ಲೋಕಲ್ ಸುದ್ದಿ

ಶಿರಮಗೊಂಡನಹಳ್ಳಿ ರಿ.ಸರ್ವೇ ನಂ.57 ಹಾಗೂ 62ರ ನಿವಾಸಿಗಳಿಗೆ ತೊಂದರೆ ನೀಡಬೇಡಿ

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿರುವ ಶಿರಮಗೊಂಡನಹಳ್ಳಿ ಗ್ರಾದಮ ರಿ.ಸರ್ವೇ ನಂ.57 ಹಾಗೂ 62ರ ಪ್ರದೇಶದಲ್ಲಿನ ನಿವಾಸಿಗಳಿಗೆ ಇ ಖಾತೆ ಕೊಡಲು, ಮನೆ ನಿರ್ಮಾಣಕ್ಕೆ ಪರವಾನಗಿ ನೀಡಲು ಅಡ್ಡಿ ಪಡಿಸಬಾರದಾಗಿ ನಿವಾಸಿಗಳಾದ ಎನ್. ಸಿದ್ದರಾಮಪ್ಪ, ಎಸ್.ಮಲ್ಲನಗೌಡ್ರು ಮನವಿ ಮಾಡಿದ್ದಾರೆ.

ಈ ಪ್ರದೇಶದಲ್ಲಿ 8 ಎಕರೆ 16 ಗುಂಟೆ ಸರ್ಕಾರಿ ಸ್ವತ್ತು ಕಂಡವರ ಪಾಲಾಗಿದೆ ಎಂದು ಕೆಲವರು ಮಾಧ್ಯಮಗಳ ಮೂಲಕ ಹೇಳಿರುವುದು ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ. ಇದು ಪೂರ್ವಗ್ರಹ ಪೀಡಿತ ಹೇಳಿಕೆಯಾಗಿದೆ ಎಂದವರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸರ್ವೇ ನ.57 ಹಾಗೂ 62ನ್ನು 499 ನಿವೇಶನಗಳನ್ನಾಗಿ ವಿಂಗಡಿದ್ದು, ಈ ನಿವೇಶನಗಳನ್ನು ಗ್ರಾಮ ಪಂಚಾಯ್ತಿಯವರು ಹಂಚಿಕೆ ಮಾಡಿದ್ದಾರೆ. 1983 ಹಾಗೂ 2001ರಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಸಂಕೀರ್ಣಕ್ಕೆ ವಶಪಡಿಸಿಕೊಳ್ಳಲು ಸೂಚನೆ ನೀಡಿದದ್ದರು.

ಈ ಕುರಿತು ಅಲ್ಲಿನ ನಿವೇಶನದಾರರು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ತಕರಾರು ಸಲ್ಲಿಸಿದ್ದರಿಂದ ಸದರಿ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು 499 ನಿವೇಶನದಾರರರ ಪರ ತೀರ್ಪು ನೀಡಿತ್ತು.

ನಂತರ ಜಿಲ್ಲಾಧಿಕಾರಿಗಳು ಎಲ್ಲಾ ನಿವೇಶನಗಳ ರದ್ಧತಿ ವಜಾಗೊಳಿಸಿ ನಿವೇಶನದಾರರುಗಳ ಹೆಸರಿಗೆ ಖಾತೆ ಮಾಡಲು ಆದೇಶ ಮಾಡಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!