ರಾಷ್ಟ್ರೀಯ ಸುದ್ದಿ

engineer couples; ಅಮೇರಿಕಾದಲ್ಲಿ ದಾವಣಗೆರೆ ಯುವ ಎಂಜಿನಿಯರ್ ದಂಪತಿ ದಾರುಣ ಸಾವು

ದಾವಣಗೆರೆ:  ವಿದೇಶಕ್ಕೆ ಹೋಗಿ ಹಣ ಸಂಪಾದನೆ ಮಾಡಿ, ಪುನಃ ಭಾರತಕ್ಕೆ ಬಂದು ಸುಖಿ ಜೀವನ ನಡೆಸುವ ಯುವ ಎಂಜಿನಿಯರ್ (Engineer couples) ದಂಪತಿ ಹಾಗೂ ಮಗು ಅಮೆರಿಕಾದಲ್ಲಿ ಅನುಮಾನಸ್ಪಾದವಾಗಿ ಮೃತಪಟ್ಟಿದ್ದಾರೆ.

ದಾವಣಗೆರೆ ಮೂಲದ ಪತಿ,ಪತ್ನಿ ಗಂಡು ಮಗು ಮೂವರು ಅಮೇರಿಕಾದಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಅವರ ಮೃತದೇಹವನ್ನು ತಾಯ್ನಾಡಿಗೆ ತರಿಸಬೇಕು ಎಂದು ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ನಿವಾಸಿಗಳಾದ ಯೋಗೇಶ್ ಹೊನ್ನಾಳ್ (37), ಪ್ರತಿಭಾ ಹೊನ್ನಾಳ್(35), ಯಶ್ ಹೊನ್ನಾಳ್(6) ಮೃತ ಕುಟುಂಬ. ಈ ಕುಟುಂಬ ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ 9 ವರ್ಷಗಳಿಂದ ವಾಸವಾಗಿದ್ದರು.ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ software engineer ರಾಗಿ ಸೇವೆ ಸಲ್ಲಿಸಿದ್ದರು.ಆದರೆ ಬೆಳಗಿನ ಜಾವ ಅಮೇರಿಕಾದ ಪೋಲೀಸರ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದರಿಂದ ಇಡೀ ಕುಟುಂಬ ದುಖಃದಲ್ಲಿದ್ದು, ಮೂರು ಜನರ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸುತ್ತಿದ್ದು, ಅವರ ಮೃತದೇಹವನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿ ಕೊಂಡಿದ್ದಾರೆ.

 

bhadra dam; ಅರೆ ನೀರಾವರಿ ಬೆಳೆಗಳಿಗೆ ಸಲಹೆ

ಕಳೆದ ಕೆಲವು ವರ್ಷಗಳಿಂದ ದಾವಣಗೆರೆಯಲ್ಲಿ ಬಂದು ಕುಟುಂಬ ಸಮೇತ ವಾಸವಾಗಿದ್ದರು. ಆದರೆ, ಕುಟುಂಬದಲ್ಲಿ ಯೋಗೇಶ್ ಕುಟುಂಬ ಅಮೇರಿಕಾಗೆ ಹೋಗಿ ನೆಲೆಸಿತ್ತು. ಕಳೆದ 9 ವರ್ಷಗಳ ಹಿಂದೆ ದಾವಣೆಗೆರೆಯಲ್ಲಿ ಯೋಗೇಶ್ ಮತ್ತು ಪ್ರತಿಭಾ ಮದುವೆ ಆಗಿದ್ದರು. ನಂತರ ಕುಟುಂಬ ಸಮೇತವಾಗಿ ಹೋಗಿ ಅಮೇರಿಕಾದಲ್ಲಿ ವಾಸವಾಗಿದ್ದರು. ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಈ ಕುಟುಂಬದ ಸಾವಿನ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ಸೃಷ್ಟಿಯಾಗಿವೆ. ಇನ್ನು ಕರ್ನಾಟಕದಲ್ಲಿರುವ ಅವರ ಕುಟುಂಬ ಸದಸ್ಯರು ಸಾವಿನ ನಿಖರ ಕಾರಣ ತಿಳಿಸುವಂತೆ, ಬಾಡಿ ಸ್ವದೇಶಕ್ಕೆ ತರಿಸಿಕೊಡುವಂತೆ ದಾವಣಗೆರೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top