ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾ ಪದಾಧಿಕಾರಿಗಳ ನೇಮಕ

ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾ ಪದಾಧಿಕಾರಿಗಳ ನೇಮಕ

ದಾವಣಗೆರೆ :ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಶ್ರೀ.ಶಾಮನೂರು ಶಿವಶಂಕರಪ್ಪನವರ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ರವರ ಮತ್ತು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ.ಮಂಜಪ್ಪನವರ ಶಿಫಾರಸ್ಸಿನಂತೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಜವಾಹರ್ ಬಾಲ್ ಮಂಚ್ ಕರ್ನಾಟಕದ ರಾಜ್ಯ ಅಧ್ಯಕ್ಷರಾದ ಮೈನುದ್ದೀನ್.ಹೆಚ್.ಜೆ ರವರು ದಾವಣಗೆರೆ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಿರುತ್ತಾರೆ ಎಂದು ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಜಿಕ್ರಿಯಾ ತಿಳಿಸಿದ್ದಾರೆ.
ಜವಾಹರ್ ಬಾಲ್ ಮಂಚ್ ಜಿಲ್ಲಾ ಅಧ್ಯಕ್ಷರಾಗಿ ಮೊಹಮ್ಮದ್ ಜಿಕ್ರಿಯಾ,ಸಂಚಾಲಕರಾಗಿ ಫಯಾಜ್ ಅಹ್ಮದ್,ಸಣ್ಣ ನಾಯ್ಕ್, ಸುರೇಶ್.ಎಂ.ಜಾಧವ್,ವಸಂತ್ ಕುಮಾರ್,ಸಲ್ಮಾ ಬಾನು,ಪ್ರೇಮಾ ಜಾಧವ್ ವೀರೇಶ್,ರಮೇಶ್,ಮಂಜುಸ್ವಾಮಿ ಕತ್ತಲಗೇರಿ, ಶಿಲ್ಪಾ ಪರಶುರಾಂ,ಶೋಯೆಬ್,ಬಸವಾಪಟ್ಟಣ ಬ್ಲಾಕ್ ಅಧ್ಯಕ್ಷರಾಗಿ ಗುರುಮೂರ್ತಿ,ಆಯ್ಕೆಯಾಗಿದ್ದಾರೆ.
ನೂತನ ಸಮಿತಿಯ ಸದಸ್ಯರುಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಅರಿತು ಸ್ಥಳೀಯ ನಾಯಕರುಗಳ ಜೊತೆಗೂಡಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಹಾಗೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸಲು ಎಲ್ಲಾ ಸದಸ್ಯರುಗಳಿಗೆ ಇಂದು ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ತಿಳಿಸಿದರು.
ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರುಗಳಿಗೆ ರಾಜ್ಯ ಅಧ್ಯಕ್ಷರಾದ ಮೈನುದ್ದೀನ್.ಹೆಚ್.ಜೆ, ಹಿರಿಯ ಕಾಂಗ್ರೆಸ್ ಮುಖಂಡರಾದ ನಂಜಾ ನಾಯ್ಕ್ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಅಮ್ಜದ್,ಚಿರಂಜೀವಿ,ಖಾಜಾ ಮೊಯಿನುದ್ದೀನ್,ಅವರು ಸನ್ಮಾನಿಸುವುದರ ಮೂಲಕ ಆದೇಶ ಪತ್ರ ನೀಡಿದರು ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ನ ಇರ್ಫಾನ್,ಸದ್ದಾಮ್,ವಾಜಿದ್,ಸುರೇಶ್,ಇನ್ನೂ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!