ಸ್ತಬ್ಧಚಿತ್ರ ತಿರಸ್ಕಾರ.! ಮೋದಿಯವರೆ, ದ್ವೇಷದ ರಾಯಭಾರಿ ಆಗಬೇಡಿ, ಪ್ರೀತಿಯ ಸಂದೇಶ ಸಾರುವ ಪಾರಿವಾಳವಾಗಿ – ಕಾಂಗ್ರೆಸ್ ಯುವ ಮುಖಂಡ ಸಾಗರ್ ಎಲ್ ಎಂ ಹೆಚ್

ದಾವಣಗೆರೆ: ಈ ಬಾರಿಯ ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ಕೇರಳ ಕಳಿಸಿದ್ದ ಸಮಾಜ ಸುಧಾರಕ ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನವನ್ನು ಕೇಂದ್ರ ತಿರಸ್ಕರಿಸಿದೆ. ಜೊತೆಗೆ ಪ.ಬಂಗಾಳ ಕಳಿಸಿದ್ದ ನೇತಾಜಿ ಸ್ತಬ್ದಚಿತ್ರವನ್ನೂ ತಿರಸ್ಕರಿಸಿದೆ. ಹುತಾತ್ಮ ನೇತಾಜಿ ಹಾಗೂ ಸಾಮಾಜ ಸುಧಾರಕ ನಾರಾಯಣ ಗುರುಗಳ ಬಗ್ಗೆ ಕೇಂದ್ರಕ್ಕೆ ಅಷ್ಟೊಂದು ತಿರಸ್ಕಾರವ್ಯಾಕೆ.?
ಕೇಂದ್ರ, ಗಣರಾಜ್ಯೋತ್ಸವ ಪೆರೆಡ್‌ಗೆ ನಾರಾಯಣ ಗುರು ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ತಿರಸ್ಕರಿಸಿರುವುದು ಕೇವಲ ದ್ವೇಷದ ಕಾರಣಕ್ಕಾಗಿ. ಕೇರಳ ಹಾಗೂ ಪ.ಬಂಗಾಳದಲ್ಲಿ ಬಿಜೆಪಿಯೇತರ ಸರ್ಕಾರವಿದೆ. ಇದೇ ಕಾರಣಕ್ಕೆ ಆ ಎರಡು ರಾಜ್ಯಗಳು ಕಳಿಸಿದ್ದ ಸ್ತಬ್ಧಚಿತ್ರವನ್ನು ಕೇಂದ್ರ ತಿರಸ್ಕರಿಸಿದೆ.
ನಾರಾಯಣ ಗುರು, ನಮ್ಮ ಬಸವಣ್ಣರ ಇನ್ನೊಂದು ಅವತಾರ. ಅಸ್ಪೃಶ್ಯತೆಯ ವಿರುದ್ಧ ನಾರಾಯಣ ಗುರು ಕೇರಳದಲ್ಲಿ ಕ್ರಾಂತಿಯನ್ನೇ ಮಾಡಿದ್ದರು. ಆದರೆ ಯಥಾಸ್ಥಿತಿವಾದಿ ಹಾಗೂ ಮೂಲಭೂತವಾದಿಯವರಿಗೆ ನಾರಾಯಣ ಗುರುಗಳ ಕಾಯಕ ಅಪಥ್ಯವಾಗಿತ್ತು. ಆ ಯಥಾಸ್ಥಿತಿವಾದಿಗಳ ಸಂತತಿಯಾಗಿರುವ ಬಿಜೆಪಿ ಈಗ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿ ವಿಕೃತಿ ತೋರಿಸಿದೆ.
ಗಣರಾಜ್ಯೋತ್ಸವ ಪೆರೆಡ್‌ಗೆ ನೇತಾಜಿ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರದ ನಡೆ ಅತ್ಯಂತ ಅಸಹ್ಯಕಾರಿ ನಡೆ. ಕೇವಲ ರಾಜಕೀಯ ಕಾರಣಕ್ಕಾಗಿ ದೇಶಕ್ಕಾಗಿ ಹುತಾತ್ಮರಾದ ನೇತಾಜಿಯವರನ್ನು ಅವಮಾನಿಸಿದ್ದು ಖಂಡನೀಯ. ಮೋದಿಯವರೆ, ನೀವು ಪ್ರಧಾನಿಯಾಗಿ ದ್ವೇಷದ ರಾಯಭಾರಿ ಆಗಬೇಡಿ, ಪ್ರೀತಿಯ ಸಂದೇಶ ಸಾರುವ ಪಾರಿವಾಳವಾಗಿ.
ಸಾಗರ.ಎಲ್.ಹೆಚ್
ರಾಜ್ಯ ವಕ್ತಾರರು ಕೆಪಿವೈಸಿಸಿ
ಜಿಲ್ಲಾ ಉಪಾಧ್ಯಕ್ಷರು
ದಾವಣಗೆರೆ ಜಿಲ್ಲಾ ಭಾರತೀಯ ಯುವ ಕಾಂಗ್ರೆಸ್ ಸಮಿತಿ.