ಕೌಶಲವಿದ್ದರೆ ಉದ್ಯೋಗ : ಪ್ರೊ. ಗಿರೀಶ್

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ವಿದ್ಯೆಯ ಜತೆಗೆ ಸಾಕಷ್ಟು ಕೌಶಲಗಳು ಇದ್ದರೆ ಉದ್ಯೋಗ ಪಡೆಯುವುದು ಸುಲಭ ಎಂದು ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ವಹಣಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಗಿರೀಶ್ ರವರು ಹೇಳಿದರು.
ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ ಕೌಶಲ್ಯಾಭಿವೃದ್ದಿ ಕೋಶದಡಿಯಲ್ಲಿ ಆಯೋಜಿಸಿದ್ದ ಕಾರ್ಪೊರೇಟ್ ಕಮ್ಯುನಿಕೇಶನ್ಸ್ ಸ್ಕಿಲ್ ಎಂಬ ವಿಷಯ ಕುರಿತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಇಂದು ಉದ್ಯೋಗ ಪಡೆಯಲು ವಿದ್ಯಾರ್ಥಿಗಳು ಸಾಕಷ್ಟು ಕೌಶಲ್ಯಗಳನ್ನು ಕಲಿಯಬೇಕಾಗಿದೆ ಚಿಕ್ಕಚಿಕ್ಕ ಕೌಶಲ್ಯಗಳ ಆದರೂ ಅದರಲ್ಲಿ ಪರಿಪೂರ್ಣತೆಯನ್ನು ಹೊಂದುವುದು ಅತ್ಯವಶ್ಯಕವಾಗಿದೆ . ಕೌಶಲಗಳೆಂದರೆ ಒಂದೇ ಥರ ಇರುವುದಿಲ್ಲ ಪ್ರತಿಯೊಂದು ಉದ್ಯೋಗವೂ ಅದರದೇ ಆದ ಕೌಶಲ್ಯಗಳನ್ನು ಬಯಸುತ್ತದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಯಾರಾಗುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೌಶಲ್ಯಾಭಿವೃದ್ಧಿ ಕೊಶದ ಸಂಚಾಲಕರಾದ ವೆಂಕಟೇಶ್ ಬಾಬು ರವರು ಮಾತನಾಡುತ್ತಾ ಸಂವಹನ ಕೌಶಲ್ಯ ಸಂದರ್ಶನ ಎದುರಿಸುವ ಕೌಶಲ್ಯ ಸ್ವ ವಿವರ ಬರೆಯುವ ಕೌಶಲ್ಯ ಮಾತುಗಾರಿಕೆ ಪ್ರಸ್ತುತ ಪಡಿಸುವಿಕೆ ಹಾಗೂ ಕ್ರಿಯಾತ್ಮಕ ಯೋಚನಾ ಕೌಶಲ್ಯಗಳು ಇಂದು ಅತ್ಯವಶ್ಯಕವಾಗಿದೆ ಇವುಗಳನ್ನು ವಿದ್ಯಾರ್ಥಿಗಳು ಅರಿತುಕೊಂಡರೆ ಬಹುಬೇಗನೆ ಉದ್ಯೋಗವನ್ನು ಗಳಿಸಿ ಉನ್ನತ ಮಟ್ಟಕ್ಕೆ ಏರಬಹುದು ಎಂದು ಹೇಳಿದರು .

ಕಾಲೇಜಿನ ಈ ಕೋಶದ ಅಡಿಯಲ್ಲಿ ಎಲ್ಲ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ರೀತಿಯ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ತಮ್ಮ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಕುಮಾರಿ ಪೂಜಾ ನಿರೂಪಿಸಿದರು.
ಪ್ರೊ ರಾಜ್ ಮೋಹನ್ ಅತಿಥಿಗಳನ್ನು ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಪ್ರೊ ಗೌರಮ್ಮ ಡಾ. ಮಂಜುನಾಥ್ ಪ್ರೊ ಯಶೋದಾ ಆರ್ ಸವಿತಾ. ಶಂಕ್ರಯ್ಯ ಪಿ ವೀರೇಶ್ ಅಲ್ಲೂರ ನಾಗರಾಜ್ ಹಾಗೂ ಇತರೆ ಎಲ್ಲಾ ಬೋಧಕ ಸಿಬ್ಬಂದಿ ವರ್ಗ ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!