ಮಾಯಕೊಂಡ : ದಾವಣಗೆರೆ ಜಿಲ್ಲೆ ಸದ್ಯ ಬಿಸಿಲು ಹೆಚ್ಚಾಗಿದ್ದು, ಜನ ಕೂಡ ಹಾಟ್ ಆಗಿದ್ದಾರೆ…ಇದೇನೇದೂ ಹೊಸ ವಿಷಯನಾ ಅಂತ ನೀವು ಕೆಳಬಹುದು….ಆದರೆ ಇದನ್ನು ಹೇಳೋದಕ್ಕೂ ಒಂದು ಕಾರಣವಿದೆ…
ಹೇಳಿ ಕೇಳಿ ಈಗ ಚುನಾವಣೆ ಟೈಮ್…ರಾಜಕೀಯಕ್ಕೆ ಎಂಟ್ರಿ ಕೊಟ್ಟು ಜನ ನಾಯಕನಾಗಿ ಬೆಳೆಯಬೇಕೆಂದು ಹಲವರು ಆಸೆ ಪಡುವುದರಲ್ಲಿ ತಪ್ಪೇನಿಲ್ಲ…ಆದರೆ ರಾಜಕಾರಣಕ್ಕೆ ಬರಲು ಹಾಗೂ ಜನಪ್ರತಿನಿಧಿಯಾಗಲೂ ಈ ಸಮಯದಲ್ಲಿ ಕೆಲವು ಹಾಟ್ ಸುದ್ದಿಗಳು ಕೂಡ ಓಡಾಡುತ್ತದೆ…ಅಂತಹದ್ದರಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸವಿತಾಬಾಯಿ ಮಲ್ಲೇಶ್ ನಾಯ್ಕ್ ರವರದ್ದು ಎನ್ನಲಾದ ಹಸಿಬಿಸಿ ಪೋಟೋಗಳು ಈಗ ಎಲ್ಲರ ಮೊಬೈಲ್ ನಲ್ಲಿ ವೈರಲ್ ಆಗಿದೆ…ಇದು ಚುನಾವಣೆಯಲ್ಲಿ ಸವಿತಾಬಾಯಿಗೆ ಇರುಸುಮುನಿಸು ಆಗಿದೆ..
ಮಾಯಕೊಂಡ ಎಂಬುದು ಒಂದು ಚಿಕ್ಕ ಊರು..ಅತಿ ಹಿಂದುಳಿದ ಪ್ರದೇಶ…ಪಾಳೇಗಾರರು ಆಳಿದ ಊರು….ಆಗಿನ ರಾಜ ಹಿರೇಮದಕರಿನಾಯಕ ಆಳಿದ ಊರಾಗಿದೆ. ಅಲ್ಲದೇ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್, ಮಾಜಿ ಸಚಿವೆ ನಾಗಮ್ಮ ಆಳಿದ ಊರಾಗಿದೆ..ಈ ಕ್ಷೇತ್ರದಲ್ಲಿ ನಾಗಮ್ಮ ಕೇಶವಮೂರ್ತಿ ನಂತರದ ದಿನಗಳಲ್ಲಿ ಯಾವ ಮಹಿಳೆಯೂ ಕೂಡ ಜನಪ್ರತಿನಿಧಿಯಾಗಿಲ್ಲ…ಆದರೆ 2023 ರ ಚುನಾವಣೆಗೆ ಕಾಂಗ್ರೆಸ್ ನಾಯಕಿ, ನಟಿಯಾಗಿದ್ದ ಸವಿತಾಬಾಯಿ ಕೈ ಪಕ್ಷದಿಂದ ಸ್ಪರ್ಧಿಸಲು ಮುಂದಾದರು..ಮಾಜಿ ಸಿಎಂ ಜೆ.ಎಚ್.ಪಟೇಲ್ ಊರಾದ ಕಾರಿಗನೂರು ಸವಿತಾಬಾಯಿ ಊರಾಗಿದ್ದು, ಮಾಡಲಿಂಗ್ ಕ್ಷೇತ್ರ ಹುಡುಕಿಕೊಂಡು ದುಬೈ, ತಮಿಳುನಾಡು, ವಿದೇಶಕ್ಕೆ ಹಾರಿದ್ದರು..