ಧರ್ಮಸ್ಥಳ ಕೃಪೆ; ಹನೂರು ತಾಲ್ಲೂಕಿನ ಶಾಗ್ಯ ಗ್ರಾಮದ ಜನರ ಕನಸು ನನಸು

ಚಾಮರಾಜನಗರ: ಹನೂರು ತಾಲ್ಲೂಕಿನ ಶಾಗ್ಯ ಗ್ರಾಮದ ಹಾಲು ಉತ್ಪಾದಕರ ಕನಸು ನನಸಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಭಿವೃದ್ದಿ ವತಿಯಿಂದ ಬಂಡಳ್ಳಿ ವಲಯದ ಶಾಗ್ಯ ಗ್ರಾಮದ ಹಾಲು ಉತ್ಪಾದಕರ ಸಂಘಕ್ಕೆ ಕಟ್ಟಡ ನಿರ್ಮಾಣ ಮಾಡಲು ಎರಡು ಲಕ್ಷ ಸಹಾಯಧನ ಮಂಜೂರು ಪತ್ರ ನೀಡಲಾಗಿದೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜೀರ್ಣೋದ್ಧಾರ ಯೋಜನೆ ಅಡಿಯಲ್ಲಿ ಶ್ರೀ ಫಲಹಾರ ಪ್ರಭು ಸ್ವಾಮಿ ಸಮುದಾಯ ಭವನಕ್ಕೆ ವೀರೇಂದ್ರ ಹೆಗಡೆ ಅವರಿಂದ 3 ಲಕ್ಷ ರೂ ಸಹಾಯಧನ ಮಂಜೂರು ಆಗಿದ್ದು ಮಂಜೂರಾತಿ ಪತ್ರವನ್ನು ಬುಧವಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ನಿರ್ದೇಶಕರಾದ ಲತಾ ಬಂಗೇರೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಾಲು ಉತ್ಪಾದಕರ ಒಳಿತಿಗಾಗಿ ಹಾಗೂ ಅಭಿವೃದ್ಧಿಗಾಗಿ ಧರ್ಮಸ್ಥಳ ಧರ್ಮಾಧಿಕಾರಿಗಳು 2,00,000 ರೂಪಾಯಿ ಸಹಾಯಧನ ನೀಡಿದ್ದು ಮುಂದಿನ ದಿನಗಳಲ್ಲಿ ಶಾಗ್ಯ ಹಾಲು ಉತ್ಪಾದಕರ ಸಹಕಾರ ಸಂಘವು ಮಾದರಿ ಸಂಘವಾಗಿ ಬೆಳೆಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಎಂಐಎಸ್ ಯೋಜನೆ ಅಧಿಕಾರಿ ಗಣಪತಿ ,ಹನೂರು ತಾಲೂಕಿನ ಯೋಜನಾಧಿಕಾರಿ ಪ್ರವೀಣ್ ಕುಮಾರ್, ಶಾಗ್ಯ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಶಿವಸ್ವಾಮಿ, ಜನ ಜಾಗೃತಿ ಸದಸ್ಯರಾದ ರಾಚಪ್ಪ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರವಿ, ಶಾಗ್ಯ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಹಾಗೂ ಧರ್ಮಸ್ಥಳ ಸಂಸ್ಥೆಯ ಸೇವಾ ಪ್ರತಿನಿಧಿಗಳಾದ ಸುಜಾತ, ಸುಂದರಮ್ಮ, ರಾಜೇಶ್ವರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!