devaragudda karnika; ದೇವರಗುಡ್ಡದ ಕಾರ್ಣಿಕ: ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್

ಹಾವೇರಿ: “ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್” ಎಂದು ರಾಣೇಬೆನ್ನೂರು ತಾಲೂಕಿನ ದೇವರಗುಡ್ಡdevaragudda karnika ಐತಿಹಾಸಿಕ ಮಾಲತೇಶ ದೇವಸ್ಥಾನದಲ್ಲಿ ಗೊರವಪ್ಪಜ್ಜ ನಾಗಪ್ಪ ದುರುಗಪ್ಪ ಉರ್ಮಿ ಪ್ರಸ್ತುತ ವರ್ಷದ ಕಾರ್ಣಿಕ ನುಡಿದು ಕೆಳಗೆ ಧುಮುಕಿದರು.

ಈ ಬಾರಿ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಬರಗಾಲ ಎದುರಾಗಿರುವುದರಿಂದ ರೈತರಿಗೆ ಭಾರೀ ನಷ್ಟವಾಗುವ ಸಂಭವ ಇದೆ. ರೈತರು ಭೂಮಿಗೆ ಸುರಿದ ಬಂಡವಾಳ ಕೈಗೆ ವಾಪಸ್ ಬರುವುದು ಕಷ್ಟ ಎಂದು ಈ ಕಾರ್ಣಿಕ ನುಡಿಯನ್ನು ವಿಶ್ಲೇಷಿಸಲಾಗಿದೆ.

mysore; ಮೈಸೂರಿನಲ್ಲಿ ಜಂಬೂಸವಾರಿಗೆ ಕ್ಷಣಗಣನೆ

ಸೋಮವಾರದಂದು ನಡೆದ ದೇವರಗುಡ್ಡದ ಮಾಲತೇಶ ದೇವಸ್ಥಾನದ ಈ ಉತ್ಸವ ಹಿಂದೆ ಸುಮಾರು ವರ್ಷಗಳ ಇತಿಹಾಸ ಅಡಗಿದೆ. ದಸರಾ ಹಬ್ಬದ ಸಮಯದಲ್ಲಿ ದೇವರಗುಡ್ಡದ ಕರಿಯಾಲ ಪ್ರದೇಶದಲ್ಲಿ ನಡೆಯುವ ಮಾಲತೇಶ ದೇವರ ಕಾರ್ಣಿಕ ಕೇಳಲು ಜನರ ದಂಡೇ ನರೆದಿರುತ್ತದೆ. ಸುಮಾರು 9 ದಿನಗಳ ಕಾಲ ಕಠಿಣ ಉಪವಾಸ ವ್ರತ ಮಾಡಿ ಗೊರವಪ್ಪ ನಾಗಪ್ಪ ಉರ್ಮಿ ಕಾರ್ಣಿಕ ನುಡಿಯುತ್ತಾರೆ.

ಕರಿಯಾಲ ಪ್ರದೇಶಕ್ಕೆ ಡಮರುಗ, ಚಾಟಿ ಏಟಿನ ಸದ್ದಿನ‌ ಮೂಲಕ ಗೊರವಪ್ಪಗಳು ಕಾರ್ಣಿಕದ ಗೊರವಪ್ಪನನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರ್ತಾರೆ‌. ಸಂಜೆಯಾಗುತ್ತಿದಾಗೆ ಕಾರ್ಣಿಕ ಸ್ಥಳಕ್ಕೆ ಬರೋ ಗೊರವಯ್ಯ 15 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೇ ನೆರೆದಿದ್ದ ಸಾವಿರಾರು ಜನರು ಮೌನಕ್ಕೆ ಜಾರುತ್ತಾರೆ. ಆಗ ಗೊರವಪ್ಪ ನಾಗಪ್ಪ ಉರ್ಮಿ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾನೆ‌. ನಂತರ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಕಾರ್ಣಿಕ ವಾಣಿಯ ವಿಶ್ಲೇಷಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!