ನಟಿಯಾಗಿಯೂ ಕೆಲಸ ಮಾಡಿದ ಅನುಭವ ಇರುವ ಸವಿತಾಬಾಯಿ ಅಲ್ಲಿಂದ ರಾಜಕಾರಣಿಯಾಗಬೇಕೆಂದು ಹುಟ್ಟೂರಾದ ದಾವಣಗೆರೆಗೆ ಬಂದರು…ಅಲ್ಲಿ ಎಸ್ಪಿ ಕ್ಷೇತ್ರವಾದ ಮಾಯಕೊಂಡಕ್ಕೆ ಪ್ರಬಲ ಆಕಾಂಕ್ಷಿ ಎಂದು ಬಿಂಬಿತವಾದರು…ಎಲ್ಲ ಸಭೆ, ಸಮಾರಂಭ, ತಿಥಿ, ಶುಭಸಮಾರಂಭ, ಕಾಂಗ್ರೆಸ್ ನಾಯಕರ ಜತೆ ಪೋಟೋ, ದೆಹಲಿ ಸಂಪರ್ಕವನ್ನು ಕೆಲವೇ ದಿನಗಳಲ್ಲಿ ಬೆಳೆಸಿಕೊಂಡರು…ಅಲ್ಲದೇ ಕಬ್ಬಡಿ, ಕ್ರಿಕೆಟ್ ಪಂದ್ಯ ಆಯೋಜನೆ, ಹೊಲದಲ್ಲಿ ಎಡೆಕುಂಟೆ, ಅಡಕೆ ಸಿಪ್ಪೆ ಸುಲಿಯೋದು, ಗುಡಿಸಲು ಮನೆಗಳಿಗೆ ಭೇಟಿ, ಮುಸ್ಲಿಂ ಮತಗಳ ಬೇಟೆ, ಲಂಬಾಣಿ ಸಂಪ್ರದಾಯದ ನೃತ್ಯ, ಷಹರಿ, ಸರ್ವಜ್ಞ ವಚನಗಳನ್ನು ಒಂದಿಷ್ಟು ಕಲಿತು ಮಾತಾನಾಡುವ ಕಲೆ ಕಲಿತರು. ಪ್ರಜಾಧ್ವನಿ, ಕಾಂಗ್ರೆಸ್ ಸಭೆ ಸಮಾರಂಭದಲ್ಲಿ ಇವರೇ ಹೈಲೈಟ್ ಆದರು…ಇನ್ನು ಈ ಕ್ಷೇತ್ರದಲ್ಲಿ ಲಂಬಾಣಿ ಸಮುದಾಯ ಹೆಚ್ಚಿದ್ದು, ಅವರದ್ದೇ ಭಾಷೆಯಲ್ಲಿ ಮತಗಳನ್ನು ಸೆಳೆಯಲು ಮುಂದಾಗಿದ್ದರು. ಇನ್ನು ಈ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯ ಹೆಚ್ಚಿದ್ದು, ಅವರ ಸಮುದಾಯದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು…ಒಟ್ಟಾರೆ ಮುಸ್ಲಿಂ, ಲಿಂಗಾಯಿತ, ಲಂಬಾಣಿ ಮತಗಳನ್ನು ಪಡೆಯಲು ಅವಿರತ ಶ್ರಮಿಸಿದರು..ಬೆಂಗಳೂರಿನ ನಾಯಕರು ದಾವಣಗೆರೆಗೆ ಬಂದಾಗ ಎಲ್ಲಕ್ಕಿಂತ ಅವರೇ ಹೈಲೈಟ್ ಆಗುತ್ತಿದ್ದರು…ದಿನ ಕಳೆದಂತೆ ಮಾಯಕೊಂಡ ಕ್ಷೇತ್ರದಲ್ಲಿ ಸವಿತಾಬಾಯಿ ಹೆಸರನ್ನು ಸಣ್ಣ ಮಕ್ಕಳು ಕೂಡ ಹೇಳುವ ಹಾಗೆ ಹೆಸರಾಯಿತು…ಅಲ್ಲದೇ ಸಿಟಿ, ಮಾಯಕೊಂಡ ಕ್ಷೇತ್ರದಲ್ಲಿ ಸವಿತಾಬಾಯಿ ಫ್ಲೇಕ್ಸ್ ಗಳು ರಾರಾಜಿಸಿದವು. ಜನ ಕೂಡ ಇವರಿಗೆ ಮನ್ನಣೆ ಕೊಡಲು ಮುಂದಾದರು…ಆಗ ಶುರುವಾಗಿದ್ದೇ ಈ ವಿಡಿಯೋದಲ್ಲಿನ ಪೋಟೋಗಳು….
ಮಾಯಕೊಂಡದಲ್ಲಿ ಕಾಂಗ್ರೆಸ್ ನಿಂದ ಒಟ್ಟು 12 ಜನ ಆಕಾಂಕ್ಷಿಗಳಿದ್ದರೂ ಪ್ರಚಲಿತದಲ್ಲಿ ಇರೋದು ಎರಡು ಹೆಸರು ಮಾತ್ರ…ಒಂದು ಸವಿತಾಬಾಯಿ ಮಲ್ಲೇಶ್ ನಾಯ್ಕ್, ಇನ್ನೊಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವಂತಪ್ಪ….
