UBDT; ಕೌಶಲ್ಯ, ಜ್ಞಾನವು ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿ

ದಾವಣಗೆರೆ, ನ.02: ಕೌಶಲ್ಯ ಮತ್ತು ಜ್ಞಾನವು ಒಂದು ದೇಶದ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹೆಚ್ಚಿನ ಶೇಕಡಾವಾರು ನುರಿತ ಉದ್ಯೋಗಿಗಳ ಕಾರ್ಯಪಡೆ ಇರುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವೆ ಸರೋಜಾ ಬಿ. ಬಿ. ಅವರು ಅಭಿಪ್ರಾಯಪಟ್ಟರು.

ಅವರು ನಗರದ ವಿಶ್ವವಿದ್ಯಾಲಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ (ubdt) ಕೌಶಲ್ಯ ಅಭಿವೃದ್ಧಿಯ ತರಬೇತಿ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ವಾರಗಳ “ಸಿ.ಎನ್.ಸಿ. ಪ್ರೋಗ್ರಾಮಿಂಗ್, ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಮತ್ತು ಪಿ/ಸಿ ಪ್ರೋಗ್ರಾಮಿಂಗ್, ರೋಬೊಟಿಕ್ಸ್, ಹ್ಯೂಮಾಟಿಕ್ಸ್ & ಹೈಡ್ರಾಲಿಕ್ಸ್” ಎಂಬ ವಿಷಯ ಕುರಿತು ಆಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಂದುವರೆದು ಸರೋಜಾ ಬಿ. ಬಿ. ಅವರು ಮಾತನಾಡಿ ಕೌಶಲ್ಯ ತರಬೇತಿ ಮೌಲ್ಯವನ್ನು ಸಾಮಾಜಿಕ ಜನಜಾಗೃತಿ ಮೂಲಕ ಯುವಕರಲ್ಲಿ ಸ್ಕಿಲ್ಲಿಂಗ್ ಆಫ್ ಮಹತ್ವಾಕಾಂಕ್ಷೆಯ ಮೌಲ್ಯದ ಕೌಶಲ್ಯವನ್ನು ಪಡೆದಾಗ, ಅವರ ಜೀವನ ಮಟ್ಟವು ಬದಲಾಗುವುದಲ್ಲದೆ ಮುಂದಿನ ಪೀಳಿಗೆಗೆ ಉತ್ತಮ ಸ್ಥಿತಿಯಲ್ಲಿ ಬದುಕಲು ಸ್ಥಿರವಾದ ಮಾರ್ಗವನ್ನು ಕಟ್ಟುತ್ತದೆ ಎಂದು ನುಡಿದರು.

ದಾವಣಗೆರೆ ಜಿಲ್ಲೆಯ ಸಹಾಯಕ ಆಯುಕ್ತರಾದ ದುರ್ಗಾಶ್ರೀ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಜೀವನದುದ್ದಕ್ಕೂ ಕೌಶ್ಯಗಳನ್ನು ಪಡೆಯಲು ಎಲ್ಲರಿಗೂ ಅವಕಾಶಗಳನ್ನು ಅದರಲ್ಲೂ ವಿಶೇಷವಾಗಿ ಯುವಕರು, ಮಹಿಳೆಯರು ಮತ್ತು ಅನಾನುಕೂಲಕರ ಗುಂಪುಗಳಿಗೆ ಅಭಿವೃದ್ಧಿಪಡಿಸುವುದರಿಂದ ದೇಶದ ಆರ್ಥಿಕ ಸ್ಥಿತಿಗತಿಗಳ ಉನ್ನತೀಕರಣಕ್ಕೂ ಇದು ಲಾಭದಾಯಕ ಎಂದು ವಿವರಿಸಿದರು.

zameer ahmed; ಸಿಎಂ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದುನೇ ಸಿಎಂ: ಸಚಿವ ಜಮೀರ್ ಅಹಮದ್

ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕರಾದ ಅಮಿತ್ ಸಾಹು ಅವರು ಮಾತನಾಡಿ ಕೌಶಲ್ಯ ತರಬೇತಿಯನ್ನು ಪರಿಚಯಿಸುವುದರಿಂದ, ದುರ್ಬಲ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರಿಂದ ಸಮಾನ ಅವಕಾಶಗಳನ್ನು ಒದಗಿಸಿದಂತಾಗುತ್ತದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಪಿ. ನಾಗರಾಜಪ್ಪ ಮಾತನಾಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿದ್ಯಾಶಂಕರ ಎಸ್. ಅವರ ಮಾರ್ಗದರ್ಶನದಲ್ಲಿ ಕಾಲೇಜಿನಲ್ಲಿ ನೆನೆಗುದಿಗೆ ಬಿದ್ದಿದ್ದ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಕ್ಕೆ ಬೇಕಾದಂತಹ ಎಲ್ಲ ಅನುಕೂಲತೆಗಳನ್ನು ಒದಗಿಸುವ ಮೂಲಕ ಪ್ರಾರಂಭ ಮಾಡಲು ಕಾರಣಕರ್ತರಾಗಿದ್ದಾರೆಂದು ವಿವರಿಸಿದರು. ಅಲ್ಲದೇ ಪ್ರತಿಯೊಬ್ಬರೂ ಎರಡು ವಾರದ ಆಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದು, ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕೆಂದು ಆಧ್ಯಾಪಕರುಗಳಿಗೆ ಕರೆ ನೀಡಿದರು.

ವೇದಿಕೆಯಲ್ಲಿ ಕಾರ್ಯಗಾರದ ಸಂಯೋಜಕರಾದ ಡಾ. ಮಲ್ಲಿಕಾರ್ಜುನ ಸಿ. ಮತ್ತು ಕ್ರಿಶ್ಚನಿ ಕಂಪನಿ ತರಬೇತುದಾರರಾದ ಡಾ. ನಿತೀನ್ ಸಾಪ್ರೆ ಮತ್ತು ಪ್ರವೀಣ್ ಹೆಚ್.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಘಟನಾ ಸಮಿತಿಯ ಸದಸ್ಯರುಗಳಾದ ಡಾ. ಟಿ.ಡಿ. ವಿಷ್ಣುಮೂರ್ತಿ, ಡಾ. ಈರಪ್ಪ ಸೊಗಲದ, ಡಾ. ಕೆ. ಮಂಜುನಾಥ, ಡಾ. ಎಸ್. ಮಂಜಪ್ಪ, ಡಾ. ಮಂಜನಾಯಕ್, ಡಾ. ಮಲ್ಲಿಕಾರ್ಜುನ ಎಸ್. ಹೊಳಿ, ಡಾ. ಶೇಖರಪ್ಪ ಬಿ. ಮಲ್ಲೂರ, ಡಾ. ಸೈಯದ್ ಅಹಮದ, ಡಾ. ಹೆಚ್. ಎನ್. ಅಶೋಕ್, ಡಾ. ರವೀಂದ್ರ ರಜಪೂತ್, ಡಾ. ಶ್ರೀಧರ ಕೆ. ಎಸ್., ಡಾ. ಎನ್. ನಾಗೇಶ್ ಮತ್ತು ಡಾ. ಈರಮ್ಮ ಹೆಚ್. ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕು|| ಹರ್ಷಿತ ಪ್ರಾರ್ಥಿಸಿದರು, ಲತಾ ಬಿ. ಆರ್. ಸ್ವಾಗತಿಸಿದರು, ಚೇತನಕುಮಾರ, ಮೋನಿಕಾ ಬಿ. ಆರ್. ಪಲ್ಲವಿ ಬಿ. ಆಯಸಾ ಸಿದ್ದಿಕಿ ಅತಿಥಿಗಳನ್ನು ಪರಿಚಯಿಸಿದರು, ರಚನಾ ಹೆಚ್. ಬಿ. ಕಾರ್ಯಕ್ರಮ ನಿರೂಪಣೆ ಮಾಡಿದರು. ಕೊನೆಯಲ್ಲಿ ಪವನ ಯು. ಆರ್. ವಂದಿಸಿದರು.

Leave a Reply

Your email address will not be published. Required fields are marked *

error: Content is protected !!