ಜಾರ್ಖಂಡ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರ ಮನೆಯಲ್ಲಿ ಕೋಟಿಗಟ್ಟಲೇ ಹಣ ಪತ್ತೆ

Money worth crores found in Jharkhand Rajya Sabha member Dheeraj Sahu's house

ಜಾರ್ಖಂಡ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರ ಮನೆಯಲ್ಲಿ ಕೋಟಿಗಟ್ಟಲೇ ಹಣ ಪತ್ತೆ ಪ್ರಕರಣವನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಇಂದು ಬೆಳಿಗ್ಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಬಿಜೆಪಿ ಕಾರ್ಯಾಲಯದಿಂದ ಪ್ರಾರಂಭವಾಗಿ ಅಶೋಕ ರಸ್ತೆ, ಜಯದೇವ ಸರ್ಕಲ್, ಪ್ರವಾಸಿ ಮಂದಿರ ರಸ್ತೆ ಮುಖಾಂತರ ಮಹಾನಗರ ಪಾಲಿಕೆಯ ಮುಂಭಾಗದ ಭಗತ್ ಸಿಂಗ್ ಪ್ರತಿಮೆಗೆ ಅಂತ್ಯಗೊಳಿಸಿದರು.

ಜಾರ್ಖಂಡ್ ರಾಜ್ಯದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಅವರಿಗೆ ಸೇರಿದ ಸ್ಥಳಗಳ ಮೇಲೆ ಐಟಿ ದಾಳಿ ಮಾಡಿದಾಗ ಸುಮಾರು ₹400 ಕೋಟಿಗೂ ಹೆಚ್ಚು ಹಣ ದೊರೆತಿದ್ದು ದೇಶದ ಅತ್ಯಂತ ದೊಡ್ಡ ಭ್ರಷ್ಟಾಚಾರದ ಪ್ರಕರಣ ಇದಾಗಿದೆ. ಇದನ್ನು ಖಂಡಿಸುವುದರ ಮೂಲಕ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು ಭಾಗಿಯಾದರು.

Leave a Reply

Your email address will not be published. Required fields are marked *

error: Content is protected !!