ಬಲವಂತವಾಗಿ ಸೋಂಕಿತರಿಗೆ ಹಣ್ಣು ನೀಡಲು ಮುಂದಾದ ಮಾಜಿ ಶಾಸಕ : ಮಾಜಿ ಶಾಸಕ ಶಾಂತನಗೌಡರಿಂದ ಮಹಿಳೆಯರ ಕ್ಷಮೆ ಯಾಚನೆ
![dg_shantanagouda_enters_covid_centre_honnali_opposed_by_covid_patients[1]](https://garudavoice.com/wp-content/uploads/2021/06/dg_shantanagouda_enters_covid_centre_honnali_opposed_by_covid_patients1.jpg)
ದಾವಣಗೆರೆ: ಹೊನ್ನಾಳಿಯ ಮಾಜಿ ಶಾಸಕ ಶಾಂತನಗೌಡ ಅವರು ಕೋವಿಡ್ ಕೇರ್ ಸೆಂಟರ್ ಗೆ ಕಾಲಿಡುತ್ತಿದ್ದಂತೆ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು ಅವರ ವಿರುದ್ಧ ಆಕ್ರೋಶ ಹೊರ ಹಾಕಿರುವ ಘಟನೆ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನಡೆದಿದೆ.
ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಶಾಸಕ ರೇಣುಕಾಚಾರ್ಯ ಅವರ ವಾಸ್ತವ್ಯದ ಬಗ್ಗೆ ಹಾಗು ಕೋವಿಡ್ ಸೋಂಕಿತ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಇತ್ತೀಚೆಗಷ್ಟೆ ಮಾಜಿ ಶಾಸಕ ಶಾಂತನಗೌಡ ಅವರು ಮಾತನಾಡಿದ್ದ ಹಿನ್ನೆಲೆಯಲ್ಲಿ, ಇಂದು ಮಹಿಳೆಯರು ಆಕ್ರೋಶ ಹೊರಹಾಕಿದರು.
ಸೋಂಕಿತರಿಗೆ ಹಣ್ಣು ನೀಡಲು ಮಾಜಿ ಶಾಸಕರು ಮುಂದಾದ ವೇಳೆ ಸೋಂಕಿತ ಮಹಿಳೆಯರು ಹಣ್ಣು ಸ್ವೀಕರಿಸಲು ನಕಾರ ವ್ಯಕ್ತಪಡಿಸಿದರು.
ರೇಣುಕಾಚಾರ್ಯ ಅವರು ಇಲ್ಲದ ಸಮಯ ನೋಡಿ ಕೋವಿಡ್ ಕೇರ್ ಸೆಂಟರ್ ಗೆ ಬಂದಿರುವಿರಾ. ನಿಮ್ಮ ಹಣ್ಣು ನಮಗೆ ಅಗತ್ಯವಿಲ್ಲ ಎಂದು ಕಿಡಿಕಾರಿದರು.
ಬಲವಂತವಾಗಿ ಸೋಂಕಿತರಿಗೆ ಹಣ್ಣು ನೀಡಲು ಮುಂದಾದ ಮಾಜಿ ಶಾಸಕ. ಹಣ್ಣುಗಳನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಶಾಂತನಗೌಡ ಅವರು ಮಹಿಳೆಯರ ಕ್ಷಮೆ ಯಾಚಿಸಿದರು.