fire; ಶಾರ್ಟ್ ಸರ್ಕ್ಯೂಟ್; ಬಟ್ಟೆ ಅಂಗಡಿ ಭಸ್ಮ

ಸಂತೆಬೆನ್ನೂರು, ಅ.25: ಶಾರ್ಟ್ ಸರ್ಕ್ಯೂಟ್ ನಿಂದ ಉದ್ಭವಿಸಿದ ಕಿಡಿಯೊಂದು (fire) ಬಟ್ಟೆ ಅಂಗಡಿ ಮೇಲೆ ಬಿದ್ದು ಪೂರ್ತಿ ಅಂಗಡಿ ಭಸ್ಮವಾದ ಘಟನೆ ಬುಧವಾರ ಬೆಳಿಗ್ಗೆ ಸಂತೆಬೆನ್ನೂರಿನ ಬಾಂಬೆ ಬಿಗ್ ಬಜಾರ್ ಬಟ್ಟೆ ಅಂಗಡಿಯಲ್ಲಿ ನಡೆದಿದೆ.

ವಿದ್ಯುತ್ ಕಂಬಕ್ಕೆ ಹಕ್ಕಿ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಇದರಿಂದ ಹೊರಬಂದ ಕಿಡಿಯಿಂದ ಈ ಅನಾಹುತ ಸಂಭವಿಸಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ (fire) ನಂದಿಸುವ ಕಾರ್ಯಾಚರಣೆ ನಡೆಸಿದರೂ ಬಟ್ಟೆ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಲ್ಲದೇ ಪಕ್ಕದಲ್ಲಿದ್ದ ಐಶ್ವರ್ಯ ಹೋಟೆಲ್ ಗೂ ಬೆಂಕಿ ತಗುಲಿದ್ದು ಸಣ್ಣ ಪುಟ್ಟ ನಷ್ಟಗಳಾಗಿದೆ. ಅಲ್ಲೆ ಮಲಗಿದ್ದ ನಾಲ್ಕು-ಐದು ಜನರು ಈ ಅಪಘಾತದಿಂದ ಪಾರಾಗಿದ್ದು, ಪ್ರಾಣಕ್ಕೆ ಯಾವುದೇ ತೊಂದರೆಯಾಗಿಲ್ಲ.

kea; ಒಂದೇ ಸಂದರ್ಭದಲ್ಲಿ 2 ಪರೀಕ್ಷೆಗಳಿದ್ದರೆ ಒಂದೇ ಪರೀಕ್ಷೆ ಬರೆಯಿರಿ: ಕೆಇಎ

Leave a Reply

Your email address will not be published. Required fields are marked *

error: Content is protected !!