ಎಲ್ ಐ ಸಿ‌ ಕಚೇರಿಯಲ್ಲಿ ಬೆಂಕಿ.! ದಾಖಲೆಗಳು ಭಸ್ಮ

ಎಲ್ ಐ ಸಿ‌ ಕಚೇರಿಯಲ್ಲಿ ಬೆಂಕಿ.! ದಾಖಲೆಗಳು ಭಸ್ಮ

ದಾವಣಗೆರೆ: ದಾವಣಗೆರೆಯ ಕೆ ಆರ್ ರಸ್ತೆಯ ಎಲ್ ಐ ಸಿ ಕಚೇರಿಯಲ್ಲಿ ಬೆಂಕಿಗೆ ದಾಖಲೆಗಳು ಭಸ್ಮ ವಾದ ಘಟನೆ ನಡೆದಿದೆ.

ಗುರುವಾರ ರಾತ್ರಿ 12 ಗಂಟೆಗೆ ಕಾಣಿಸಿಕೊಂಡ ಬೆಂಕಿ ಸುಮಾರು 3 ಗಂಟೆಯ ವರೆಗೆ ಬೆಂಕಿ ನಂದಿಸಲು‌ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು.

ಕಚೇರಿಯ ಮೊದಲ ಮಹಡಿಯಲ್ಲಿದ್ದ ಮಹತ್ವದ ದಾಖಲೆಗಳು ಭಸ್ಮವಾಗಿದ್ದು ಅಪಾರ ಪ್ರಮಾಣದ ಪೀಠೋಪಕರಣಗಳು ಕೂಡ ಬೆಂಕಿಯ ಕೆನ್ಮಾಲಿಗೆಗೆ ತುತ್ತಾಗಿದ್ದವು.

ದಾವಣಗೆರೆಯ 4 ಅಗ್ನಿಶಾಮಕ ವಾಹನಗಳಿಂದ ಬೆಂಕಿ ಹತೋಟಿಗೆ ತರಲು ಪ್ರಯತ್ನ ಪಡಲಾಯಿತು.

ದಾವಣಗೆರೆ ಪೊಲೀಸ್ ಹಾಗೂ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ 3 ಗಂಟೆಯವರೆಗೆ ನಡೆಯಿತು. ಬೆಂಕಿ ಹೇಗೆ ಒತ್ತಿಕೊಂಡಿದೆ ಎಂಬ ಬಗ್ಗೆ ತನಿಖೆ ಮುಂದುವರಿಸಿದ ಬಸವನಗರ ಪೊಲೀಸ್ ಠಾಣಾ ಅಧಿಕಾರಿಗಳು.

Leave a Reply

Your email address will not be published. Required fields are marked *

error: Content is protected !!