ಸಂಸದ ಡಿ ಕೆ ಸುರೇಶ್ ವಿರುದ್ಧ ಸೆಡಿಶನ್ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿ – ಶಿವಪ್ರಕಾಶ್ ಆರ್ ಎಲ್
ದಾವಣಗೆರೆ: ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರ ಮಾಡಬೇಕು ಎಂಬ ಬೇಡಿಕೆ ಇಡಬೇಕಾಗುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ಪ್ರಜಾಪ್ರಭುತ್ವ ಸ್ಥಾಪಿತವಾದ ಭಾರತ ದೇಶದ ಐಕ್ಯತೆ ಒಡೆಯುವ ಹೇಳಿಕೆ ನೀಡಿ ಪ್ರಜೆಗಳ ದೇಶಭಕ್ತಿ ಭಾವನೆಗೆ ಧಕ್ಕೆಯುಂಟು ಮಾಡಿರುವ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಶ್ರೀ ಡಿ ಕೆ ಸುರೇಶ್ ರವರ ವಿರುದ್ಧ ಸೆಡೆಶನ್ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಉಪ ಅಧೀಕ್ಷಕರಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಮನವಿ ಮಾಡಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶಿವಪ್ರಕಾಶ್ ಆರ್ ಎಲ್, ಪ್ರಧಾನ ಕಾರ್ಯದರ್ಶಿ ಯಲ್ಲೆಶ್, ಉಪಾಧ್ಯಕ್ಷರಾದ ಕಿರಣ್, ಉತ್ತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಚಿನ್ ವೆರ್ಣೆಕರ್, ಪದಾಧಿಕಾರಿಗಳಾದ ಮಹಾಂತೇಶ್, ಮಂಜು, ದಂಡಪಣಿ, ರಾಜೇಶ್, ಸುನಿಲ್, ರಘು ತೊಗಟ, ದೇವ, ಪ್ರದೀಪ್ ಇನ್ನೂ ಇತರರು ಉಪಸ್ಥಿತರಿದ್ದರು.