ಕುಟುಂಬ ರಾಜಕಾರಣ ಕೊನೆಗಾಣಿಸಬೇಕಾದರೆ ಶೋಷಿತ ಸಮುದಾಯ. ಹಿಂದುಳಿದ ವರ್ಗಗಳು ಒಗ್ಗಟ್ಟಾದಾಗ ಮಾತ್ರ ಸಾಧ್ಯ ಚಂದ್ರಶೇಖರ್ ನಾಯಕ್

ಚೆನ್ನಗಿರಿ ತಾಲೂಕಿನ ಸೇವಾ ನಗರ. ಬಸವರಾಜಪುರ. ಅರಸನಘಟ್ಟ ಸೋಮಶೆಟ್ಟಿಹಳ್ಳಿ ಸಿದ್ದಾಪುರ ಬಸವನಹಳ್ಳಿ ಇಟ್ಟಿಗೆ ಮಂಡಲಘಟ್ಟ ಮುಳ್ಳುಸಾಗರ ಹಸ್ತಪ್ಪನಹಳ್ಳಿ ಗುರುರಾಜಪುರ ಮಾದೇನಹಳ್ಳಿ. ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಹಿರಿಯರನ್ನ ಯುವಜನರನ್ನ ಮಹಿಳೆಯರನ್ನ ಗ್ರಾಮದ ಮುಖಂಡರುಗಳನ್ನು ಚಂದ್ರಶೇಖರ್ ನಾಯಕ್  ಭೇಟಿ ಮಾಡಿದರು .

ಜನಾಭಿಪ್ರಾಯ ಸಮಾರಂಭದಲ್ಲಿ ಗ್ರಾಮದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಚಂದ್ರಶೇಖರ್ ನಾಯಕ್ ರವರು ಮಾತನಾಡಿ 30 ವರ್ಷಗಳಿಂದ ಅಪ್ಪ-ಮಗ ಅಳಿಯ ಮಾವ ಸಂಬಂಧಿಕರೇ ಅಧಿಕಾರ ಅನುಭವಿಸುತ್ತಿದ್ದಾರೆ ಶೋಷಿತ ಸಮುದಾಯ ಹಿಂದುಳಿದ ವರ್ಗಗಳು ಕೇವಲ ಇವರಿಗೆ ಮತಗಳು ಹಾಕಲು ಮಾತ್ರ ಇದ್ಧೇವೆ ಎಂದು ಹೇಳಿದರು.

ವಿನಯ್ ಕುಮಾರ್ ಅವರು ಯಾವುದೇ ಒತ್ತಡಗಳಿಗೆ ಒಳಗಾಗದೆ ಚುನಾವಣೆಗೇ ಸ್ಪರ್ಧಿಸಲೇಬೇಕು ಎಂದು ಹೇಳಿದರು
ವಿನಯ್ ಕುಮಾರ್ ಜಿ ಬಿ ಇವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಅವರ ಆಶಯದಂತೆ ನಾವು ನಡೆದುಕೊಂಡಾಗ ಮಾತ್ರ ಕ್ಷೇತ್ರದ ಅಭಿವೃದ್ಧಿ ಆಗಲು ಸಾಧ್ಯ. ಜಿಲ್ಲೆಯ ಎರಡು ಪಕ್ಷದ ಅಭ್ಯರ್ಥಿಗಳು ಜಿಲ್ಲೆಯ ಯಾವ ಒಂದು ಗ್ರಾಮಗಳಿಗೂ ಭೇಟಿ ನೀಡದೆ ಗ್ರಾಮಸ್ಥರ ಕುಂದು ಕೊರತೆಗಳಿಗೆ ಸ್ಪಂದಿಸದೆ ನೇರವಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಇಂತಹ ಪ್ರಜಾಪ್ರಭುತ್ವ ವ್ಯವಸ್ಥೆ ತುಂಬಾ ಕೆಟ್ಟದ್ದು ಆದ್ದರಿಂದ ಪ್ರಜೆಗಳ ಅನುಗುಣವಾಗಿ ಅಭ್ಯರ್ಥಿಗಳು ಇರಬೇಕಾಗುತ್ತದೆ,
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ,ಸಮಾನ ಅಧಿಕಾರ ಕೂಡ ಅಗತ್ಯ ಇದೆ, ಕೇವಲ ಉಳ್ಳವರು ಮಾತ್ರ, ಅಧಿಕಾರಕ್ಕೆ ಬರುತ್ತಾರೆ ಹೊರತು, ಅತ್ಯಂತ ಬಡತನದ ಹಿನ್ನೆಲೆಯ ವಿದ್ಯಾವಂತ ಬುದ್ಧಿವಂತ, ಸಮಾಜಕ್ಕೆ ಏನಾದರೂ ಅಭಿವೃದ್ಧಿ ಕೆಲಸ ಮಾಡುವಂತಹ ವ್ಯಕ್ತಿಗಳಿಗೆ ಮಾನ್ಯತೆ, ಅವಕಾಶ ಸಿಗುತ್ತಿಲ್ಲ ಈ ಕಾರಣದಿಂದ ನಾನು ಇಡೀ ದಾವಣಗೆರೆ ಕ್ಷೇತ್ರದ ಎಲ್ಲಾ ತಾಲೂಕುಗಳ ಹಕ್ಕುಗಳ ಮುಖಂಡರನ್ನು ಮಹಿಳೆಯರನ್ನು ಯುವಜನರನ್ನು ಭೇಟಿಯಾಗಿ ಅವರ ಸಲಹೆಗಳನ್ನು ಹೇಳಿ ಮುಂದೆ ನಿರ್ಧಾರ ತೆಗೆದುಕೊಳ್ಳುವೆ ಎಂದರು.

Leave a Reply

Your email address will not be published. Required fields are marked *

error: Content is protected !!