ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ಕೊಡುವ ಬದಲು ವಡೆ ನೀಡುವ ಮೂಲಕ ವಿಭಿನ್ನ ಜಾಗೃತಿ

Different awareness by giving warning to traffic violators instead of punishing them

Different awareness by giving warning to traffic violators instead of punishing them

ದಾವಣಗೆರೆ: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಆಯಾ ನಗರಗಳಲ್ಲಿ ಪೊಲೀಸರು ಸಹಜವಾಗಿ ದಂಡ ಹಾಕಿ ನಿಯಮ ಪಾಲಿಸುವಂತೆ ಎಚ್ಚರಿಸುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಮಾಡುವವರಿಗೆ ಹೆಲ್ಮೆಟ್‌, ಗುಲಾಬಿ ನೀಡುವ ಮೂಲಕ ಸಂಚಾರ ಜಾಗೃತಿ ಮೂಡಿಸುವುದು ನಿಮಗೆಲ್ಲ ತಿಳಿದಿದೆ.

ಆದರೆ ದಾವಣಗೆರೆಯಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಂಚಾರ ನಿಯಮ ಉಲ್ಲಂಘನೆ ಮಾಡುವವರಲ್ಲಿ ಜಾಗೃತಿ ಮೂಡಿಸಲು ಚಾಕೊಲೆಟ್‌ ಮತ್ತು ವಡೆ ಕೊಡುವ ಮೂಲಕ ವಿಭಿನ್ನವಾಗಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇವರೇಕೆ ಚಾಕೊಲೆಟ್ ಹಾಗೂ ವಡೆಯನ್ನೆ ಆಯ್ದುಕೊಂಡರು? ಇಂತಹ ವಿಭಿನ್ನ ಯೋಚನೆ ಇವರೀಗೆ ಹೇಗೆ ಬಂತು? ಎಂಬುದರ ಕುರಿತು ಸವಿವರವಾಗಿ ಇಲ್ಲಿ ನೋಡೋಣ.

ದಾವಣಗೆರೆಯ ಸಾಮಾಜಿಕ ಕಾರ್ಯಕರ್ತ ಎಂ.ಜಿ ಶ್ರೀಕಾಂತ್ ಎಂಬುವವರು ನಗರದ ಪಿಬಿ ರಸ್ತೆ, ಎವಿಕೆ ಕಾಲೇಜು, ಬಾಪೂಜಿ ಡೆಂಟಲ್ ಕಾಲೇಜ್ ಸೇರಿದಂತೆ ಜನನಿಬಿಡ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಬೈಕ್, ಕಾರು ಚಾಲಕರಿಗೆ ವಡೆ ಹಾಗೂ ಚಾಕ್ಲೇಟ್ ಗಳನ್ನು ಕೊಡುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಸಧ್ಯದಲ್ಲಿ ಟ್ರೆಂಡಿಂಗ್ ಹಾಗಿದೆ.

ಪ್ರಸ್ತುತತೆಯಲ್ಲಿ ದಾವಣಗೆರೆ ನಗರದಲ್ಲಿ ವಾಹನಗಳ ದಟ್ಟನೆ ಹೆಚ್ಚಾಗಿದ್ದು, ದೊಡ್ಡ ದೊಡ್ಡ ಸಿಟಿಗಳಿಗಿಂತ ತಾನೇನು ಕಡಿಮೆ ಇಲ್ಲ ಎಂದು ಎಲ್ಲೆಡೆ ಬೀರುತ್ತಿದೆ. ಈ ಟ್ರಾಫಿಕ್ ನಿಯಂತ್ರಿಸುವ ಉದ್ದೇಶದಿಂದ ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಎಲ್ಲ ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಗಳ ಅಳವಡಿಕೆಯೂ ತುಸು ಹೆಚ್ಚಾಗೆ ಮಾಡಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಒನ್‌ ವೇ ಕೂಡ ಮಾಡಲಾಗಿದೆ.

ಹೀಗಿದ್ದರು ಕೆಲ ವಾಹನ ಸವಾರರು ಮಾತ್ರ ಸರಿಯಾಗಿ ಸಂಚಾರ ನಿಯಮಗಳನ್ನು ಪಾಲಿಸದೆ ತಮಗೆ ಇಷ್ಟ ಬಂದಂತೆ ಎಲ್ಲೆಂದರಲ್ಲಿ ವಾಹನಗಳನ್ನು ನುಗ್ಗಿಸಿಕೊಂಡು ಓಡಾಡುತ್ತಾರೆ. ಒನ್ ವೇ ಗಳಲ್ಲಿಯೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಎದುರು ಬದುರಾಗಿ ಚಲಿಸೋದು ಮತ್ತು ರೆಡ್ ಸಿಗ್ನಲ್ ಇದ್ದರೂ ಕೂಡ ನಿಯಮ ಉಲ್ಲಂಘಿಸಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುವುದು ಸರ್ವೇ ಸಾಮಾನ್ಯವಾಗಿದೆ.

