krs dam; ವಿಜಯದಶಮಿಯಂದೆ ಕೆಆರ್‌ಎಸ್‌ ಜಲಾಶಯದಲ್ಲಿ ನೀರು ಕುಸಿತ: ಬೇಸತ್ತ ಜನ

DCF 1.0

ಮಂಡ್ಯ, ಅ.24: ರಾಜ್ಯಾದ್ಯಂತ ವಿಜೃಂಭಿಸುತ್ತಿರುವ ವಿಜಯದಶಮಿ ದಿನದಂದೆ ದಕ್ಷಿಣ ಕರ್ನಾಟಕ ಜೀವನಾಡಿಯಾದ ಕಾವೇರಿ ನದಿಯ ಪ್ರಮುಖ ಜಲಾಶಯ ಕೆಆರ್‌ಎಸ್‌ನಲ್ಲಿ (krs dam) ನೀರಿನ ಮಟ್ಟ 100 ಅಡಿಗಿಂತ ಕೆಳಮಟ್ಟಕ್ಕೆ ಇಳಿದಿರುವುದು ಸಾಕಷ್ಟು ಜನರಲ್ಲಿ ಬೇಸರ ತಂದಿದೆ.

ಸೆಪ್ಟೆಂಬರ್‌ ಕೊನೆಯ ವಾರ ಹಾಗೂ ಅಕ್ಟೋಬರ್‌ ಮೊದಲ ವಾರ ಉತ್ತಮ ಮಳೆಯಾದ್ದರಿಂದ ಅಕ್ಟೋಬರ್‌ 4 ರಂದು ನೀರಿನ ಮಟ್ಟ 100 ಅಡಿ ದಾಟಿತ್ತು. ಆ ಬಳಿಕವೂ ಎರಡು ವಾರ ಏರಿಕೆಯಲ್ಲಿ ಸಾಗಿ 102 ಅಡಿ ಮುಟ್ಟಿತ್ತು. ಈ ಮೂಲಕ ಮಂಡ್ಯ, ಮೈಸೂರು, ರಾಮನಗರ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ, ಕಳೆದ ಒಂದು ವಾರದಿಂದ ಹಿಂಗಾರು ಮಳೆ ಇಲ್ಲದರಿಂದ ಜಲಾಶಯದ ನೀರಿನ ಮಟ್ಟವು 100ಕ್ಕಿಂತ ಕಡಿಮೆ ಅಡಿಗೆ ಇಳಿದಿರುವುದು ಜನರಲ್ಲಿ ಬೇಸರ ತಂದಿದೆ.

devaragudda karnika; ದೇವರಗುಡ್ಡದ ಕಾರ್ಣಿಕ: ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್

ಕೆಆರ್‌ಎಸ್‌ ನೀರಾವರಿ ನಿಗಮದ ಮಾಹಿತಿ ಪ್ರಕಾರ, ಮಂಗಳವಾರ ಬೆಳಿಗ್ಗೆ 8 ಗಂಟೆ ಹೊತ್ತಿಗೆ 99.7 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇನ್ನು ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯವು 124.8 ಅಡಿಯಾಗಿದೆ. 25 ಅಡಿಯಷ್ಟು ಜಲಾಶಯದಲ್ಲಿ ನೀರಿನ ಕೊರತೆ ಇದೆ.

ಇಂದು ಕೆ.ಆರ್.ಎಸ್ ಜಲಾಶಯದ ನೀರಿನ ಒಳ ಹರಿವು 2048 ಕ್ಯೂಸೆಕ್ಸ್ ಇದ್ದರೆ, ಹೊರ ಹರಿವು 4778 ಕ್ಯೂಸೆಕ್ಸ್ ಇದ್ದು, ಕಳೆದ ಒಂದು ವಾರದಿಂದಲೇ ಒಳಹರಿವು ತಗ್ಗಿದೆ. ಇನ್ನೂ ಕೆಆರ್ಎಸ್ ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯವು 49.452 ಟಿಎಂಸಿ ಆಗಿದ್ದು, ಸದ್ಯ ಜಲಾಶಯಲ್ಲಿ 22.592 ಟಿಎಂಸಿ ನೀರು ಸಂಗ್ರಹವಿದೆ. ಅಂದರೆ, ಶೇ.45ರಷ್ಟು ಮಾತ್ರ ನೀರಿದ್ದು, ಅರ್ಧಕ್ಕಿಂತ ಹೆಚ್ಚು ಜಲಾಶಯ ಖಾಲಿ ಇದೆ. ಇನ್ನು ಬಳಕೆ ಮಾಡಲು ಯೋಗ್ಯವಿರುವ ನೀರಿನ ಪ್ರಮಾಣ 14.213 ಟಿಎಂಸಿಯಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!