ಹೆಬ್ಬಾಳ್ ನಲ್ಲಿ ಫೆಬ್ರವರಿ ೨೭ ರಂದು ದಾವಣಗೆರೆ ತಾಲ್ಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ.

ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ:
ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದಲ್ಲಿರುವ ಶ್ರೀ ರುದ್ರೇಶ್ವರ ಸ್ವಾಮಿ ವೀರಕ್ತಮಠ ದಲ್ಲಿ ಶ್ರೀ. ಮ.ನಿ.ಪ. ಮಹಂತರುದ್ರೇಶ್ವರ ಮಹಾಸ್ವಾಮಿಗಳು, ಶ್ರೀ ರುದ್ರೇಶ್ವರ ವಿರಕ್ತಮಠ, ಹೆಬ್ಬಾಳು ಇವರ ದಿವ್ಯ ಸಾನಿಧ್ಯದಲ್ಲಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ವಾಮದೇವಪ್ಪ ನವರ ನೇತೃತ್ವದಲ್ಲಿ, ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ನವರ ಅಧ್ಯಕ್ಷತೆಯಲ್ಲಿ ದಾವಣಗೆರೆ ತಾಲ್ಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಹಮ್ಮಿಕೊಳ್ಳಲು ಹೆಬ್ಬಾಳ್ ಮಠದಲ್ಲಿ ಮೊದಲ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಬಿ ವಾಮದೇವಪ್ಪ ನವರು ಮಾತನಾಡಿ ಜಿಲ್ಲಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಹೆಬ್ಬಾಳು ಶ್ರೀ ಗಳಿಗೆ ಹೆಬ್ಬಾಳಿನಲ್ಲಿ ಸಮ್ಮೇಳನ ಆಯೋಜಿಸುತ್ತೆನೆಂದು ಮಾತುಕೊಟ್ಟಿದ್ದೆ. ಅದರಂತೆ ಈ ವರ್ಷ ಹೆಬ್ಬಾಳಿನಲ್ಲಿ ದಾವಣಗೆರೆ ತಾಲ್ಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಅನುವುಮಾಡಿಕೊಡುವಂತೆ ಶ್ರೀಗಳಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪೂಜ್ಯರು ಬಹಳ ಸಂತೋಷದಿಂದ ಸಮ್ಮತಿಸಿ ಆಶೀರ್ವದಿಸಿದರು.
ದಾವಣಗೆರೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ನವರು ಮಾತನಾಡಿ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಪೂಜ್ಯರ ಆಶೀರ್ವಾದ ಹಾಗೂ ಗ್ರಾಮಸ್ಥರ ಸಹಕಾರ ಬೇಕೆಂದು ಮನವಿಮಾಡಿದರು.

ಸಭೆಯಲ್ಲಿ ಪೂಜ್ಯರೊಂದಿಗೆ ಚರ್ಚಿಸಿ ೨೦೨೪ ರ ಫೆಬ್ರವರಿ ೨೭ ರಂದು ದಿನಾಂಕ ನಿಗಧಿ ಮಾಡಿ ಮಠದ ಆಶ್ರಯದಲ್ಲಿರುವ ವಿಶಾಲವಾದ ಕಲ್ಯಾಣ ಮಂಟಪದಲ್ಲಿ ನಡೆಸಲು ತೀರ್ಮಾನಿಸಲಾಯಿತು.ಇದನ್ನು ಸಭೆಯಲ್ಲಿ ಹಾಜರಿದ್ದ ಗ್ರಾಮದ ಎಲ್ಲಾ ಪ್ರಮುಖರು ಹಾಗೂ ಜಿಲ್ಲಾ ಹಾಗೂ ತಾಲ್ಲೂಕು ಕ ಸಾ ಪ ಪದಾಧಿಕಾರಿಗಳು ಸ್ವಾಗತಿಸಿದರು.ಪೂಜ್ಯರು
ಸಮ್ಮೇಳನದ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ- ಸಹಾಯ ನೀಡಲಾಗುವುದೆಂದು ಭರವಸೆ ನೀಡಿ ಆಶೀರ್ವದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾದ ಸಿ ಜಿ ಜಗದೀಶ್ ಕೂಲಂಬಿ ಸಮ್ಮೇಳನದ ಮಹತ್ವ ಹಾಗೂ ಒಂದು ದಿನದ ಸಮ್ಮೇಳನದ ಕಾರ್ಯಕ್ರಮಗಳ ರೂಪರೇಷೆ ಗಳನ್ನು ಮತ್ತು ಸಿದ್ಧತೆ ಕುರಿತಾಗಿಮತ್ತು ತಗಲಬಹುದಾದ ಖರ್ಚಿನ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾ ಕ ಸಾ ಪ ಗೌರವ ಕಾರ್ಯದರ್ಶಿ ಬಿ ದಿಳ್ಯಪ್ಪ, ತಾಲ್ಲೂಕು ಕಾರ್ಯದರ್ಶಿ ದಾಗಿನಕಟ್ಟೆ ಪರಮೇಶಪ್ಪ, ಕೋಶಾಧ್ಯಕ್ಷರಾದ ಪಾಲಾಕ್ಷಪ್ಪ ಗೋಪಾನಾಳು, ನಿರ್ದೇಶಕರಾದ ಎಂ ಷಡಕ್ಷರಪ್ಪ ಬೇತೂರು, ಸೌಭಾಗ್ಯಮ್ಮ,ಪಂಕಜಾ ಬಕ್ಕೇಶ್,ಶಿವಕುಮಾರ್,ಉಪಸ್ಥಿತರಿದ್ದರು, ಹಾಗೂ ಹೆಬ್ಬಾಳ್ ಗ್ರಾಮಪಂಚಾಯಿತಿ ಸದಸ್ಯರಾದ ಮಹಾರುದ್ರಯ್ಯ, ಬಸಮ್ಮ ಬಸವರಾಜಪ್ಪ, ಮಹಾಂತೇಶ್, ರೈತರಾದ ನರೇಂದ್ರಬಾಬು, ರುದ್ರೇಶ್, ಮಹೇಂದ್ರ, ಟಿ ಸಿ ರುದ್ರೇಶ್, ಶಿವಕುಮಾರ್ ಮತ್ತು ಶಿಕ್ಷಕರಾದ ತಿಪ್ಪೆಸ್ವಾಮಿ, ಗ್ರಾಮೀಣ ಬ್ಯಾಂಕ್ ನ ಕ್ಯಾಶಿಯರ್ ಮಂಜುನಾಥ್ ಎಚ್ ಆರ್, ಪಿ ಡಿ ಓ ಹಿಮಂತ್ ರಾಜ್ ಮತ್ತಿತರರು ಭಾಗವಹಿಸಿದ್ದರು.
ಕೊನೆಯಲ್ಲಿ ಶಿಕ್ಷಕ ತಿಪ್ಪೆಸ್ವಾಮಿ ಎಲ್ಲರಿಗೂ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!