ದಾವಣಗೆರೆ: ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾ, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಹಿಳೆಯರೊಂದಿಗೆ ಸಂವಾದ, ಯೋಗ ಶಿಬಿರಗಳಲ್ಲಿ, ಪಾರ್ಕುಗಳಲ್ಲಿ ಸಂವಾದ ಹಾಗೂ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವ ಡಾ. ಪ್ರಭಾ ಮಲ್ಲಿಕಾರ್ಜುನ್, ನಿರಂತರ ಚುನಾವಣಾ ಪ್ರಚಾರದ ನಡುವೆಯೂ ತಮ್ಮ ಕಾರ್ ಚಾಲಕನ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿತ್ತು.
ಪ್ರತಿ ದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ತಮ್ಮ ಪತಿ ಹಾಗೂ ಮಾವನವರ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿರುವ ಇವರು, ಇಂದು ಚುನಾವಣಾ ಪ್ರಚಾರ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ತಮ್ಮ ಜೊತೆಗಿದ್ದವರು ಇಂದು ತಮ್ಮ ಕಾರ್ ಚಾಲಕ ರಮೇಶ್ ಹುಟ್ಟುಹಬ್ಬ ಎಂದು ತಿಳಿಸಿದಾಗ ಅವನಿಗೆ ಶುಭಾಶಯಗಳು ಕೋರಿ, ಎಲ್ಲರೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ವಾಹನ ಚಾಲಕನ ಹುಟ್ಟುಹಬ್ಬವನ್ನು ತಮ್ಮ ಕುಟುಂಬದ ಸದಸ್ಯರೊಬ್ಬರ ಹುಟ್ಟು ಹಬ್ಬದ ರೀತಿ ಆಚರಿಸಿದ್ದು ಅವರ ಸರಳತೆಗೆ ಹಾಗೂ ಶಾಮನೂರು ಕುಟುಂಬ ತಮ್ಮ ಬಳಿ ಕೆಲಸ ಮಾಡುವವರಿಗೆ ನೀಡುವ ಪ್ರೀತಿ ಗೌರವಕ್ಕೆ ಸಾಕ್ಷಿಯಾಗಿತ್ತು.
ಈ ಅನಿರೀಕ್ಷಿತ ಹುಟ್ಟು ಹಬ್ಬ ಆಚರಣೆ ಸಂದರ್ಭಕ್ಕೆ ಡಾ. ಶಾಮನೂರು ಶಿವಶಂಕರಪ್ಪನವರು ಉಪಸ್ಥಿತರಾಗಿ ಕಾರ್ ಚಾಲಕನಿಗೆ ಆಶೀರ್ವದಿಸಿದರು.
ಕೆ.ಎಲ್.ಹರೀಶ್ ಬಸಾಪುರ.