ಕಾಂಗ್ರೆಸ್ ನ ಮಾಜಿ ಸಚಿವ ಆಂಜನೇಯ ಅಳಿಯ ಈ ಬಸವಂತಪ್ಪ…ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಫರ್ಧಿಸಿ ಅಲ್ಪ ಮತದ ಅಂತರದಿಂದ ಸೋತಿದ್ದರು…ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದು ಕಾರಣವಾಯಿತು …ಪರಿಣಾಮ ಹಾಲಿ ಶಾಸಕ ಲಿಂಗಣ್ಣ ಗೆದ್ದರು…2018ರಲ್ಲಿ ಸೋತ ಬಸವಂತಪ್ಪ 2023 ರ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ..ಅಲ್ಲದೇ ಕೋವಿಡ್ ಸಮಯದಲ್ಲಿ ಬಡವರಿಗೆ ಹೆಚ್ಚಿನ ಸಹಾಯ ಮಾಡಿದ್ದರು.
ಸದ್ಯ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಸವಿತಾಬಾಯಿ ಹಾಗೂ ಬಸವಂತಪ್ಪರ ನಡುವೆ ನೇರ ಸ್ಫರ್ಧೆ ನಡೆದಿದೆ. ಇಬ್ಬರು ಕೂಡ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿದ್ದಾರೆ…
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ ತನಗೆ ಟಿಕೆಟ್ ಸಿಗೋದಿಲ್ಲ, ನಾಯಕಿಯಾಗಿ ರೂಪುಗೊಳ್ಳುತ್ತಿದ್ದೇನೆ..ಟಿಕೆಟ್ ಸಿಕ್ಕರೇ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಭೀತಿಯಲ್ಲಿ ನನ್ನ ಪೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ…ಒಬ್ಬ ಮಹಿಳೆಯನ್ನು ತೇಜೊವಧೆ ಮಾಡುತ್ತಿದ್ದಾರೆ ಎಂಬುದು ಸವಿತಾಬಾಯಿ ಆರೋಪ. ಇನ್ನೊಂದೆಡೆ ನನಗೆ ಮೊಬೈಲ್ ನ್ನು ಸರಿಯಾಗಿ ಬಳಕೆ ಮಾಡೋದಕ್ಕೆ ಬರೋದಿಲ್ಲ..ನಾನು ಏಕೆ ಹಾಕಲಿ. ದೂರು ದಾಖಲಾಗಿದೆ. ತನಿಖೆ ನಡೆಯಲಿ ಗೊತ್ತಾಗಲಿದೆ ಎಂದು ಬಸವಂತಪ್ಪ ಹೇಳಿದ್ದಾರೆ..
ಸದ್ಯ ವೈರಲ್ ಆಗಿರುವ ಎಡಿಟೆಡ್ ಪೋಟೋದಲ್ಲಿ ಸವಿತಾಬಾಯಿ ಅವರನ್ನು ಅಶ್ಲೀಲವಾಗಿ ತೋರಿಸಲಾಗಿದೆ. ತಮಿಳುನಾಡು, ಆಂಧ್ರದ ಕಿರುತೆರೆಯಲ್ಲಿ ನಟಿಸಿದ್ದ ಬಟಿ ಸವಿತಾಬಾಯಿ ಕಾಂಗ್ರೆಸ್ ನಲ್ಲಿ ಹೆಚ್ಚು ಜನಪ್ರಿಯ ಹೊಂದಿದ್ದು, ಇದರ ಬೆನ್ನೇಲ್ಲೇ ಇಂತಹ ಅರೋಪಗಳು ಕೇಳಿ ಬಂದಿವೆ. ಈ ಬಗ್ಗೆ ದ್ವೇಷದ ರಾಜಕಾರಣಾ ಮಾಡಲಾಗುತ್ತಿದೆ…ಮಹಿಳೆಯೊಬ್ಬರು, ಕಾಂಗ್ರೆಸ್ ಅಭ್ಯರ್ಥಿಯನ್ನು ತೇಜೋವಧೆ ಮಾಡಲಾಗುತ್ತಿದೆ. ಇಂತಹ ಎಡಿಟೆಡ್ ಪೋಟೋವನ್ನು ವೈರಲ್ ಮಾಡಿದ ಆರೋಪಿ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…ರಾಜಕಾರಣ ಒತ್ತಟ್ಡಿಗಿರಲಿ, ಆದರೆ ಹೆಣ್ಣೊಬ್ಬಳ ಚಿತ್ರವನ್ನು ಅಶ್ಲೀಲವಾಗಿ ತೋರಿಸುವುದು ಎಷ್ಟು ಸರಿ ಎಂಬುದು ಜನರ ಪ್ರಶ್ನೆ…
