವರ ಅಭಿಮಾನಕ್ಕೆ ಕೆಲಸ ಮಾಡುವವವರು ಎಂದು ರಂಗನಾಥ ಸ್ವಾಮಿ ಹೇಳಿದ್ದಾರೆ