ಹೆಮ್ಮೆಯ ರಂಗಕರ್ಮಿ ಸಿದ್ದರಾಜು ನೇತೃತ್ವದಲ್ಲಿ ಅನ್ವೇಷಕರು ಆರ್ಟ್ ಫೌಂಡೇಷನ್ “ಮಕ್ಕಳ ಬೇಸಿಗೆ ಶಿಬಿರ.”

ಹೆಮ್ಮೆಯ ರಂಗಕರ್ಮಿ ಸಿದ್ದರಾಜು ನೇತೃತ್ವದಲ್ಲಿ ಅನ್ವೇಷಕರು ಆರ್ಟ್ ಫೌಂಡೇಷನ್ "ಮಕ್ಕಳ ಬೇಸಿಗೆ ಶಿಬಿರ."

ದಾವಣಗೆರೆ :ದಾವಣಗೆರೆ ಏ 28 ‌‌-1988 ರೇ ಸಮಯ… ಮೋತಿ ವೀರಪ್ಪ ಕಾಲೇಜಿನ ದೊಡ್ಡ ತಾಲೀಮು ಹಾಲ್ ನಲ್ಲಿ….. ಋಷಲ..ಬರ್ತಾ ಇದಾನೆ… ಗಾಬರಿ, ಭೀತಿಯಿಂದ ಓಡೋಡಿ ಬಂದು ಈ ಸಣ್ಣ ಡೈಲಾಗ್ ಹೇಳಬೇಕಿತ್ತು ಹತ್ತಾರು ಬಾರಿ ಹೇಳಿಕೊಟ್ಟರೂ ಏಕೋ…ಈ ಹುಡುಗ ತುಂಡು ಮಾಡಿ ಹೇಳಲು ತಡವರಿಸುತ್ತಾ ಇದ್ದಾ…ಕಡೇಗೆ ನಿನಗೆ ಹೇಗೆ ಬರುತ್ತೆ ಹಾಗೇ ಹೇಳು ಎಂದು ನಿರ್ದೇಶಕ ಸುರೇಶ್ ಅನಗಳ್ಳಿ ಆತನಿಗೆ ಫ್ರೀ ಬಿಟ್ಟ ಡೈಲಾಗ್ ಗಳು…. ಅಂದು ಪ್ರತಿಮಾ ಸಭಾ ನಂದರಾಜ ಪ್ರಹಸನ ನಾಟಕ ರಂಗ ಶಿಬಿರ ದಲ್ಲಿ ಇಂದು ಅನುಭವ ಅದರಲ್ಲಿ ನನ್ನದು ಭಟನ ಚಿಕ್ಕ ಪಾತ್ರ, ಡೈಲಾಗ್ ಹೇಳಲು ತಡವರಿಸಿದ ಯುವಕ ಇಂದು ದಾವಣಗೆರೆಯ ಹೆಮ್ಮೆಯ ರಂಗಕರ್ಮಿ ಎಸ್ ಎಸ್ ಸಿದ್ದರಾಜು. ಸಿದ್ದು, ಇಂದು ಆತ ಛಲದಿಂದ ನೀನಾಸಂ ಹೆಗ್ಗೋಡಲ್ಲಿ ನಾಟಕ ತರಬೇತಿ ನಂತರ ಈಗ ಹಲವಾರು ನಾಟಕಗಳನ್ನು ನಿರ್ದೇಶಿಸಿ,ಕೆಲ ಕಿರುಚಿತ್ರ ನಿರ್ಮಾಣ, ಚಿತ್ರ ಗಳಲ್ಲಿ ಸಹನಿರ್ಧೆಶಕನಾಗಿ ಚಲನಚಿತ್ರೋತ್ಸವ, ಕಪ್ಪಣ್ಣ ನವರ ರಾಷ್ಟ್ರೀಯ ಕಲಾ ಉತ್ಸವ ಸೇರಿದಂತೆ ನಾಡಿನ ಬೇರೆ ಬೇರೆ ರಾಜ್ಯದ ಬಹುತೇಕ ರಂಗ ನಿರ್ದೇಶಕರ ನಾಟಕಗಳಲ್ಲಿ ಅಭಿನಯಿಸಿ ನಿರ್ದೇಶಿಸಿ ರಂಗಭೂಮಿನ ದಾವಣಗೆರೆಯಲ್ಲಿ ಜೀವಂತ ಇಟ್ಟಿರೋದೇ ಸಾಕ್ಷಿ.

