ಜಿಲ್ಲಾ ಭೋವಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ.!ನಾವುಯೆಂಬ ಸಮಷ್ಠಿ ಭಾವದಿಂದ ಸಮಾಜ ಉದ್ಧಾರ ಸಾಧ್ಯ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

 

ದಾವಣಗೆರೆ: ನಾನು ಎಂಬ ಭಾವ ಹೋಗಿ ನಾವುಯೆಂಬ ಭಾವ ಬಂದಾಗ ಸಮಷ್ಠಿ ಉದ್ಧಾರ ಸಾಧ್ಯ. ನಾವು ಎಂಬ ಭಾವವುಂಟಾಗಲು ವಿರೋಧ ವ್ಯಕ್ತಪಡಿಸುವವರ ವಿಶ್ವಾಸಗಳಿಸಬೇಕು, ಆಗ ಸದೃಢ ಸಂಘಟನೆ ಸಾಧ್ಯ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಭೋವಿಗುರುಪೀಠದಲ್ಲಿ ನಡೆದ ದಾವಣಗೆರೆ ಜಿಲ್ಲಾ ಭೋವಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ‌ ಮಾತನಾಡಿದ ಅವರು, ವೈರುಧ್ಯಗಳಿದ್ದಲ್ಲಿ ವೈಮನಸ್ಸುಗಳು ಉಂಟಾಗುವುದು ಸಹಜ. ಆದ್ದರಿಂದ, ಎಲ್ಲರ ವಿಶ್ವಾಸ ಗಳಿಸಿ ಸಂಘಟನೆ ಕಟ್ಟಿರಿ‌ ಎಂದು ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು‌.

ಭವಿಷ್ಯದ ದಿನಗಳಲ್ಲಿ ಚುನಾಯಿತ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಸೂಕ್ತ ಮಾರ್ಗದಲ್ಲಿ ಷುನಾವಣೆ ನಡೆಯಲಿ. ಇದಕ್ಕಾಗಿ ಒಂದು ವರ್ಷಗಳ ಕಾಲ ಸದಸ್ಯತ್ವ ಅಭಿಯಾನ ನಡೆಸಿ ಎಂದು ತಿಳಿಸಿದರು.
ಪದಾಧಿಕಾರಿಗಳ ನೇಮಕ: ಜಿಲ್ಲಾ ಭೋವಿ ಸಂಘಕ್ಕೆ ಜಿಲ್ಲಾಧ್ಯಕ್ಷರಾಗಿ ಹೆಚ್. ಜಯ್ಯಣ್ಣ, ಗೌರವಾಧ್ಯಕ್ಷರಾಗಿ ಬಿ.ಟಿ. ಸಿದ್ದಪ್ಪ, ಜಿಲ್ಲಾಕಾರ್ಯಧ್ಯಕ್ಷರಾಗಿ ವಿ. ಗೋಪಾಲ್, ಜಿಲ್ಲಾಸಂಚಾಲಕರಾಗಿ ಬಿ.ಆರ್. ಅಂಜಿನಪ್ಪ ಬೆಂಚಕಟ್ಟೆ, ಪ್ರಧಾನ ಕಾರ್ಯದರ್ಶಿ ವಿ.ಶ್ರೀನಿವಾಸ ಚಿಕ್ಕಮ್ಮಣ್ಣಿ, ಕೋಶಾಧ್ಯಕ್ಷ ವಿ.ಇ. ವಿಜಯಕುಮಾರ್, ಜಿಲ್ಲಾ ಯುವಾಧ್ಯಕ್ಷ ಎ.ಬಿ ನಾಗರಾಜ್.

ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆಯಾಗಿ  ಉಮಾಕುಮಾರ, ಉಪಾಧ್ಯಕ್ಷರಾಗಿ ಡಿ. ಶ್ರೀನಿವಾಸ, ಆರ್. ಶ್ರೀನಿವಾಸ, ಟಿ. ಸೋಮೇಶ್ ಶಿಲ್ಪಿ, ಹನುಮಂತಪ್ಪ ಬೆಂಕಿಕೆರೆ, ಎಲ್.ಎಂ. ಸಂತೋಷ್, ಅಜ್ಜಯ್ಯ ಚೀಲೂರು, ಹೆಚ್. ಚಂದ್ರಪ್ಪ, ಸಿ.ಎನ್. ವೀರಭದ್ರಪ್ಪ.
ತಾಲ್ಲೂಕು ಘಟಕಗಳ ಅಧ್ಯಕ್ಷರುಗಳಾಗಿ ಹರಿಹರ ಹೆಚ್. ಬ್ಯಾಂಕ್ ರಾಮಣ್ಣ, ಜಗಳೂರಿಗೆ ಸಿ. ದೇವರಾಜ, ಚನ್ನಗಿರಿ ಹೆಚ್. ಗದಗ ರಾಜಪ್ಪ, ಹೊನ್ನಾಳಿ ನಾಗರಾಜಪ್ಪ ಇವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಗಳಾಗಿ ಡಾ. ವೈ.ವಿ. ರೇವಣಸಿದ್ದಪ್ಪ, ಮಂಜಪ್ಪ ಹನುಮಸಾಗರ, ಎಸ್. ರವಿಕುಮಾರ್, ತಿಮ್ಮೇಶ್ ಮಾದೇನಹಳ್ಳಿ, ರೇವಣ್ಣ, ತಿರುಮಲ್ಲೇಶ್.

ನಿರ್ದೇಶಕರುಗಳಾಗಿ ಶಿವಮೂರ್ತಪ್ಪ, ರುದ್ರೇಶಿ, ಎಸ್.ಜಿ.ನಾಗರಾಜ ಪಾಮೇನಹಳ್ಳಿ, ಹುಚ್ಚಂಗಿಪುರ ನಾಗರಾಜ್, ರಾಜಪ್ಪ, ರಮೇಶ್, ಹರಿಹರ ಯುವ ಘಟಕ ತಾಲ್ಲೂಕು ಅಧ್ಯಕ್ಷರಾಗಿ ಹೊನ್ನಾಳಿ ಮಂಜು ತಿಮ್ಲಾಪುರ, ಜಗಳೂರು ಮಾರುತಿ ಪಲ್ಲಾಗಟ್ಟೆ, ಚನ್ನಗಿರಿ ರಾಜು ಗರಗ, ಹರಿಹರ ಕುಮಾರ, ಚಾಮರಾಜ್ ಮತ್ತಿತರರು ವಿವಿಧ ಘಟಕಗಳಿಗೆ ಪದಾಧಿಕಾರಿಗಳಾಗಿ ಆಯ್ಕೆಯಾದರು.

Leave a Reply

Your email address will not be published. Required fields are marked *

error: Content is protected !!