ಮಕ್ಕಳ ಬೆಳವಣಿಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಮುಖ್ಯ ಶೀಘ್ರವೇ ಬಾಲ ಭವನದ ಟ್ರಾಯ ಟ್ರೈನ್ ಚಾಲನೆ ಕ್ರಮಕೈಗೊಳ್ಳಲು ಸೂಚನೆ -ಸಿಇಒ ಡಾ.ಎ.ಚೆನ್ನಪ್ಪ

ಮಕ್ಕಳ ಬೆಳವಣಿಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಮುಖ್ಯ

ದಾವಣಗೆರೆ :ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಕೆಗಳ ಅವಶ್ಯಕವಾಗಿದ್ದು, ಅಂತಹ ಚಟುವಟಿಕೆಗಳಿಗೆ ಬಾಲಭವನವು ಉತ್ತಮ ವೇದಿಕೆ ಬಾಲಭವನದ ಆವರಣದಲ್ಲಿ ವಾರಾಂತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಬಾಲಭವನ ಸೊಸೈಟಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚೆನ್ನಪ್ಪ ತಿಳಿಸಿದರು.

ಬುದುವಾರ (ಫೆ.22) ರಂದು ಜೆ.ಹೆಚ್ ಪಾಟೀಲ್ ಬಡಾವಣೆಯ ಬಾಲಭವನದಲ್ಲಿ ಏರ್ಪಡಿಸಿದ್ದ ಶ್ರೀಮತಿ ಪೂರ್ಣಿಮಾ ಪ್ರಕಾಶ ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು ಇವರು ಜಿಲ್ಲಾ ಬಾಲಭವನ ಹಾಗೂ ತಾಲ್ಲೂಕು ಬಾಲಭವನ ಸೊಸೈಟಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತಾನಾಡಿzರು.

ಜಿಲ್ಲಾ ಬಾಲಭವನದ ಆವರಣದಲ್ಲಿ 2019ರಲ್ಲಿ ಉದ್ಘಾಟಣೆಯಾದ “ಟಾಯ್‍ಟ್ರೈನ್” ಈವರೆಗೆ ಕಾರ್ಯಾರಂಭ ಮಾಡದಿರುವ ಬಗ್ಗೆ ಪರಿಶೀಲಿಸುತ್ತಾ ಟ್ರೈನ್‍ಇಂಜಿನ್ ರಿಪೇರಿ ಹಾಗೂ ರೈಲು ಹಳಿಗಳ ರಿಪೇರಿಗಾಗಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಬರೆದಿರುವ ಪತ್ರಗಳನ್ನು ಅನುಸರಣೆ ಮಾಡಿ ಕೂಡಲೇ ರೈಲು ಹಾಗೂ ರೈಲುಹಳಿಗಳನ್ನು ದುರಸ್ಥಿಪಡಿಸಿಕೊಂಡು ಪುನರಾರಂಭ ಮಾಡಲು ಉಪನಿರ್ದೇಶಕರಿಗೆ ತಿಳಿಸಿದರು.

ಜಿಲ್ಲಾ ಬಾಲಭವನವು ನಗರ ಪ್ರದೇಶದಿಂದ ಹೊರವಲಯದಲ್ಲಿರುವ ಕಾರಣ ಅಲ್ಲಿಗೆ ಮಕ್ಕಳು ಬರಬೇಕೆಂದರೆ ಬಾಲಭವನವನ್ನು ಅತ್ಯಂತ ಅಕರ್ಷಣೀಯವಾಗಿ ಅಭಿವೃದ್ಧಿ ಪಡಿಸುವುದು ಅವಶ್ಯಕವಾಗಿರುತ್ತದೆ. ಅದಕ್ಕಾಗಿ ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಬಾಲಭವನ ಆವರಣವನ್ನು ಅಭಿವೃದ್ಧಿ ಪಡಿಸಲು ತಮ್ಮ ತಮ್ಮ ಇಲಾಖೆಗಳಿಂದ ಯೋಜನೆಗಳನ್ನು ಹಾಕಿಕೊಂಡು ಕಾರ್ಯರೂಪಕ್ಕೆ ತರಬೇಕೆಂದು ಕೋರಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಇವರ ಸಹಯೋಗದಲ್ಲಿ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸುತ್ತಾ ಈ ಕಾರ್ಯಕ್ರಮಗಳನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಅರ್ಥಪೂರ್ಣವನ್ನಾಗಿ ಮಾಡಲು ಕ್ರಿಯಾ ಯೋಜನೆಯನ್ನು ಪರಿಷ್ಕರಿಸಲಾಗುವುದೆಂದು ತಿಳಿಸಿದರು.

ವಾರಾಂತ್ಯ ಕಾರ್ಯಕ್ರಮದಲ್ಲಿ ಚಿತ್ರಕಲೆ, ಕ್ರಾಫ್ಟ್, ಮುಖವಾಡ ತಯಾರಿಕೆ, ಕ್ಲೇ ಮಾಡಲಿಂಗ್, ಗ್ರೀಟಿಂಗ್‍ಕಾರ್ಡ್ ತಯಾರಿಕೆ ಹಾಗೂ ಗ್ರಾಮೀಣ ಕ್ರೀಡೆಗಳು ಮುಂತಾದ ಹಲವಾರು ಚಟುವಟಿಕೆಗಳನ್ನು ಮಕ್ಕಳಿಗಾಗಿ ಆಯೋಜಿಸಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಪೂರ್ಣಿಮ ಪ್ರಕಾಶ್ ಮಾತಾನಾಡಿ ಜಿಲ್ಲಾ ಬಾಲಭವನದಂತೆ ಪ್ರತಿ ತಾಲ್ಲೂಕಿನಲ್ಲಿಯೂ ತಾಲ್ಲೂಕು ಬಾಲಭವನದ ಕಟ್ಟಡಗಳ ನಿರ್ಮಾಣಕ್ಕಾಗಿ ನಿವೇಶನಗಳನ್ನು ಪಡೆದು ಕಟ್ಟಡ ನಿರ್ಮಾಣಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಿದರು.  ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಕೆಗಳ ಅವಶ್ಯಕವಾಗಿದ್ದು, ಅಂತಹ ಚಟುವಟಿಕೆಗಳಿಗೆ ಬಾಲಭವನವು ಉತ್ತಮ ವೇದಿಕೆಯಾಗಿರುತ್ತದೆ. ಕಾರಣ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಎಲ್ಲಾ ಅಧಿಕಾರಿಗಳು ಕೈಜೊಡಿಸಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗ ಅಧಿಕಾರಿ ದುರ್ಗಾಶ್ರೀ, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಮಹಾನಗರಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ವಾಸಂತಿ ಉಪ್ಪಾರ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರÀ ಶಿಕ್ಷಣಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!