ಹಣಕ್ಕೆ ಬೇಡಿಕೆ, ಬೆದರಿಕೆ ಆರೋಪ.! ಚೇತನ್ ಕನ್ನಡಿಗ ಬಂಧನ

ದಾವಣಗೆರೆ: ಹಿಂದೂ ಜನ ಜಾಗೃತಿ ಸೇನಾ ಸಮೀತಿ ಸಂಘಟನೆಯ ಅಧ್ಯಕ್ಷ ಚೇತನ್ ಅಲಿಯಾಸ್ ಚೇತನ್ ಕನ್ನಡಿಗ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇತರೇ ಕಡೆಗಳಲ್ಲೂ ಇದೇ ರೀತಿ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಪ್ರಕರಣದ ವಿವರ: ಚೇತನ್ ತನ್ನ ಸಹಚರರೊಂದಿಗೆ ಸೇರಿಕೊಂಡು ನಗರದ ಕರೂರು ಇಂಡಿಸ್ಟ್ರೀಯಲ್ ಏರಿಯಾದಲ್ಲಿರುವ ಸೈಯದ್ ಅಕ್ಬರ್ ಅಲಿ ಎಂಬುವರಿಗೆ ಸೇರಿದ ಗ್ಲೋಬಲ್ ಪಬ್ಲಿಕ್ ಸ್ಕೂಲ್‌ನ್ನು ಅನಾಧಿಕೃತವಾಗಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ನಡೆಸುತ್ತಿದ್ದೀರಿ ಎಂದು ಶಿಕ್ಷಣ ಇಲಾಖೆಗೆ ಸಲ್ಲಿಸಿದ ದೂರು ಅರ್ಜಿಯನ್ನು ವಾಪಾಸ್ ಪಡೆಯಲು 5 ಲಕ್ಷ ರೂ.ಗಳಿಗೆ ಹಣಕ್ಕೆ ಬೇಡಿಕೆ ಇಟ್ಟು ಹಣ ಕೊಡದಿದ್ದರೆ ಶಾಲೆ ಮುಚ್ಚಿಸುವ ಬೆದರಿಗೆ ಹಾಕಿದ್ದ ಎಂದು ಸೈಯದ್ ಅಕ್ಪರ್ ಅಲಿ ಗಾಂಧಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಫೆ.17ರಂದು ಚೇತನ್ ಕನ್ನಡಿಗ (28) ಆರೋಪಿಯನ್ನು ಪತ್ತೆ ಮಾಡಿ, 15 ಸಾವಿರ ಬೆಲೆಯ ಮೊಬೈಲ್, ಸ್ಕೂಟರ್ ವಶ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಇದೇ ರೀತಿ ಇತರೇ ಕಡೆಗಳಲ್ಲೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಆರೋಪಿ ಪತ್ತೆಯಲ್ಲಿ ನಹೀಂ ಅಹಮದ್.ಟಿ.ಆರ್, ಆಜಾದ್ ನಗರ (ಗಾಂಧಿನಗರ)ವೃತ್ತ ಮತ್ತು ಸಿಬ್ಬಂದಿಯವರಾದ ನಿಜಲಿಂಗಪ್ಪ, ಸಿದ್ದೇಶ್, ದ್ಯಾಮೇಶ್, ಶಫಿವುಲ್ಲಾ ಸಿದ್ಧಾಕಲಿ, ನಾಗರಾಜ್ ಶ್ರಮವಸಿದ್ದರು.

Leave a Reply

Your email address will not be published. Required fields are marked *

error: Content is protected !!