ಅವೈಜ್ಞಾನಿಕ ರೈಲ್ವೇ ಮಾರ್ಗ ಬದಲಿಸುವಂತೆ ರೈತರ ಮನವಿ

ದಾವಣಗೆರೆ: ಶಿವಮೋಗ್ಗ-ರಾಣೇಬೆನ್ನೂರು ರೈಲ್ವೆ ಯೋಜನೆಯಲ್ಲಿ ಶಿಕಾರಿಪುರ- ಮಾಸೂರು- ರಾಣೇಬೆನ್ನೂರು ರೈಲ್ವೆ ಮಾರ್ಗವು ಅವಾಸ್ತವಿಕ ಮತ್ತು ಅವೈಜ್ಞಾನಿಕತೆಯಿಂದ ಕೂಡಿದ್ದು, ಕೂಡಲೇ ರೈಲ್ವೆ ಮಾರ್ಗದ ಯೋಜನೆ ಬದಲಿಸುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಹಿರಿಯ ಭೂ ಸ್ವಾಧೀನಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗೆ ವಿಇಧ ಗ್ರಾಮಗಳ ರೈತರು ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹೆಚ್.ಟಿ. ಬಳಿಗಾರ್ ಮಾತನಾಡಿ,
ಈಗಾಗಲೇ ಈ ಯೋಜನೆಗೆ ಹೊಸ ರೈಲು ಮಾರ್ಗ ಸಂಚರಿಸಲು ಅವಶ್ಯವಿರುವ ಭೂ-ಸ್ವಾಧೀನ ಕಾರ್ಯವನ್ನು ಕೆ.ಐ.ಎ.ಡಿ.ಬಿ ಯ ಕಾಯ್ದೆಯಡಿಯಲ್ಲಿ ಎರಡನೇ ಹಂತದಲ್ಲಿ ಪ್ರಾರಂಭಿಸಲಾಗಿದ್ದು, ಶಿಕಾರಿಪುರದಿಂದ ಮಾರ್ಗ ಮಧ್ಯದಲ್ಲಿ ಬರುವ ಗ್ರಾಮಗಳಾದ ನೆಲವಾಗಿಲು, ಬೇಗೂರು, ಬಗನಕಟ್ಟೆ, ಕಿಟ್ಟದಹಳಿ, ದಿಂಡದಹಳ್ಳಿ, ಕವಾಸಪುರ ಗ್ರಾಮಗಳ ಮೂಲಕ ಸಂಚರಿಸುತ್ತಿರುವ ರೈಲ್ವೆ ಮಾರ್ಗವು ಭೂ ಸ್ವಾಧಿನಕ್ಕೆ ಒಳಪಡುವುದಾಗಿ ತಿಳಿದುಬಂದಿದೆ. ಈ ರೈಲ್ವೆ ಮಾರ್ಗವು ಅವಾಸ್ತವಿಕ ಮತ್ತು ಅವೈಜ್ಞಾನಿಕ ಎಂದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ನಿಯೋಜಿತ ರೈಲ್ವೆ ಮಾರ್ಗದ ಪ್ರದೇಶದಲ್ಲಿ ಯಾವುದೇ ಬೃಹತ್ ಕೈಗಾರಿಕೆಯಾಗಲಿ, ಉದ್ಯಮಗಳಾಗಲಿ ಇಲ್ಲ. ಪಟ್ಟಣಗಳ ಸಂಪರ್ಕವೂ ಕೂಡ ಬರುವುದಿಲ್ಲ. ಅದಾಗಿಯೂ ರೈಲು ಸಂಚರಿಸುವ ಜನದಟ್ಟಣೆಯೂ ಇಲ್ಲ. ಆದ್ದರಿಂದ ಇದು ಕೃಷಿ ಕುಟುಂಬಗಳೇ ವಾಸಿಸುವ ಗ್ರಾಮೀಣ ಪ್ರದೇಶವಾಗಿದ್ದು, ಇದು ಅವಾಸ್ತವಿಕ ಮತ್ತು ಅವೈಜ್ಞಾನಿಕ ರೈಲ್ವೆ ಯೋಜನೆ ಆಗುವುದರಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಿಸಿದರು.

ಶಿಕಾರಿಪುರ – ಉಡುಗಣಿ ವಾಣಿಜ್ಯ ನಗರ ಶಿರಾಳಕೊಪ್ಪ, ಬಳ್ಳಿಗಾವಿ, ತಾಳಗುಂದ ಗ್ರಾಮದ ಕನ್ನಡದ ಮೊಟ್ಟ ಮೊದಲ ದೊರೆ ಮಯೂರವರ್ಮ ಹಾಗೂ ನಾಗರಕಂಡ ಕೃತಿಯಲ್ಲಿ ಮಹತ್ವ ಪಡೆದಿರುವ ಬಂದಳಿಕೆ ಸೇರಿದಂತೆ ತೊಗರ್ಸಿ, ಆನವಟ್ಟಿ ಸವಣೂರು ಎಲಿವಿಗಿ ಜಂಕ್ಷನ್ ಮೂಲಕ ಹುಬ್ಬಳ್ಳಿ, ಕಾರವಾರ, ಗೋವ ರಾಜ್ಯ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ಈ ರೈಲ್ವೆ ಮಾರ್ಗವು ಈ ಯೋಜನೆಗೆ ಸೂಕ್ತವಾಗುವಾಗು ಮಾರ್ಗವಾಗಿದೆ ಎಂದು ಹೇಳಿದರು.

ಲಕ್ಷ್ಮೀಶ್ವರ ಗದಗ ಹಾಗೂ ಉತ್ತರ ಕರ್ನಾಟಕದ ಅನೇಕ ವಾಣಿಜ್ಯ ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ನಗರಗಳ ಮೂಲಕ ವಿಜಯಪುರ ಜಿಲ್ಲೆಯ ಕೂಡಲ ಸಂಗಮ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವುದರೊಂದಿಗೆ ಇನ್ನು ಅನೇಕ ಪ್ರವಾಸಿ ಕ್ಷೇತ್ರಗಳ ಮಾರ್ಗವಾಗುವುದರ ಜೊತೆಗೆ ಮಹಾರಾಷ್ಟ್ರದ ಸಾಂಗ್ಲಿ, ಬಾಂಬೆ, ಸೊಲ್ಲಾಪುರ ಮತ್ತು ತೆಲಂಗಾಣದ ಹೈದರಾಬಾದ್ ಇನ್ನಿತರ ಸಂಪನ್ಮೂಲ ವಾಣಿಜ್ಯ ನಗರಗಳಿಗೆ ಈ ನೂತನ ಬದಲಾವಣೆ ರೈಲ್ವೆ ಮಾರ್ಗವು ಸೂಕ್ತವಾಗುತ್ತದೆ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ರೈಲ್ವೆ ಇಲಾಖೆ ಉದ್ದೇಶಿತ ಪೂರ್ವ ನಿಯೋಜಿತ ಮಾರ್ಗವನ್ನು ಕೈಬಿಡುವಂತೆ ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಮತಾ ಪರಮೇಶ್ವರಪ್ಪ, ನೀಲಮ್ಮ, ಎಂ.ಡಿ. ರಸೂಲ್, ಬಸವರಾಜಪ್ಪ, ವೀರಭದ್ರಪ್ಪ, ಲೋಕಪ್ಪ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!