ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ಪೇಸ್ಬುಕ್ ಖಾತೆ ಹ್ಯಾಕ್! ಸಿ ಇ ಎನ್ ಠಾಣೆಗೆ ದೂರು
![](https://garudavoice.com/wp-content/uploads/2021/06/dr-Raghavan-facebook-account-hacked.jpg)
ದಾವಣಗೆರೆ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಅವರ ಫೇಸ್ಬುಕ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿರುವ ಹಿನ್ನೆಲೆಯಲ್ಲಿ ಅವರು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿ, ನಕಲಿ ಖಾತೆಯನ್ನು ಡಿಲಿಟ್ ಮಾಡಿಸಿದ್ದಾರೆ. ಡಾ.ರಾಘವನ್ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಅವರ ಅಧಿಕೃತ ಖಾತೆಯಲ್ಲಿರುವ ಫೋಟೋಗಳನ್ನು ತೆಗೆದುಕೊಂಡು ಡಾ.ರಾಘವನ್ ಗುನ್ನಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ಅವರೊಂದಿಗೆ ಖಾತೆಯಲ್ಲಿ ಸ್ನೇಹಿತರಾಗಿರುವವರಿಗೆ ಫ್ರೆಂಡ್ಸ್ ರಿಕ್ವೇಸ್ಟ್ ಕಳುಹಿಸಿದ್ದಾರೆ.
ಹೀಗೆ ಕಳುಹಿಸಿದ ರಿಕ್ವೆಸ್ಟ್ ಅನ್ನು ಎಕ್ಸೆಪ್ಟ್ ಮಾಡಿಕೊಂಡವರಿಗೆ ದುಷ್ಕರ್ಮಿಗಳು ಫೇಸ್ಬುಕ್ ಮೇಸೆಂಜರ್ನಲ್ಲಿ ಸಂದೇಶಗಳನ್ನು ಕಳುಹಿಸಿ, ನೀವು ಫೋನ್ ಪೇ, ಗೂಗಲ್ಪೇ, ಪೇಟಿಎಂ ಬಳಸುತ್ತಿದ್ದೀರಾ ಎಂಬುದಾಗಿ ವಿಚಾರಿಸಿದ್ದಾರೆ. ಇವ್ಯಾವುದನ್ನು ಬಳಸುವುದಿಲ್ಲ ಎನ್ನುವವರ ಮೇಸೆಂಜರ್ ಅನ್ನು ಅನ್ ಬ್ಯಾಕ್ ಮಾಡಿದ್ದಾರೆ. ಆದರೆ, ಇವುಗಳನ್ನು ಬಳಸುತ್ತಿದ್ದೇವೆಂದು ಹೇಳಿದವರ ಬಳಿ ಹಣ ಪಾವತಿಸುವಂತೆ ಕೇಳಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ತಮ್ಮ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದಿರುವುದು ಸ್ನೇಹಿತರಿಂದ ಗಮನಕ್ಕೆ ಬಂದ ತಕ್ಷಣ ಡಾ.ರಾಘವನ್ ಪೊಲೀಸರನ್ನು ಸಂಪರ್ಕಿಸಿ, ಅವರು ನೀಡಿರುವ ಸಲಹೆ ಮೇರೆಗೆ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಸಂದೇಶವೊಂದನ್ನು ಹಾಕಿ, ತಮ್ಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದು, ಅದರಿಂದ ಬರುವ ಸ್ನೇಹದ ಮನವಿಯನ್ನು ತಿರಸ್ಕರಿಸಬೇಕು. ಹಾಗೂ ಯಾರಾದರೂ ಫೋನ್ ಪೇ, ಗೂಗಲ್ಪೇ, ಪೇಟಿಎಂ ಮೂಲಕ ಹಣ ಕೇಳಿದರೆ ಯಾವುದೇ ಕಾರಣಕ್ಕೂ ಹಾಕಬಾರದು ಎಂದು ಮನವಿ ಮಾಡಿ, ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿ, ನಕಲಿ ಖಾತೆಯನ್ನು ಡಿಲಿಟ್ ಮಾಡಿಸಿದ್ದಾರೆಂದು ಮೂಲಗಳು ತಿಳಿಸಿವೆ.