ಹಳೇ ಪಿಬಿ ರಸ್ತೆ, ಎವಿಕೆ ರಸ್ತೆ ಸೇರಿ ವಿವಿಧೆಡೆ ಅಪಘಾತಗಳು ಸಂಭವಿಸಿ ವಾಹನಗಳ ಸವಾರರು ಪ್ರಾಣವನ್ನು ಕಳೆದುಕೊಂಡಿರುವ ದೃಶ್ಯಗಳನ್ನು ನಾವು ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ನೋಡುತ್ತಲೆ ಇದ್ದರು, ಸಂಚಾರ ನಿಯಮವನ್ನು ಮಾತ್ರ ಸರಿಯಾಗಿ ಪಾಲಿಸುತ್ತಿಲ್ಲ. ಇನ್ನೂ ಕೆಲ ಸವಾರರು ಗಂಭೀರವಾಗಿ ಗಾಯಗೊಂಡು ತಮ್ಮ ಜೀವನವನ್ನೇ ನರಕ ಮಾಡಿಕೊಂಡಿರುವ ದೃಶ್ಯಗಳು ಕಣ್ಣ ಮುಂದಿದೆ.

ಈತನಿಗೆ ಪೊಲೀಸರ ಫುಲ್ ಸಪೋರ್ಟ್:

ಹೌದು! ತಪ್ಪು ಮಾಡಿದಾಗ ದಂಡಿಸುವ ಇದೇ ಪೊಲೀಸರು, ಒಳ್ಳೆ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಸಪೋರ್ಟ್ ಕೂಡ ಮಾಡುತ್ತಾರೆ ಎಂಬುದ್ದಕ್ಕೆ ಇದೆ ಅದ್ಬುತ ಸಾಕ್ಷಿ. ಪ್ರತಿನಿತ್ಯ ನಗರದಲ್ಲಿ ಸಣ್ಣ ಪುಟ್ಟ ಅಪಘಾತಗಳು ನಡೆಯುತ್ತಿದ್ದು, ಇದನ್ನು ತಡೆಯುವ ದೃಷ್ಟಿಯಿಂದ ದಾವಣಗೆರೆ ಜಿಲ್ಲಾ ಪೊಲೀಸರು ಮತ್ತು ನಗರದಲ್ಲಿರುವ ಉತ್ತರ ಮತ್ತು ದಕ್ಷಿಣ ಸಂಚಾರ ಠಾಣೆ ಪೊಲೀಸರು ನಗರದಲ್ಲಿ ನಿಯಮಗಳನ್ನು ಜಾರಿ ಮಾಡಿ ಕ್ರಮಗಳನ್ನು ಕೂಡ ಕೈಗೊಳ್ಳುತ್ತಿದ್ದಾರೆ.

ಇಷ್ಟಾದರೂ ಕೂಡ ಕೆಲವರು ತಮ್ಮ ತುರ್ತು ಕೆಲಸಗಳ ಸಂಬಂಧ ಹಾಗೂ ಕಿಡಿಗೇಡಿಗಳು ನಿಯಮಗಳನ್ನು ಮೀರಿ ಅಸಂಬದ್ದ ವರ್ತನೆಯನ್ನು ತೋರುತ್ತಿದ್ದಾರೆ. ಹೀಗಾಗಿ, ಸಂಚಾರ ನಿಯಮಗಳನ್ನು ವಾಹನ ಸವಾರರು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಶ್ರಮಪಡುತ್ತಿರುವ ಸಾಮಾಜಿಕ ಕಾರ್ಯಕರ್ತರಿಗೆ ಪೊಲೀಶರ ಸಪೋರ್ಟ್ ಸದಾ ಇರುತ್ತದೆ ಎಂದು ಬೆನ್ನೆಲುಬಾಗಿ ನಿಂತಿದ್ದಾರೆ.

ವಡೆ ಹಾಗೂ ಚಾಕೊಲೆಟ್ ನ ಆಯ್ಕೆ ಯಾಕೆ?

ಅಪಘಾತ ಸಂಭವಿಸಿ ಆಸ್ಪತ್ರೆ ಸೇರಿದಾಗ ಪೋಷಕರು ಕಣ್ಣೀರು ಹಾಕುತ್ತಾರೆ, ಒಂದು ವೇಳೆ ಅಪಘಾತದಲ್ಲಿ ಮೃತಪಟ್ಟರೆ ಮನೆಯವರೆಲ್ಲಾ ಕಣ್ಣೀರು ಹಾಕಿ ತಿಥಿ ಮಾಡಿ ವಡೆ ತಿಂತಾರೆ. ಹಾಗಾಗಿ, ಮೊದಲು ನೀವೇ ವಡಾ ತಿನ್ನಿ. ಆಗಲಾದರೂ ನಿಮಗೆ ನೆನಪಿಗೆ ಬರಬಹುದು. ಹಾಗಾಗಿ, ವಡೆ ತಿನ್ನುವ ಮೂಲಕ ಸಂಚಾರ ನಿಯಮ ಪಾಲಿಸಿ. ಆಗ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಎಂದು ಎಚ್ಚರಿಸುತ್ತಾರೆ.

ಇದೀಗ ಶ್ರೀಕಾಂತ್ ಕೆಲಸಕ್ಕೆ ವಾಹನ ಸವಾರರು ಥ್ಯಾಂಕ್ಸ್ ಹೇಳುತ್ತಿದ್ದು, ಸಾರ್ವಜನಿಕರಿಂದಲೂ ಕೂಡ ಪ್ರಶಂಸೆ ವ್ಯಕ್ತವಾಗುತ್ತಿದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!