ಹೆಮ್ಮೆಯ ರಂಗಕರ್ಮಿ ಸಿದ್ದರಾಜು ನೇತೃತ್ವದಲ್ಲಿ ಅನ್ವೇಷಕರು ಆರ್ಟ್ ಫೌಂಡೇಷನ್ "ಮಕ್ಕಳ ಬೇಸಿಗೆ ಶಿಬಿರ."
ನೀವು ನಾವು,ಅನ್ವೆಷಕರು ರಂಗ ತಂಡ ಕಟ್ಟಿ ಹೆಡ್ಡಾಯಣ,ನಾಗಮಂಡಲ,ಜೈಸಿದ್ನಾಯಕ. ಹತ್ತಾರು ವರ್ಷಗಳಿಂದ ನಾನಾ ರಂಗ ತಂಡಗಳ ಆಹ್ವಾನಿಸಿ ನಾಟಕ ಪ್ರಯೋಗ ಮಾಡಿ ರಂಗವನ್ನು ತನ್ನ ಉಸಿರಾಗಿ ಸಿಕೊಂಡ ಸಿದ್ದರಾಜು ದಾವಣಗೆರೆ ಜಿಲ್ಲೆಯಲ್ಲಿ ತನ್ನಿಂದಲೇ ಹಲವು ರಂಗಾಸಕ್ತರ, ಸುಸಜ್ಜಿತ ರಂಗ ತಂಡ ಕಟ್ಟಿ ನಿಲ್ಲಿಸಿದ ಹೆಗ್ಗಳಿಕೆ ಈತನದು.

ಹೆಮ್ಮೆಯ ರಂಗಕರ್ಮಿ ಸಿದ್ದರಾಜು ನೇತೃತ್ವದಲ್ಲಿ ಅನ್ವೇಷಕರು ಆರ್ಟ್ ಫೌಂಡೇಷನ್ "ಮಕ್ಕಳ ಬೇಸಿಗೆ ಶಿಬಿರ."
ಪ್ರತಿ ವರ್ಷ ತನ್ನ ಅನ್ವೇಷಕರ ರಂಗ ತಂಡದಿಂದ ಹೊಸ ನಾಟಕ, ಮಕ್ಕಳ ಶಿಬಿರ , ಮಕ್ಕಳ ಹಳ್ಳಿಯ ಸಂತೆ ಹೀಗೆ ನಮ್ಮ ಸುತ್ತಲಿನ ಪರಿಸರದ ಬಗ್ಗೆ ಮಾಹಿತಿ, ಮಕ್ಕಳಲ್ಲಿ ಈ ಪರಿಸರದ ಪ್ರಜ್ಞೆ ಇರಲೆಂದು…. ವೈಚಾರಿಕ, ಸಾಹಿತ್ಯ ಸಾವಯವ ಪರಾಂಪರಿಕ ಕೃಷಿ ಪದ್ಧತಿ, ಆರೋಗ್ಯ ಶೈಕ್ಷಣಿಕ ಸಾಮಾಜಿಕ ಕಳಕಳಿ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಗೆಳೆಯ ಸಿದ್ದರಾಜು ಈ ಬಾರಿ ಮಕ್ಕಳ ಬೇಸಿಗೆ ಶಿಬಿರ ನಗರದ ಸೋಮೇಶ್ವರ ವಿದ್ಯಾಲಯದ ಹಸಿರು ಆವರಣದಲ್ಲಿ ಮಕ್ಕಳಿಗೇ ಹೆಡ್ಡಾಯಾಣ, ಶಂಭುಲಿಂಗ ರಿಂದ ಪ್ಲಾಸ್ಟಿಕ್ ಮುಕ್ತ ಪರಿಸರ ಪ್ರಜ್ಞೆ, ರೂಪಕಗಳು,ದಾವಣಗೆರೆ ಮೆಟ್ರೋ ಪಾಲಿಟನ್ ಸಿಟಿ ಎಂಬ ಜಂಜಾಟದಿಂದ ಹೊರಬಂದು …ಸಹಜ ಬದುಕಿನ ಅನಾವರಣ, ಜಿಡ್ಡು ಗಟ್ಟಿಸುವ ಕೆಲ ದಿನ ಮಕ್ಕಳು ತಮ್ಮ ಪ್ರೀತಿ ಯು ಬಾಲ್ಯಗಳನ್ನು ಅನುಭವಿಸಿವೆ ಕೂಡ ತುಂಬು ಆಶಯಗಳೋಂದಿಗೇ…
– ಪುರಂದರ್ ಲೋಕಿಕೆರೆ.

ಹೆಮ್ಮೆಯ ರಂಗಕರ್ಮಿ ಸಿದ್ದರಾಜು ನೇತೃತ್ವದಲ್ಲಿ ಅನ್ವೇಷಕರು ಆರ್ಟ್ ಫೌಂಡೇಷನ್ "ಮಕ್ಕಳ ಬೇಸಿಗೆ ಶಿಬಿರ."

ಹೆಮ್ಮೆಯ ರಂಗಕರ್ಮಿ ಸಿದ್ದರಾಜು ನೇತೃತ್ವದಲ್ಲಿ ಅನ್ವೇಷಕರು ಆರ್ಟ್ ಫೌಂಡೇಷನ್ "ಮಕ್ಕಳ ಬೇಸಿಗೆ ಶಿಬಿರ."

ಹೆಮ್ಮೆಯ ರಂಗಕರ್ಮಿ ಸಿದ್ದರಾಜು ನೇತೃತ್ವದಲ್ಲಿ ಅನ್ವೇಷಕರು ಆರ್ಟ್ ಫೌಂಡೇಷನ್ "ಮಕ್ಕಳ ಬೇಸಿಗೆ ಶಿಬಿರ."

Leave a Reply

Your email address will not be published. Required fields are marked *

error: Content is protected !!