ಅಭಿವೃದ್ದಿಯ ಸಮತೋಲನಕ್ಕೆ ಕೈಗಾರಿಕೆಗಳ ಸ್ಥಾಪನೆ ಬಹಳ ಮುಖ್ಯ; ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ

ದಾವಣಗೆರೆ: ಅಭಿವೃದ್ದಿಯ ಸಮತೋಲನ ಕಾಪಾಡಲು ಜಿಲ್ಲಾ ಮಟ್ಟದಲ್ಲಿಯೂ ಕೈಗಾರಿಕೆಗಳ ಸ್ಥಾಪನೆಯಾಗಬೇಕೆಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಮಂಗಳವಾರ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ಬ್ಯಾಂಕ್ ಆಫ್ ಇಂಡಿಯಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆನರಾ ಬ್ಯಾಂಕ್ ಮತ್ತು ರಾಜ್ಯ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರ ಸಂಘ ಇವರ ವತಿಯಿಂದ ದಾವಣಗೆರೆಯಲ್ಲಿ ಹರಿಹರ ರಸ್ತೆಯಲ್ಲಿರುವ ಹೋಟೆಲ್ ಸಾಯಿ ಇಂಟರ್ ನ್ಯಾಷನಲ್‍ನಲ್ಲಿ ಎಂಎಸ್‍ಎಂಇಗಳಿಗೆ ಆರ್ಥಿಕ ಸಾಕ್ಷರತೆ ಮತ್ತು ಉದಯೋನ್ಮುಖ ಅವಕಾಶಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೈಗಾರಿಕೆಗಳು ಒಂದು ದೇಶದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿವೆ, ಕೈಗಾರಿಕೋದ್ಯಮ ಬೆಳೆದಂತೆ ಗುಡಿ ಕೈಗಾರಿಕೆಗಳ ಇಳಿಕೆಯಾಯಿತು. ಸ್ವಾತಂತ್ರ್ಯದ ನಂತರ ದೇಶದ ಅನೇಕ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಯಾಯಿತು. ಇಂತಹ ಕೈಗಾರಿಕೆಗಳು ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪನೆಯಾಗುವುದರಿಂದ ಅಭಿವೃದ್ದಿಯಲ್ಲಿ ಸಮತೋಲನತೆಯನ್ನು ಕಾಪಾಡಲು ಸಾಧ್ಯವಾಗಲಿದೆ. ಕೈಗಾರಿಕೋದ್ಯಮ ಬೆಳೆಯಲು ಸ್ಥಳೀಯ ಉದ್ದಿಮೆದಾರರು ಮುಂದೆ ಬರಬೇಕು. ದಾವಣಗೆರೆ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ವಿಪುಲವಾದ ಅವಕಾಶಗಳಿವೆ, ಇಲ್ಲಿ ಮಾನವ ಸಂಪನ್ಮೂಲ, ಕೌಶಲ್ಯತೆ, ಸಮತಟ್ಟಾದ ಭೂಮಿ, ನೀರಿನ ಲಭ್ಯತೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳು ಇಲ್ಲಿವೆ ಎಂದರು.
ಸಣ್ಣ ಕೈಗಾರಿಕೆಗಳ ಅಭಿವೃದ್ದಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾದ ಎಂ.ಆರ್. ವಿಕಾಸ್. ಮಾತನಾಡಿ ಸಿಡ್ಬಿ 1990 ರಲ್ಲಿ ಐಡಿಬಿಐ ಒಂದು ಸಂಸ್ಥೆಯಾಗಿದೆ. ಈ ಸಿಡ್ಬಿಯಲ್ಲಿ ಸರ್ಕಾರ , ಬ್ಯಾಂಕ್, ಇನ್ಸುರೆನ್ಸ್ ಕಂಪನಿಗಳು ಬಂಡವಾಳ ಹೂಡುತ್ತಿವೆ. ಕೈಗಾರಿಕೆಗಳ ಅಭಿವೃದ್ದಿ, ಪ್ರೋತ್ಸಾಹ, ಹಣಕಾಸು ನೆರವು ಇವು ಕೈಗಾರಿಕೆಗಳ ಅಭಿವೃದ್ದಿ ಬ್ಯಾಂಕ್‍ನ ಕಾರ್ಯಕ್ರಮವಾಗಿದೆ ಎಂದರು.
ಕೆನರಾ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ವಿ.ಎನ್. ಶಿವಪ್ರಸಾದ್. ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ್ ಕದಂ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಶಿವಲಿಂಗಪ್ಪ ಎನ್. ಕುಂಬಾರ, ಕ್ಯಾಸಿಯಾ ಅಧ್ಯಕ್ಷರಾದ ಸಿಎ ಶಶಿಧರ್ ಶೆಟ್ಟಿ, ಶೇಷಾಚಲ ಭಾಗವಹಿಸುವರು.