fake document; ಶೌಚಾಲಯ ಇದ್ದ ಜಾಗದಲ್ಲಿ ರಾತ್ರೋ ರಾತ್ರಿ ಜ್ಯೂಸ್ ಸ್ಟಾಲ್ ನಿರ್ಮಾಣ.!

ದಾವಣಗೆರೆ, ನ. 02: ನಕಲಿ ದಾಖಲೆ (fake document) ಸೃಷ್ಟಿಸಿ ಸರ್ಕಾರಿ ಆಸ್ತಿಗಳನ್ನು ಗುಳುಂ ಮಾಡುವ ಜಾಲ ದಾವಣಗೆರೆಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಆರೋಪಗಳಿಗೆ ಪುಷ್ಠಿ ನೀಡುವಂತೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 12 ರ ( ward 19) ಬೆಳ್ಳೂಡಿಗಲ್ಲಿಯ ಡೋರ್ ನಂ 422/6ಎ ರ 10 X 20 ಅಳತೆಯ ಎಸ್ ಎನ್ ರಘುನಾಥ್ ಬಿನ್ ನಾಗರಾಜ್ ಶೆಟ್ಟಿ ಹಾಗೂ ಶೆಟ್ಟರ್ ಕೊಟ್ರಪ್ಪ ಬಿನ್ ಎಸ್ ಪಂಚಾಕ್ಷರಪ್ಪ ಎಂಬುವವರ ಹೆಸರಿನಲ್ಲಿ ಸದರಿ ಅಳತೆಯ ಜಾಗವು ಮಹಾನಗರ ಪಾಲಿಕೆಯಲ್ಲಿ ನಮೂದಾಗಿದ್ದು ಸದರಿಯವರು 2008 ರಲ್ಲಿ ಇವರ ಹೆಸರಿಗ ಆಸ್ತಿ ಹಕ್ಕು ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ನಂತರ ಇವರಿಗೆ ಯಾರಿಂದ ಆಸ್ತಿ ಹಕ್ಕು ವರ್ಗಾವಣೆಯಾಗಿದೆ ಹಾಗೂ ಆಸ್ತಿಹಕ್ಕು ವರ್ಗಾವಣೆ ಮಾನದಂಡಗಳ ಪ್ರಕಾರ ಎಸ್ ಎನ್ ರಘುನಾಥ್ ಬಿನ್ ನಾಗರಾಜ್ ಶೆಟ್ಟಿ ಇವರು ಸಲ್ಲಿಸಿರುವ ದಾಖಲೆಗಳನ್ನು ಪರಶೀಲಿಸಿದ ನಂತರ ಆಸ್ತಿ ಹಕ್ಕು ಬದಲಾವಣೆ, ಇ ಸ್ವತ್ತು ಮಾಡುವ ಪ್ರಕ್ರಿಯೆ ನಿಲ್ಲಿಸುವಂತೆ ಮನವಿ ಮಾಡಲಾಗಿತ್ತು ಎಂಬ ಅಂಶ ಇರುವ ಪತ್ರವನ್ನ ಇತ್ತೀಚೆಗೆ ಪಾಲಿಕೆಗೆ ಮನವಿ ಸಲ್ಲಿಸಲಾಗಿರುವ ಬಗ್ಗೆ ಗರುಡವಾಯ್ಸ್ ಹಾಗೂ ಗರುಡಚರಿತೆ ಪತ್ರಿಕೆಗೆ ಮಾಹಿತಿ ಲಭಿಸಿದೆ.

bhadra dam; ಭದ್ರಾ ನಾಲೆಗಳ ಅಕ್ರಮ ಪಂಪ್‍ಸೆಟ್‍ಗಳ ತೆರವಿಗೆ ಜಿಲ್ಲಾಧಿಕಾರಿ ಸೂಚನೆ

ಈ ಹಿಂದೆ ಸದರಿ ಜಾಗದಲ್ಲಿ ಡೋರ್ ನಂಬರ್ 422/6ಎ ರ 10X20 ಅಳತೆ ಸ್ಥಳದಲ್ಲಿ ಹಲವು ವರ್ಷಗಳ ಹಿಂದೆ ದಾವಣಗೆರೆ ನಗರಸಭೆ ವತಿಯಿಂದ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಲಾಗಿತ್ತು, ಈ ಸದರಿ ಸ್ವತ್ತಿನಲ್ಲಿ ಯಾರೋ ಶೌಚಾಲಯವನ್ನ ಕೆಡವಿ ಖಾಸಗಿಯಾಗಿ ನೆಲವನ್ನ ಸಮತಟ್ಟು ಮಾಡಿ ಸಂಕೀರ್ಣ ಕಟ್ಟಡ ಕಟ್ಟಲು ಮುಂದಾಗಿದ್ದಾಗಿದ್ದರು, ಈ ಜಾಗವು ಮಹಾನಗರ ಪಾಲಿಕೆ ಸ್ವತ್ತು ಎಂಬುದನ್ನ ಅಂದಿನ ಆಯುಕ್ತರು ಕೂಡ ಸ್ಥಳ ಪರಿಶೀಲನೆ ನಡೆಸಿದ್ದರು. ಈ ಸ್ಥಳದಲ್ಲಿ ಯಾವುದೇ ಖಾಸಗಿ ವ್ಯಕ್ತಿಗಳು ಏನನ್ನೂ ನಿರ್ಮಿಸಕೂಡದು ಎಂದು ತಾಕೀತು ಮಾಡಿದ್ದರು. ಆದರೆ ರಾತ್ರೋ ರಾತ್ರಿ ಸದರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ದಸರಾ ಹಬ್ಬದ ದಿನದಂದು ಸದರಿ ಜಾಗದಲ್ಲಿ 10X20 ಜಾಗದಲ್ಲಿ ಜ್ಯೂಸ್ ಸ್ಟಾಲ್ ಎಂದು ಬೋರ್ಡ್ ಹಾಕಲಾಗಿದೆ.

ಒಟ್ಟಾರೆ ಸ್ಥಳೀಯರ ಪ್ರಕಾರ ಮಹಾನಗರ ಪಾಲಿಕೆಯ ಸ್ವತ್ತನ್ನು ಖಾಸಗಿಯವರ ಹೇಸರಿಗೆ ಹೇಗೆ ಬಂತು ಎಂಬುದು ಗೊತ್ತಾಗುತ್ತಿಲ್ಲವಂತೆ. ಆಯುಕ್ತರು ಸದರಿ ಜಾಗದ ಹಿಂದಿನ ನೈಜ ದಾಖಲಾತಿಗಳನ್ನ ಪುನಃ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!