” ದಾವಣಗೆರೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಗೆ ಪ್ರಥಮ ಸ್ಥಾನ”
ಬೆಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ದಾವಣಗೆರೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ.
ಡಾ. ಆನಿಬೇಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಹಾಗೂ ಶಿಬಿರ ಕೇಂದ್ರ ದೊಡ್ಡಬಳ್ಳಾಪುರ (ಬೆಂಗಳೂರು) ನಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ 104 ನೇ ರಾಜ್ಯ ಪರಿಷತ್ ಸಭೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಾವಣಗೆರೆ ಜಿಲ್ಲಾ ಸಂಸ್ಥೆಗೆ ಬೆಂಗಳೂರು ವಿಭಾಗ ಮಟ್ಟದಲ್ಲಿ “ಉತ್ತಮ ಆಡಳಿತಕ್ಕೆ ಪ್ರಥಮ ಸ್ಥಾನ ಬಂದಿದೆ.
ವಿಪಿ ದೀನದಯಾಳು ನಾಯ್ಡು ಪಾರಿತೋಷಕವನ್ನು ಪಿಜಿಆರ್ ಸಿಂಧ್ಯ ರಾಜ್ಯ ಮುಖ್ಯ ಆಯುಕ್ತರವರು ನೀಡಿದರು. ಈ ಸಂದರ್ಭದಲ್ಲಿ ಮುರುಘರಾಜೇಂದ್ರ ಜೇ ಚಿಗಟೇರಿ ದಾವಣಗೆರೆ ಜಿಲ್ಲಾ ಮುಖ್ಯ ಆಯುಕ್ತರು. ಎ ಪಿ ಷಡಕ್ಷರಪ್ಪ ಜಿಲ್ಲಾ ಸ್ಕೌಟ್ ಆಯುಕ್ತರು, ಶ್ರೀಮತಿ ರತ್ನ ಜಿಲ್ಲಾ ಕಾರ್ಯದರ್ಶಿ, ಎಚ್ಎಸ್ ಸಿದ್ದೇಶ ಜಿಲ್ಲಾ ಸಹ ಕಾರ್ಯದರ್ಶಿಗಳು, ಲೀಡರ್ ಟ್ರೈನರ್ ಡಿ.ಬಸವರಾಜ್ ಮತ್ತು ಶ್ರೀಮತಿ ಅಶ್ವಿನಿ ಎಸ್. ಜಿ. ವಿ. ಇನ್ನು ಮುಂತಾದವರು ಉಪಸ್ಥಿತರಿದ್ದರು. ಎನ್. ಕೆ. ಕೊಟ್ರೇಶ್. ಸ್ಕೌಟ್ಸ್ ಜಿಲ್ಲಾ ಸಹಾಯಕ ಆಯುಕ್ತರು. ದಾವಣಗೆರೆ ಉಪಸ್ಥಿತರಿದ್ದರು.