ಉಪಯೋಗವಿಲ್ಲದ ನಿರಾಸದಾಯಕ ಬಜೆಟ್ : ಬಸವರಾಜು ವಿ ಶಿವಗಂಗಾ
ಚನ್ನಗಿರಿ : ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಿರಾಸೆದಾಯಕವಾಗಿದೆ ಜನ ಸಮಾನ್ಯರಿಗೆ ಯಾವುದೇ ಉಪಯೋಗವಿಲ್ಲ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ತಿಳಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಇಲ್ಲದಿರುವುದು ಸಪ್ಪೆ ಬಜೆಟ್ ಎಂದರು. ಈ ಬಜೆಟ್ ನಿಂದ ರೈತರು, ಬಡವರು, ಕೂಲಿ ಕಾರ್ಮಿಕರಿಗೆ ಅನುಕೂಲವಿಲ್ಲ. ಅಧಿಕಾರಿಗಳು ಬರೆದುಕೊಟ್ಟ ಪುಸ್ತಕವನ್ನ ಸಿಎಂ ಬಸವರಾಜು ಬೊಮ್ಮಾಯಿ ಅವರು ಶಾಸ್ತ್ರದಂತೆ ಬಜೆಟ್ ಓದಿದ್ದಾರೆ ಎಂದರು. ಇನ್ನೂ ಈ ಬಾರಿ ದಾವಣಗೆರೆ ಜಿಲ್ಲೆಯನ್ನ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಷಹಾಜಿ ಸಮಾಧಿಗೆ 5 ಕೋಟಿ, ಸೊರಗೊಂಡನಕೊಪ್ಪಗೆ 5 ಕೋಟಿ ಹಾಗೂ ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದಾಗಿ ಹೇಳಲಾಗಿದೆ ಇದನ್ನ ಹೊರತುಪಡಿಸಿದರೆ ದಾವಣಗೆರೆ ಜಿಲ್ಲೆಗೆ ಶಾಶ್ವತ ಪರಿಹಾರ ಸಿಗುವಂತ ಯಾವ ಯೋಜನೆಗಳು ಇಲ್ಲ. ಜಿಲ್ಲೆಯಲ್ಲಿ ಗೆದ್ದ ಬಿಜೆಪಿ ಶಾಸಕರಿಗೆ ನಾಚಿಕೆಯಾಗಬೇಕು ದಾವಣಗೆರೆ ಜಿಲ್ಲೆಗೆ ಅನುದಾನ ಹಾಗೂ ಯೋಜನೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಬಸವರಾಜು ವಿ ಶಿವಗಂಗಾ ಅವರು ತಿಳಿಸಿದರು.