ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದ ಗ್ರಾಮದಲ್ಲಿ ಹೊಳಲ್ಕೆರೆ BJP ಅಭ್ಯರ್ಥಿ ಎಂ.ಚಂದ್ರಪ್ಪ ಪರ BSY ರೋಡ್ ಷೋ ನಡೆಸಿದ್ರು.
ರೋಡ್ ಷೋನಲ್ಲಿ ಕಿಕ್ಕಿರಿದು ತುಂಬಿದ ಬಿಜೆಪಿ ಕಾರ್ಯಕರ್ತರು., ಯಡಿಯೂರಪ್ಪ ಪರ BJP ಗೆ ಕಾರ್ಯಕರ್ತರು ಜೈಕಾರ ಹಾಕಿದ್ರು.
ಚಿಕ್ಕಜಾಜೂರು ಗ್ರಾಮದ ಪ್ರಮುಖ ರಸ್ತೆಯಲ್ಲಿ ರೋಡ್ ಷೋ ನಡೆಯಿತು, ರೋಡ್ ಷೋ ನಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಪ್ಪ, ಜಿ.ಎಂ ಸಿದ್ದೇಶ್ವರ ಸೇರಿ ಹಲವರು ಬಾಗಿಯಾಗಿದ್ದರು. ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದು ಬಿಎಸ್ ವೈ ಮಾತ್ರ, ರಾಜ್ಯದಲ್ಲಿ ಅಧಿಕಾರ ಕ್ಕೆ ಬರಬೇಕೆಂದು ಕಾಂಗ್ರೆಸ್ ಕನಸು ಕಾಣ್ತಿದ್ದಾರೆ.
50 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿದೆ, ಪ್ರಣಾಳಿಕೆಯಲ್ಲಿ ಉಚಿತ ಕರೆಂಟ್, ಎರಡು ಸಾವಿರ ಕೊಡ್ತೀವಿ ಎಂದು ಜನರ ಕಿವಿಗೆ ಹೂ ಮುಡಿಸ್ತಿದ್ದಾರೆ ರಾಜ್ಯದ ಜನರು ಎಚ್ಚೆತ್ತುಕೊಂಡಿದ್ದಾರೆ, ಮೋದಿಯ ನಾಯಕತ್ವವನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮನಬಂದಂತೆ ಯೋಜನೆ ಕೊಡ್ತಿದ್ದಾರೆ. ಇಡೀ ದೇಶದಲ್ಲೇ ಕಾಂಗ್ರೆಸ್ ತಳಮಟ್ಟಕ್ಕೆ ಕುಸಿದಿದೆ, ಕರ್ನಾಟಕದಲ್ಲಿಯೂ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ, ಮೋದಿ, ಅಮಿಶಾ, ಬಿಎಸ್ ವೈ ರಾಜ್ಯ ಪ್ರವಾಸ ಮಾಡ್ತಿರೋದಕ್ಕೆ ಕಾಂಗ್ರೆಸ್ ಮುಖಂಡರಿಗೆ ರಾತ್ರಿ ನಿದ್ದೆ ಬರ್ತಿಲ್ಲ, ಮತ ಎಣಿಕೆ ಬಳಿಕ ಕಾಂಗ್ರೆಸ್ ಅರ್ಥ ಆಗಲಿದೆ,ಜನರು ಕಾಂಗ್ರೆಸ್ ಧಿಕ್ಕರಿಸಿದ್ದಾರೆ ಎಂಬುದು ಅವತ್ತು ಗೊತ್ತಾಗುತ್ತೆ, ಬಜರಂಗ ದಳ ನಿಷೇಧ ಮಾಡೋದ್ ಇರ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ನಿಷೇದ ಮಾಡುವ ಪರಿಸ್ಥಿತಿ ಬಂದಿದೆ ಎಂದು ಬಿ ಎಸ್ ಯಡಿಯೂರಪ್ಪ ಮಾತನಾಡಿದರು.
